UDUPI
ತಿರಂಗ್ ನಲ್ಲಿ ಶೋಭಿಸಿದ ಉಡುಪಿ ಕೃಷ್ಣ….

ಉಡುಪಿ,ಅಗಸ್ಟ್ 15:ಸ್ವಾತಂತ್ರೋತ್ಸವದ ಸಂಭ್ರಮದ ಕೇವಲ ಸಂಘ-ಸಂಸ್ತೆಗಳಿಗೆ ಮಾತ್ರ ಸೀಮಿತವಾಗದೆ ದೇವಾಲಯಗಳಲ್ಲೂ ಸ್ವಾತಂತ್ರದ ಕಂಪು ಕಂಡು ಬಂತು. ರಾಜ್ಯದ ಪ್ರಮುಖ ದೇಗುಲವಾದ ಉಡುಪಿ ಶ್ರೀಕೃಷ್ಣ ದೇವಾಲಯದಲ್ಲಿ ವಿರಾಜಮಾನನಾದ ಕಡೆಗೋಲು ಕೃಷ್ಣ ಇಂದು ತ್ರಿರಂಗ ವಸ್ತ್ರಗಳ ಅಲಂಕಾರದ ಮೂಲಕ ಗಮನ ಸೆಳೆಯುತ್ತಿದ್ದ.
ಪೇಜಾವರ ಮಠದ ಕಿರಿಯ ಶ್ರೀಗಳಾದ ವಿಶ್ವಪ್ರಸನ್ನ ಶ್ರೀಗಳು ಕೃಷ್ಣನಿಗೆ ಈ ರೀತಿಯ ವಿಭಿನ್ನ ಅಲಂಕಾರ ನೆರವೇರಿಸಿದ್ದರು. ಕೇಸರಿ ಮುಂಡಾಸು, ಬಿಳಿ ಅಂಗಿ ಹಾಗೂ ಹಸಿರು ಕಚ್ಚೆಯಲ್ಲಿ ಕಂಗೊಳಿಸುತ್ತಿದ್ದ ಕೃಷ್ಣ ಭಕ್ತರ ವಿಶೇಷ ಆಕರ್ಷಣೆಯಾಗಿದ್ದ.

Continue Reading