DAKSHINA KANNADA
ನನ್ನ ಮಗನ ಹಂತಕರನ್ನು ಬಂಧಿಸದಂತೆ ಪೋಲೀಸರಿಗೆ ರಾಜಕಾರಣಿಗಳ ಒತ್ತಡವಿದೆಯೋ.. ಶರತ್ ತಂದೆ ತನಿಯಪ್ಪ ಮಡಿವಾಳ ಪ್ರತಿಕ್ರಿಯೆ.
ಪುತ್ತೂರು -ಜುಲೈ 4 ರಂದು ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ನಲ್ಲಿ ದುಷ್ಕರ್ಮಿಗಳಿಂದ ಕೊಲೆಯಾದ ಆರ್.ಎಸ್.ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ನಡೆದು ಇಂದಿಗೆ ಎಂಟು ದಿನಗಳು ಕಳೆದರೂ, ಆರೋಪಿಗಳ ಬಂಧನ ಮಾತ್ರ ನಡೆದಿಲ್ಲ. ಪೋಲೀಸರು ಆರೋಪಿಗಳನ್ನು ಬಂಧಿಸುತ್ತಾರೋ, ಬಿಡುತ್ತಾರೋ ಎನ್ನುವ ಸಂಶಯ ಇದೀಗ ಶರತ್ ಕುಟುಂಬವರ್ಗದಲ್ಲಿದೆ. ಶರತ್ ಹತ್ಯೆಯಾದ ಬಳಿಕ ಪೋಲೀಸರು ಶರತ್ ಮನೆಯವನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ನೆಲೆಯಲ್ಲಿ ಸಂಪರ್ಕಿಸಿಲ್ಲ. ಪೋಲೀಸರು ಈ ಬಗ್ಗೆ ಏನು ಮಾಡುತ್ತಿದ್ದಾರೆ ಎನ್ನುವ ಮಾಹಿತಿಯೂ ಇಲ್ಲ. ಒಂದು ವೇಳೆ ಪೋಲೀಸರಿಗೆ ಶರತ್ ಹತ್ಯೆ ನಡೆಸಿದ ಆರೋಪಿಗಳನ್ನು ಬಂಧಿಸಬಾರದು ಎನ್ನುವ ರಾಜಕಾರಣಿಗಳ ಒತ್ತಡವಿದ್ದರೂ ಇರಬಹುದು ಎನ್ನುವ ಸಂಶಯ ತನ್ನನ್ನು ಕಾಡುತ್ತಿದೆ ಎಂದು ಶರತ್ ತಂದೆ ತನಿಯಪ್ಪ ಮಡಿವಾಳ ಪ್ರತಿಕ್ರಿಯಿಸಿದ್ದಾರೆ.