Connect with us

    BELTHANGADI

    ತಾಯಿ-ಮಗುವಿನ ಪ್ರಾಣ ಉಳಿಸಲು ಗ್ರಾಮ ಪಂಚಾಯತ್ ನೌಕರರ ಹೋರಾಟ…!

    ಮಂಗಳೂರು, ಜುಲೈ. 27 : ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸ್ಥಳಿಯಾಡಳಿತ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಗ್ರಾಮ ಪಂಚಾಯತ್‍ನಲ್ಲಿ ಕಳೆದ ಹಲವು ವರ್ಷಗಳಿಂದ ಪುಷ್ಪಾವತಿಯವರು  ಕನಿಷ್ಠ ವೇತನಕ್ಕೆ ಗರಿಷ್ಠ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ, ಸರಕಾರದ ಹತ್ತು ಹಲವು ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವಂತಹ ಮತ್ತು ಮಾತೃ ಇಲಾಖೆಯ ಅಭಿವೃಧ್ಧಿಗೆ ಸೇವೆ ಸಲ್ಲಿಸುತ್ತಿದ್ದ ಹಾಗೂ ಸರಕಾರದ ಪರವಾಗಿ ಕಾರ್ಯನಿರ್ವಹಿಸುತ್ತಿದ್ದ ಗ್ರಾಮ ಪಂಚಾಯತ್‍ನ ಸಿಬ್ಬಂದಿ ಪುಷ್ಪವತಿ ಹೆಚ್1ಎನ್1 ಜ್ವರದಿಂದ ಬಳಲುತ್ತಿದ್ದು ದಿನಾಂಕ 17-07-2017 ರಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ತುಂಬು ಗರ್ಬಿಣಿಯಾದ ಅವರಿಗೆ ವಾರದ ಹಿಂದೆ ತುರ್ತು ಶಸ್ತ್ರಚಿಕಿತ್ಸೆ ಮೂಲಕ ಮಗುವನ್ನು ಹೊರತೆಗೆದು ಹೆಚ್ಚಿನ ಚಿಕಿತ್ಸೆಗೆ ಮಗುವನ್ನು ತೀರ್ವ ನಿಗಾ ಘಟಕದಲ್ಲಿ ಇರಿಸಿದ್ದ್ದಾರೆ ಮತ್ತು ಪುಷ್ಪಾವತಿಯವರನ್ನು ಸೂಕ್ತ ಚಿಕಿತ್ಸೆಗಾಗಿ (ICU) ತೀರ್ವ ನಿಗಾ ಘಟಕದಲ್ಲಿರಿಸಿದ್ದು ಸಾವು ಬದುಕಿನ ಮದ್ಯ ಹೋರಾಟ ಮಾಡುತ್ತಿದ್ದಾರೆ. ರಾಜ್ಯ ಸರಕಾರದ ಪಂಚಯತ್ ರಾಜ್ ಇಲಾಖೆಯಡಿ ಸ್ಥಳಿಯಾಡಳಿತ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯತ್ ನೌಕರರಿಗೆ (ಇಎಸ್‍ಐ) ಯಾವುದೇ ವೈದಕೀಯ ಬದ್ರತೆಯ ಸೌಲಭ್ಯವಿಲ್ಲದ ಕಾರಣ ತುಂಬಾ ಬಡತನದ ಕುಟುಂಬವಾದ ಅವರಿಗೆ ವೈದಕೀಯ ಚಿಕಿತ್ಸೆಯ ವೆಚ್ಚ ಭರಿಸಲು ಅಶಕ್ತರಾಗಿದ್ದಾರೆ, ಸರಕಾರದಿಂದ ಗ್ರಾಮ ಪಂಚಾಯತ್ ನೌಕರರಿಗೆ ಯಾವುದೇ ವೈದಕೀಯ ಚಿಕಿತ್ಸೆಗೆ ಸವಲತ್ತು ಇರದ ಕಾರಣ ಈಗಾಗಲೇ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃಧ್ಧಿ ಸಂಘದಿಂದ ತಾಯಿ ಮತ್ತು ಮಗುವಿನ ಜೀವ ಉಳಿಸಲು ಕಳೆದ 8 – 10 ದಿನಗಳಿಂದ ಆಸ್ಪತ್ರೆಯ ವೆಚ್ಚ ಬರಿಸಲು ಹಣದ ನೆರವು ನೀಡಲು ವಿವಿದ ಗ್ರಾಮ ಪಂಚಾಯತ್ ನೌಕರರ ನೆರವು ಪಡೆದು ಒಟ್ಟು ರೂ. 1,50,000.00 ಮೊತ್ತದ ಸಹಾಯಧನವನ್ನು ಶ್ರೀಮತಿ ಪುಷ್ಪವತಿಯವರ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ, ಗ್ರಾಮ ಪಂಚಾಯತ್ ನೌಕರರಿಗೆ ಸರಕಾರದಿಂದ ಯಾವುದೇ ವೈದಕೀಯ ಚಿಕಿತ್ಸೆಗೆ ಬದ್ರತೆ ಸಹಕಾರ ಬೆಂಬಲ ದೊರೆಯದೇ ಇದ್ದರು ಗ್ರಾಮ ಪಂಚಾಯತ್ ನೌಕರರೇ ಒಟ್ಟಾಗಿ ತಾಯಿ ಮಗುವನ್ನು ಉಳಿಸಲು ಹಗಲಿರುಳು ಶ್ರಮ ಪಡುತ್ತಿದ್ದುದ್ದು, ಇದು ಒಬ್ಬ ಪುಷ್ಪಾವತಿಯ ನೋವಲ್ಲ ಇಡೀ ಕರ್ನಾಟಕ ರಾಜ್ಯದ ಗ್ರಾಮ ಪಂಚಾಯತ್ ನೌಕರರ ನೋವು ಮತ್ತು ಸಮಸ್ಯೆಯಾಗಿದೆ. ರಾಜ್ಯ ಸರಕಾರ ಗ್ರಾಮ ಪಂಚಾಯತ್ ನೌಕರರ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಪುಷ್ಪವತಿ ಸೇರಿದಂತೆ ಎಲ್ಲಾ ಪಂಚಾಯತ್ ನೌಕರರಿಗೂ ಸೇವಾ ಭದ್ರತೆ, ಆರೋಗ್ಯ ಮತ್ತು ಕುಟುಂದ ಬದ್ರತೆಗಾಗಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *