UDUPI
ಕೃಷಿ ಹೊಂಡ ರಚನೆಗೆ ಕೃಷಿ ಸಚಿವರಿಂದ ಚಾಲನೆ
ಕೃಷಿ ಹೊಂಡ ರಚನೆಗೆ ಕೃಷಿ ಸಚಿವರಿಂದ ಚಾಲನೆ
ಉಡುಪಿ, ಡಿಸೆಂಬರ್ 26 : ರಾಜ್ಯದ ಕೃಷಿ ಸಚಿವ ಕೃಷ್ಣ ಬೈರೇಗೌಡ ಇವರು ಕರ್ನಾಟಕ ಸರಕಾದ ಮಹತ್ವಾಕಾಂಕ್ಷೆಯ ಕೃಷಿ ಭಾಗ್ಯ ಯೋಜನೆಯನ್ವಯ ಉಪ್ಪೂರು ಗ್ರಾಮದ ರತ್ನಾಕರ ಶೆಟ್ಟಿ ಇವರ ತಾಲೂಕಿನಲ್ಲಿ ರಚಿಸಿದ 21-21-3 ಮೀ ಅಳತೆಯ ಕೃಷಿ ಹೊಂಡ ರಚನೆಗೆ ಚಾಲನೆ ನೀಡಿದರು.
ಕೃಷಿ ಭಾಗ್ಯ ಯೋಜನೆ ಚಾಲನೆ ನೀಡಿದ ಕೃಷಿಸಚಿವರು, ಕೃಷಿ ಭಾಗ್ಯ ಯೋಜನೆಯಡಿ ಜಲಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಲು ಹಾಗೂ ಸಂಗ್ರಹಿಸಿದ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಪಂಪ್‍ಸೆಟ್, ಪಾಲಿಥೀನ್ ಹೊದಿಕೆ, ಸ್ಟ್ರಿಂಕ್ಲರ್ ಬಳಕೆಗೆ ರೈತರಿಗೆ ಸಹಾಯಧನ ಅವಕಾಶವಿರುತ್ತದೆ. ಹೆಚ್ಚು ಮಳೆ ಬೀಳುವ ಪ್ರದೇಶವಾದರೂ ಕೂಡ ಉಡುಪಿ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ನೀರಿನ ಕೊರತೆ ಕಂಡುಬರುತ್ತಿದ್ದು ಈ ಯೋಜನೆಯನ್ನು ಕರಾವಳಿ ಜಿಲ್ಲೆಗಳಿಗೂ ಕೂಡ ವಿಸ್ತರಿಸಲಾಗಿರುತ್ತದೆ.
ರೈತರು ಇದರ ಪ್ರಯೋಜನ ಪಡೆದು ,ಬಿದ್ದ ಮಳೆನೀರನ್ನು ಸಮರ್ಪಕವಾಗಿ ಬಳಸಿಕೊಂಡು ಹೆಚ್ಚಿನ ಇಳುವರಿ ಪಡೆಯಲು ಕಾರ್ಯೋನ್ಮುಖರಾಗಬೇಕೆಂದು ಕರೆನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೀನುಗಾರಿಕೆ, ಯುವಜನಸಬಲೀಕರಣ, ಕ್ರೀಡಾಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಪ್ರಮೋದ್ ಮದ್ವರಾಜ್ ಮಾತನಾಡಿ ಕರಾವಳಿ ಜಿಲ್ಲೆಗೆ ಕೃಷಿ ಭಾಗ್ಯ ಯೋಜನೆಯನ್ನು ವಿಸ್ತರಿಸಿದ್ದಕ್ಕಾಗಿ ಸರಕಾರಕ್ಕೆ ಧನ್ಯವಾದ ಹೇಳುತ್ತಾ ಈ ಯೋಜನೆಯ ಲಾಭವನ್ನು ಜಿಲ್ಲೆಯ ರೈತರು ಪಡೆಯಬೇಕು ಎಂದು ಕರೆನೀಡಿದರು.