ಕೊಡಗಿನಲ್ಲಿ ಧಾರಾಕಾರ ಮಳೆ 2 ಮನೆ ಕುಸಿತ

ಕೊಡಗು ಅಗಸ್ಟ್ 29: ರಾಜ್ಯದ ಕರಾವಳಿ ಸೇರಿದಂತೆ ಇತರ ಭಾಗಗಳಲ್ಲಿ ಕಳೆದ ಒಂದು ವಾರದಿಂದ ಭಾರಿ ಮಳೆಯಾಗುತ್ತಿದೆ.
ನಿನ್ನೆಯಿಂದ ಕೊಡಗು ಸೇರಿದಂತೆ ಮಡಿಕೇರಿಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಸುರಿಯುತ್ತಿರುವ ಭಾರೀ ಮಳೆ 2 ಮನೆಗಳು ಕುಸಿದ ಘಟನೆ ಕೊಡಗಿನಲ್ಲಿ ನಡೆದಿದೆ.

ಕಳೆದ ರಾತ್ರಿ ಮಡಿಕೇರಿಯ ಮಲ್ಲಿಕಾರ್ಜುನ ನಗರದಲ್ಲಿ ಮನೆ ಕುಸಿದ ಘಟನೆ ನಡೆದಿದ್ದು , ಈ ಮನೆ ಧನು ಹಾಗೂ ನರಸಮ್ಮ ಎಂಬವರಿಗೆ ಸೇರಿದ ಮನೆ ಎಂದು ತಿಳಿದು ಬಂದಿದೆ. ಭಾರಿ ಮಳೆಗೆ ತಡರಾತ್ರಿ 12.40ಕ್ಕೆ ಮನೆ ಕುಸಿದಿದೆ.
ಮನೆಯಲ್ಲಿ ನಾಲ್ಕು ಮಕ್ಕಳು ಸೇರಿದಂತೆ ಮನೆಯಲ್ಲಿದ್ದವರು ಅದೃಷ್ಠವಶಾತ ಯಾವುದೇ ಹಾನಿಯಾಗದೇ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಇದೇ ರೀತಿ ಬೆಳಿಗ್ಗೆ 6 ಗಂಟೆಗೆ ನರಸಮ್ಮ ಎಂಬವರ ಮನೆ ಭಾರಿ ಮಳೆಗೆ ಕುಸಿದಿದೆ. ನರಸಮ್ಮ ಅವರ ಮನೆಯಲ್ಲಿದ್ದ ಸಾಮಾಗ್ರಿಗಳಿಗೆ ಹಾನಿಯಾಗಿದ್ದು ಯಾವುದೇ ಪ್ರಾಣಾಪಾಯವಾಗಿಲ್ಲ.

Continue Reading