UDUPI
ತರಕಾರಿ ಕೈತೋಟದಿಂದ ಆರೋಗ್ಯ ಲಾಭ

ತರಕಾರಿ ಕೈತೋಟದಿಂದ ಆರೋಗ್ಯ ಲಾಭ
ಉಡುಪಿ, ಡಿಸೆಂಬರ್ 19: ನಮ್ಮದೇ ಜಾಗದಲ್ಲಿ ನಾವೇ ಸ್ವತ: ನಮ್ಮ ಉಪಯೋಗಕ್ಕೆ ತರಕಾರಿಗಳನ್ನು ಬೆಳೆಸುವ ವಿಧಾನವೇ ಕೈತೋಟದ ಮೂಲ ಉದ್ದೇಶವೆಂದು ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ತಿಳಿಸಿದರು. ಅವರು ಇಂದು ಅಂಬಲಪಾಡಿಯ ಪ್ರಗತಿ ಸೌಧದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಸಭಾಂಗಣದಲ್ಲಿ ನಡೆದ 2017-18 ನೇ ಸಾಲಿನ ಕೈತೋಟ ಹಾಗೂ ತಾರಸಿತೋಟ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈಗಿನ ಜನತೆ ಇರುವ ಜಾಗದಲ್ಲಿ ಬಿಡ್ದಿಂಗ್, ಇಂಟರ್‍ಲಾಕ್‍ಗಳನ್ನು ತಮ್ಮ ಮನೆಯಂಗಳದಲ್ಲಿ ಹಾಕಲು ಇಚ್ಛಿಸುತ್ತಾರೆ. ಮನೆಯಂಗಳದಲ್ಲಿ ಇರುವ ಒಂದಿಷ್ಟು ಜಾಗದಲ್ಲಿ ಕೈತೋಟ ರಚಿಸಿ ತರಕಾರಿಯನ್ನು ಬೆಳೆಸಿದರೆ ಅದು ನಮ್ಮ ಆರೋಗ್ಯಕ್ಕೂ ಒಳ್ಳೆಯದು ಹಾಗೂ ರಾಸಾಯಿನಿಕ ಗೊಬ್ಬರಗಳನ್ನು ಬಳಸದೆ ಸಾವಯವ ಗೊಬ್ಬರವನ್ನು ಬಳಸಿ ತರಕಾರಿ ಕೃಷಿ ಮಾಡಿದರೆ ಆರೋಗ್ಯವಂತರಾಗಿರುತ್ತೇವೆ , ಅಂಗಳದಲ್ಲಿ ಜಾಗವಿಲ್ಲದಿದ್ದರೆ ಮನೆಯ ತಾರಸಿ ಮೇಲೆ ಕೈತೋಟ ರಚಿಸಿಕೊಳ್ಳಬಹುದು ಎಂದು ನಗರಸಭೆ ಅಧ್ಯಕ್ಷರು ಹೇಳಿದರು.
ತೋಟಗಾರಿಕಾ ಇಲಾಖೆ , ನಗರ ಪ್ರದೇಶದಲ್ಲಿ ತಾರಸಿ ತೋಟ ನಿರ್ಮಿಸಲು ತರಬೇತಿ ನೀಡುತ್ತಿದ್ದು, ಜನರು ಇದರ ಪ್ರಯೋಜನ ಪಡೆಯಬೇಕು. ಇದರ ಜೊತೆಗೆ ಮನೆಯ ಹಸಿ ಕಸವನ್ನು ಪೈಪ್ ಕಾಂಪೋಸ್ಟ್ ಮೂಲಕ ಗೊಬ್ಬರವನ್ನಾಗಿ ಪರಿವರ್ತಿಸುವ ಬಗ್ಗೆಯೂ ಅಧ್ಯಕ್ಷರು ಮಾಹಿತಿ ನೀಡಿದರು.
