LATEST NEWS
ದೇವರು ಬಯಸದೆ ದೇವಸ್ಥಾನಕ್ಕೆ ತೆರಳಲು ಸಾಧ್ಯವಿಲ್ಲ – ವಸುಂಧರಾ ರಾಜೆ
ದೇವರು ಬಯಸದೆ ದೇವಸ್ಥಾನಕ್ಕೆ ತೆರಳಲು ಸಾಧ್ಯವಿಲ್ಲ – ವಸುಂಧರಾ ರಾಜೆ
ಉಡುಪಿ ನವೆಂಬರ್ 20: ರಾಜಸ್ಥಾನ ಸಿಎಂ ವಸುಂಧರಾ ರಾಜೆ ಇಂದು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಇದಕ್ಕೂ ಮೊದಲು ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದು ನವ ಚಂಡಿಕಾ ಯಾಗದಲ್ಲಿ ಪಾಲ್ಗೊಂಡಿದ್ದರು.
ನಂತರ ಅನೀರಿಕ್ಷಿತವಾಗಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಅವರು ಶ್ರೀಕೃಷ್ಣನ ದರ್ಶನ ಪಡೆದು ಪೇಜಾವರ ಶ್ರೀಗಳ ಆಶೀರ್ವಾದ ಪಡೆದರು.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಾಜಸ್ಥಾನ ಸಿಎಂ ವಸುಂಧರಾ ರಾಜೆ ಕೃಷ್ಣಮಠಕ್ಕೆ ಇದು ನನ್ನ ಪ್ರಥಮ ಭೇಟಿಯಾಗಿದ್ದು ಈ ಭೇಟಿ ಎಂದೂ ಮರೆಯದಂತಹ ಭೇಟಿಯಾಗಿದೆ ಎಂದರು.
ನಮ್ಮ ಇಡೀ ಕುಟುಂಬ ಪೇಜಾವರ ಶ್ರೀಗಳ ನಿಕಟವರ್ತಿಗಳು, ನಾಲ್ಕು ತಲೆಮಾರಿನಿಂದ ಉಡುಪಿಯ ಶ್ರೀಕೃಷ್ಣ ಮಠದ ಜೊತೆ ನಿಕಟ ಬಾಂಧವ್ಯವನ್ನು ನಮ್ಮ ಕುಟುಂಬ ಹೊಂದಿದೆ ಎಂದು ಹೇಳಿದರು. ಪೇಜಾವರ ಶ್ರೀಗಳ ಐದನೆ ಪರ್ಯಾಯದ ಸಂದರ್ಭದಲ್ಲಿ ಭಾಗಿಯಾಗಿರುವುದು ನನ್ನ ಅದೃಷ್ಟ ಎಂದು ವಸುಂಧರಾ ರಾಜೆ ತಿಳಿಸಿದರು. ನಾನು ನನ್ನ ಮಗ ಶ್ರೀಗಳ ಆಶೀರ್ವಾದ ಪಡೆದಿದ್ದೇವೆ ಎಂದು ತಿಳಿಸಿದರು.
ಕೊಲ್ಲೂರು ದೇವಸ್ಥಾನಕ್ಕೆ ಬರಲು ಸಾಕಷ್ಟು ಬಾರಿ ಪ್ರಯತ್ನ ಪಟ್ಟಿದ್ದೆ ಆದರೆ ಸಮಯ ಕೂಡಿ ಬಂದಿರಲಿಲ್ಲ ಎಂದರು. ದೇವರು ಬಯಸದೆ ದೇವಸ್ಥಾನಕ್ಕೆ ತೆರಳಲು ಸಾಧ್ಯವಿಲ್ಲ ಹಾಗಾಗಿ ಇಂದು ಮೂಕಾಂಬಿಕೆಯ ದರ್ಶನ ಪಡೆದು ಕೃತಾರ್ಥನಾದೆ ಎಂದು ರಾಜಸ್ಥಾನ ಸಿಎಂ ವಸುಂಧರಾ ರಾಜೇ ಹೇಳಿದ್ದಾರೆ.
ಪದ್ಮಾವತಿ ಚಿತ್ರದ ಕೇಳಿದ ಪ್ರಶ್ನೆಗೆ ವಸುಂಧರಾ ರಾಜೆ ಅವರು ಪ್ರತಿಕ್ರಿಯಿಸಲು ನಿರಾಕರಿಸಿದರು.