LATEST NEWS
ದೇವಸ್ಥಾನಕ್ಕೆ ಎರಡು ಲಕ್ಷ ರೂಪಾಯಿ ದೇಣಿಗೆ ನೀಡಿದ ಭಿಕ್ಷುಕಿ

ದೇವಸ್ಥಾನಕ್ಕೆ ಎರಡು ಲಕ್ಷ ರೂಪಾಯಿ ದೇಣಿಗೆ ನೀಡಿದ ಭಿಕ್ಷುಕಿ
ಮೈಸೂರು. ನವೆಂಬರ್ ೨೧. ಮೈಸೂರಿನಲ್ಲಿ ವೃದ್ಧ ಭಿಕ್ಷುಕಿಯೊಬ್ಬಳು ಎರಡು ಲಕ್ಷ ರೂಪಾಯಿ ದೇಣಿಗೆಯನ್ನು ದೇವಾಲಯಕ್ಕೆ ನೀಡಿರುವ ಘಟನೆ ನಡೆದಿದೆ. ಮೈಸೂರಿನ ವಾಣಿ ವಿಲಾಸ ಮೊಹಲ್ಲಾದ ಮಾತ್ರ ಮಂಡಳಿಯ ವೃತ್ತದ ಬಳಿ ಇರುವ ಪ್ರಸನ್ನ ಆಂಜನೇಯ ಸ್ವಾಮಿ ದೇವಾಲಯದ ಬಳಿ ಭಿಕ್ಷೆ ಬೇಡುವ ತೊಂಬತ್ತು ವರ್ಷ ಪ್ರಾಯದ ಎಂ.ವಿ ಸೀತಾ ಅವರು ಭಿಕ್ಷೆ ಬೇಡಿ ಸಂಗ್ರಹಿಸಿದ ಎರಡು ಲಕ್ಷ ರೂಪಾಯಿಗಳನ್ನು ದೇವಾಲಯಕ್ಕೇ ದೇಣಿಗೆಯಾಗಿ ನೀಡಿದ್ದಾರೆ.
ತಮಗೆ ವಯಸ್ಸಾಗುತ್ತಿದ್ದಂತೆ ಹತ್ತು ವರ್ಷಗಳ ಹಿಂದೆ ಬಂಧು ಬಳಗದವರೆಲ್ಲರೂ ಇವರನ್ನು ದೂರ ಮಾಡಿದ್ದರು ಆಗ ಭಿಕ್ಷೆ ಬೇಡಲು ಆರಂಭಿಸಿದರು. ಮೂರು ವರ್ಷಗಳ ಹಿಂದೆ ದೇವಾಲಯದ ಜೀರ್ಣೋದ್ಧಾರಕ್ಕಾಗಿ 30 ಸಾವಿರ ಅನಂತರ ಮತ್ತೆ 30 ಸಾವಿರ ರೂಪಾಯಿಗಳನ್ನು ನೀಡಿದ್ದರು ಇದೀಗ ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಎಲ್ಲ ಎರಡು ಲಕ್ಷ ರೂಪಾಯಿಗಳನ್ನು ದೇವಾಲಯಕ್ಕೇ ಸಮರ್ಪಿಸಿದ್ದಾರೆ.
