LATEST NEWS
ದೀಪಕ್ ರಾವ್ ಮೃತ ದೇಹವನ್ನ ಗೌಪ್ಯವಾಗಿ ಕಾಟಿಪಳ್ಳಕ್ಕೆ ಸಾಗಿಸಿದ ಪೊಲೀಸರು

ದೀಪಕ್ ರಾವ್ ಮೃತ ದೇಹವನ್ನ ಗೌಪ್ಯವಾಗಿ ಕಾಟಿಪಳ್ಳಕ್ಕೆ ಸಾಗಿಸಿದ ಪೊಲೀಸರು
ಮಂಗಳೂರಿ ಜನವರಿ 4: ನಿನ್ನೆ ಸುರತ್ಕಲ್ ನ ಕಾಟಿಪಳ್ಳದಲ್ಲಿ ದುಷ್ಕರ್ಮಿಗಳಿಂದ ಕೊಲೆಗೀಡಾಗಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತ ದೀಪಕ್ ರಾವ್ ಅವರ ಮೃತ ದೇಹವನ್ನು ಇಂದು ಬೆಳಿಗ್ಗೆ ಪೊಲೀಸರು ಗೌಪ್ಯವಾಗಿ ಕಾಟಿಪಳ್ಳಕ್ಕೆ ಸಾಗಿಸಿದ್ದಾರೆ. ಇದೀಗ ದೀಪಕ್ ಅವರ ಮನೆ ಎದುರು ಮೃತ ದೇಹ ಹೊತ್ತ ಅಂಬ್ಯುಲೆನ್ಸ್ ತಲುಪಿದ್ದು, ಹಿಂದೂ ಸಂಘಟನೆಯ ಕಾರ್ಯಕರ್ತರು ಹಾಗೂ ಮೃತನ ಸಂಬಂಧಿಕರು ಮೃತ ದೇಹವನ್ನು ಅಂಬ್ಯುಲೆನ್ಸ್ ನಿಂದ ಕೆಳಗಿಳಿಸಲು ನಿರಾಕರಿಸಿದ್ದಾರೆ.
ಪೊಲೀಸರ ಈ ಕ್ರಮದ ವಿರುದ್ದ ಬಿಜೆಪಿ ಹಾಗು ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತ ಪಡಿಸಿದ್ದು. ದೀಪಕ್ ರಾವ್ ಅವರ ಮೃತ ದೇಹದ ಶವಯಾತ್ರೆಗೆ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಸುರತ್ಕಲ್ , ಕಾಟಿಪಳ್ಳ ಪರಿಸರದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ .
ನಿನ್ನೆ ಹತ್ಯೆಗೀಡಾಗಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತ ದೀಪಕ್ ರಾವ್ ಅವರ ಮೃತ ದೇಹ ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿಡಲಾಗಿತ್ತು.

ಇಂದು ಹಿಂದೂ ಸಂಘಟನೆಯ ಕಾರ್ಯಕರ್ತು ಮೃತದೇಹವನ್ನು ಆಸ್ಪತ್ರೆಯಿಂದ ಕಾಟಿಪಳ್ಳದವರೆಗೆ ಶವಯಾತ್ರೆ ನಡೆಸಲು ನಿರ್ಧರಿಸಿದ್ದರು. ಅಲ್ಲದೆ ಸುರತ್ಕಲ್ ಪರಿಸರದಲ್ಲಿ ಹರತಾಳಕ್ಕೆ ಕರೆ ನೀಡಲಾಗಿತ್ತು.
ಈ ನಡುವೆ ನಿನ್ನೆ ರಾತ್ರಿ ನಗರದ ಕೆಲವು ಕಡೆ ಅಹಿತಕರ ಘಟನೆಗಳು ನಡೆದ ಹಿನ್ನಲೆಯಲ್ಲಿ ಪೊಲೀಸರು ಕರ್ನಾಟಕ ಪೊಲೀಸ್ ಆಕ್ಟ್ ಕಲಂ 35 ರ ಅನ್ವಯ ನಿರ್ಬಂಧಕಾಜ್ಞೆಯನ್ನು ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ವಿಧಿಸಿದ್ದರು.
ಈ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆಯೇ ಪೊಲೀಸರು ಮೃತ ದೇಹವನ್ನು ಕಾಟಿಪಳ್ಳಕ್ಕೆ ಸಾಗಿಸಿದ್ದಾರೆ.