LATEST NEWS
ಧರ್ಮಸಂಸದ್ ಮಿಸಲಾತಿ ವಿರುದ್ದವಾಗಿ ಭಾಷಣ ಅರ್ಧಕ್ಕೆ ತಡೆದ ಸಂಘಟಕರು
ಧರ್ಮಸಂಸದ್ ಮಿಸಲಾತಿ ವಿರುದ್ದವಾಗಿ ಭಾಷಣ ಅರ್ಧಕ್ಕೆ ತಡೆದ ಸಂಘಟಕರು
ಉಡುಪಿ ನವೆಂಬರ್ 26: ಉಡುಪಿಯಲ್ಲಿ ನಡೆಯುತ್ತಿರುವ ಧರ್ಮಸಂಸದ್ ನ ಗೋಷ್ಠಿಯಲ್ಲಿ ಮೀಸಲಾತಿ ವಿರುದ್ದವಾಗಿ ಮಾತನಾಡುತ್ತಿದ್ದ ಕಾಶಿ ಬನಾರಸ್ ನ ಶಂಕರಾಚಾರ್ಯ ಸ್ವಾಮಿ ನರೇಂದ್ರನ್ ಸರಸ್ವತಿ ಅವರ ಭಾಷಣವನ್ನು ಅರ್ಧಕ್ಕೆ ತಡೆದ ಸಂಘಟಕರು, ಮೀಸಲಾತಿ ಬಗ್ಗೆ ಪ್ರಸ್ತಾಪಿಸದಂತೆ ಸೂಚಿಸಿದ ಘಟನೆ ಇಂದಿನ ಧರ್ಮಸಂಸದ್ ನಲ್ಲಿ ನಡೆಯಿತು.
ಧರ್ಮಸಂಸದ್ ಗೋಷ್ಠಿಯಲ್ಲಿ ಮಾತನಾಡಿದ ಸ್ವಾಮಿ ನರೇಂದ್ರನ್ ಸರಸ್ವತಿ ಭಾರತದಲ್ಲಿ ಪ್ರತಿಭೆಯ ಆಧಾರದಲ್ಲಿ ಮೀಸಲಾತಿ ನೀಡಬೇಕೆ ಹೊರತು ಧರ್ಮ, ಜಾತಿ ಆಧಾರದಲ್ಲಿ ನೀಡಬಾರದು ಎಂದು ಹೇಳಿದರು. ದೇಶದಲ್ಲಿ ಜಾತಿ ಆಧಾರಿತ ಮೀಸಲಾತಿಯನ್ನು ನಿರ್ನಾಮ ಮಾಡಬೇಕು ಎಂದರು. ಈ ಸಂದರ್ಭ ಮಧ್ಯ ಪ್ರವೇಶಿಸಿದ ಸಂಘಟಕರು ಇಲ್ಲಿ ಮೀಸಲಾತಿ ಬಗ್ಗೆ ಪ್ರಸ್ತಾಪ ಮಾಡಬಾರದು ಎಂದು ಸ್ವಾಮಿಜಿಗೆ ಸೂಚಿಸಿದರು.
ನಂತರ ಭಾಷಣ ಮುಂದುವರೆಸಿದ ಸ್ವಾಮಿಜಿ ತೆರಿಗೆ ಭಾರತದಲ್ಲಿ ಸಮಾನ ನಾಗರೀಕ ಸಂಹಿತೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು. ಚೀನಾದ ರೀತಿಯಲ್ಲಿ ನಮ್ಮ ದೇಶದಲ್ಲೂ ಜನಸಂಖ್ಯೆ ನಿಯಂತ್ರ ಕಾಯಿದೆಯನ್ನು ಜಾರಿಗೆ ತರಬೇಕು ಎಂದು ಹೇಳಿದರು.