DAKSHINA KANNADA
ದೇಶದಾದ್ಯಂತ ಪದ್ಮಾವತಿ ಚಿತ್ರ ನಿಷೇಧಿಸಿ – ಪ್ರವೀಣ್ ಭಾಯ್ ತೊಗಾಡಿಯಾ

ದೇಶದಾದ್ಯಂತ ಪದ್ಮಾವತಿ ಚಿತ್ರ ನಿಷೇಧಿಸಿ – ಪ್ರವೀಣ್ ಭಾಯ್ ತೊಗಾಡಿಯಾ
ಮಂಗಳೂರು ನವೆಂಬರ್ 23: ಭಾರಿ ವಿವಾದಕ್ಕೆ ಎಡೆಮಾಡಿರುವ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿರುವ ಪದ್ಮಾವತಿ ಚಿತ್ರ ದೇಶದಾದ್ಯಂತ ನಿಷೇಧ ಆಗಬೇಕೆಂದು ವಿಎಚ್ ಪಿ ಅಂತರಾಷ್ಟ್ರೀಯ ಕಾರ್ಯದರ್ಶಿ ಪ್ರವೀಣ್ ಭಾಯ್ ತೊಗಾಡಿಯಾ ತಿಳಿಸಿದ್ದಾರೆ.
ನಾಳೆಯಿಂದ ಉಡುಪಿಯಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಧರ್ಮ ಸಂಸದ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಾ. ಪ್ರವೀಣ್ ಭಾಯ್ ತೊಗಾಡಿಯಾ, ಮೂರು ದಿನಗಳ ಕಾಲ ಉಡುಪಿಯಲ್ಲಿ ನಡೆಯಲಿರುವ ಧರ್ಮ ಸಂಸತದ್ ನಲ್ಲಿ ಅಸ್ಪೃಶ್ಯತೆ, ಗೋ ರಕ್ಷಣೆ, ಗೋ ರಕ್ಷಣೆ ಕುರಿತ ಕಾನೂನು ಮೊದಲಾದ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಹೇಳಿದರು.

ಉಡುಪಿಯ ಧರ್ಮಸಂಸದ್ ಪ್ರಮುಖ ವಿಚಾರ ಆಯೋಧ್ಯೆಯ ರಾಮ ಮಂದಿರ ನಿರ್ಮಾಣ ವಾಗಿದ್ದು, ಈ ಬಗ್ಗೆ ವಿಸ್ತ್ರತ ಚರ್ಚೆ ನಡೆಯಲಿದೆ ಎಂದು ಅವರು ಹೇಳಿದರು. ಅಲ್ಲದೆ ಗೋ ಹತ್ಯೆ ನಿಷೇಧ ಕುರಿತು ಧರ್ಮ ಸಂಸದ್ ನಲ್ಲಿ ಚರ್ಚೆ ನಡೆಸಲಾಗುವುದು ಎಂದರು.