DAKSHINA KANNADA
ಜಮೀನಿಗಾಗಿ ಲಂಚ,ಇನ್ಸ್ ಪೆಕ್ಟರ್ ದಯಾನಂದ್ ಎಸಿಬಿ ಬಲೆಗೆ

ಸುಳ್ಯ,ಆಗಸ್ಟ್ 21 : ಜಮೀನಿಗಾಗಿ ಲಂಚ ಪಡೆಯುತ್ತಿದ್ದ ಇನ್ಸ್ ಪೆಕ್ಟರ್ ಪೋಲಿಸ್ ಬಲೆಗೆ ಬಿದ್ದಿದ್ದಾನೆ, ರೆವೆನ್ಯೂ ಇನ್ಸ್ ಪೆಕ್ಟರ್ ದಯಾನಂದ್ ಅವರೇ ಎಸಿಬಿ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿ. 94 c ಅಡಿಯಲ್ಲಿ ಜಾಗ ಮಂಜೂರು ಮಾಡಲು ಲಂಚ ಸ್ವೀಕರಿಸುತ್ತಿದ್ದ ಈತ ಭ್ರಷ್ಚಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ. ಸುಳ್ಯ ತಾಲೂಕಿನ ಪಂಜ ನಾಡಕಛೇರಿಯ ರೆವೆನ್ಯೂ ಇನ್ಸ್ ಪೆಕ್ಟರ್ ದಯಾನಂದ್ ಎಸಿಬಿ ಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಧಿಕಾರಿಯಾಗಿದ್ದು,
ಹರೀಶ್ ಎನ್ನುವ ವ್ಯಕ್ತಿಯಿಂದ 9 ಸೆಂಟ್ಸ್ ಜಾಗವನ್ನು 94c ಮಂಜೂರು ಮಾಡುವುದಕ್ಕಾಗಿ ದಯಾನಂದ್ 8 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದು, ಈ ವಿಚಾರವನ್ನು ಮೊದಲೇ ಎಸಿಬಿ ಪೋಲೀಸರ ಗಮನಕ್ಕೆ ತಂದಿದ್ದ ಹರೀಶ್ ಇಂದು ಹಣ ನೀಡುವುದಾಗಿ ದಯಾನಂದ್ ಗೆ ತಿಳಿಸಿದ್ದರು. ಈ ಹಿನ್ನಲೆಯಲ್ಲಿ ಹಣ ಸ್ವೀಕರಿಸುತ್ತಿದ್ದಾಗ ಎಸಿಬಿ ಪೋಲೀಸರು ದಯಾನಂದ ಅವರನ್ನು ವಶಕ್ಕೆ ಪಡೆದಿದ್ದಾರೆ.