MANGALORE
ಕೊಂ.ಸಾ.ಅಕಾಡೆಮಿ ನೂತನ ಅಧ್ಯಕ್ಷರಾಗಿ ಆರ್ ಪಿ. ನಾಯ್ಕ ಅಧಿಕಾರ ಸ್ವೀಕಾರ
ಮಂಗಳೂರು, ಜುಲೈ 14: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಗೆ ನೂತನ ಅಧ್ಯಕ್ಷರಾಗಿ ಆರ್.ಪಿ.ನಾಯ್ಕ ಇಂದು ಮಂಗಳೂರಿನ ಅಕಾಡೆಮಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ನೂತನ ಅಧ್ಯಕ್ಷರಾದ ಆರ್.ಪಿ.ನಾಯ್ಕ ಇವರನ್ನು ಹೂಹಾರ, ಗುಚ್ಚಗಳನ್ನು ನೀಡಿ, ಸ್ವಾಗತಿಸಿ, ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಜ್ಯದ ಸಮಸ್ತ ಕೊಂಕಣಿ ಜನರ ಅಶಯದಂತೆ ಎಲ್ಲಾ ಪ್ರದೇಶ ಜಾತಿ ವರ್ಗಗಳಿಗೆ ಸಮಾನ ಪ್ರಾಶಸ್ತ್ಯ ನೀಡಿ ಕೊಂಕಣಿ ಭಾಷೆ ಸಂಸ್ಕೃತಿಯ ಅಭಿವೃದ್ಧಿಗಾಗಿ ಮುತುವರ್ಜಿ ವಹಿಸುವುದಾಗಿ ಭರವಸೆ ನೀಡಿದರು. ಸದ್ಯದಲ್ಲೇ ಹತ್ತು ಮಂದಿ ಸದಸ್ಯರ ತಂಡವು ತಮ್ಮನ್ನು ಸೇರಲಿದ್ದು ಮುಂದೆ ಆಕಾಡೆಮಿಯ ಕಾರ್ಯಚಟುವಟಿಕೆಗಳು ಭರದಿಂದ ಸಾಗಲಿವೆ ಎಂದು ತಿಳಿಸಿದರು. ಅಕಾಡೆಮಿಯ ಮಾಜಿ ಅಧ್ಯಕ್ಷರುಗಳಾದ, ಎರಿಕ್ ಒಝೇರಿಯೊ, ರೊಯ್ ಕ್ಯಾಸ್ತೆಲಿನೊ, ರಿಜಿಸ್ಟ್ರಾರ್, ಡಾ.ಬಿ.ದೇವದಾಸ್ ಪೈ ಹಾಗೂ ಮಂಗಳೂರಿನ ಸ್ಥಳೀಯ ಗಣ್ಯರಾದ ಪೌಲ್ ಮೊರಾಸ್, ಡಾ.ಮೋಹನ್ ಪೈ, ವೆಂಕಟೇಶ್ ಬಾಳೀಗಾ, ಗೀತಾ ಸಿ. ಕಿಣಿ, ವಸಂತಿ ಅರ್ ನಾಯ್ಕ್ ಓಂ ಗಣೇಶ್, ಅರುಣ್ ಶೇಟ್, ಚಂದ್ರಿಕ ಮಲ್ಯ, ಎಮ್. ಅರ್ ಕಾಮತ್, ಸ್ಟ್ಯಾನ್ಲಿ ಡಿಕುನ್ಹ, ವಿಠಲ್ ಕುಡ್ವ, ವಿದ್ಯಾ ಕಾಮತ್, ವಿಕ್ಟರ್ ಮಥಾಯಸ್, ಪ್ರವೀಣ್ ಕಾಮತ್, ನರಸಿಂಹ ಶೆಣೈ, ಸಂತೋಷ್ ಶೆಣೈ, ಕಾರವಾರದಿಂದ ಸುರೇಶ್ ನಾಯ್ಕ, ನಾಗೇಶ್ ಅರ್ ನಾಯ್ಕ, ಎನ್ ಅರ್.ನಾಯ್ಕ ದಾಂಡೇಲಿ ಇವರುಗಳು ಉಪಸ್ಥಿತರಿದ್ದರು.