LATEST NEWS
ಕಾಂಗ್ರೇಸ್ ಅತ್ಯಾಚಾರಿಗಳನ್ನು ರಾಜ್ಯಕ್ಕೆ ಕರೆತರುವುದು ಎಷ್ಟು ಸರಿ – ಅರವಿಂದ್ ಲಿಂಬಾವಳಿ

ಕಾಂಗ್ರೇಸ್ ಅತ್ಯಾಚಾರಿಗಳನ್ನು ರಾಜ್ಯಕ್ಕೆ ಕರೆತರುವುದು ಎಷ್ಟು ಸರಿ – ಅರವಿಂದ್ ಲಿಂಬಾವಳಿ
ಮಂಗಳೂರು ನವೆಂಬರ್ 9: ಮಡಿಕೇರಿಯಲ್ಲಿ ಬಿಜೆಪಿಯ ಪರಿವರ್ತನಾ ರಾಲಿಗೆ ಅವಕಾಶ ನಿರಾಕರಿಸಿರುವುದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಟಿಪ್ಪುಜಯಂತಿ ಸಂದರ್ಭದಲ್ಲಿ ಗಲಭೆ ಸೃಷ್ಠಿಸಲು ಕೇರಳದಿಂದ ಬರುವವರಿಗೆ ಯಾವುದೇ ಅಡೆತಡೆ ಇಲ್ಲ, ಆದರೆ ಬಿಜೆಪಿ ಪರಿವರ್ತನಾ ರಾಲಿಗೆ ಮಾತ್ರ ಅವಕಾಶವನ್ನು ರಾಜ್ಯ ಸರಕಾರ ನಿರಾಕರಿಸಿದೆ ಇಂದು ಖಂಡನೀಯ ಎಂದರು. ಬಿಜೆಪಿಯ ಪರಿವರ್ತನಾ ರಾಲಿ ಬೆಳಗಾವಿ ಅಧಿವೇಶನ ನಡೆಯುವರೆಗೂ ಮುಂದುವರೆಯಲಿದೆ ಎಂದು ಅವರು ತಿಳಿಸಿದರು.

ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಹಾಗೂ ವಿಷ್ಣುನಾಥನ್ ಮೇಲೆ ಅತ್ಯಾಚಾರದ ಕೇಸ್ ಇದೆ. ಇದರ ಬಗ್ಗೆ ಜಸ್ಟಿಸ್ ಶಿವರಂಜನ್ ತನಿಖೆ ನಡೆಸಿ ವರದಿ ನೀಡಿದ್ದಾರೆ. ಈ ವರದಿಯನ್ನು ಕೇರಳದ ಸಿಎಂ ಪಿಣರಾಯಿ ಕೇರಳದ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ.
ಈ ಹಿನ್ನಲೆಯಲ್ಲಿ ಕಾಂಗ್ರೇಸ್ ಅತ್ಯಾಚಾರಿಗಳನ್ನು ರಾಜ್ಯಕ್ಕೆ ಕರೆತರುವುದು ಎಷ್ಟು ಸರಿ ಎಂದು ಪ್ರಶ್ನಿದರು. ಕಾಂಗ್ರೇಸ್ ನ ರಾಜ್ಯ ಉಸ್ತುವಾರಿಯಾಗಿರುವ ಅವರಿಗೆ ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರದ ನೇತೃತ್ವವನ್ನು ಕಾಂಗ್ರೇಸ್ ಕೆ.ಸಿ ವೇಣುಗೋಪಾಲ್ ಗೆ ನೀಡುತ್ತಾರಾ ಸುದ್ದಿಗೋಷ್ಠಿಯಲ್ಲಿ ಅರವಿಂದ ಲಿಂಬಾವಳಿ ಪ್ರಶ್ನೆ ಮಾಡಿದ್ದಾರೆ.