DAKSHINA KANNADA
ಕರಾವಳಿಯ 60 ಗ್ರಾಮಗಳಿಗೆ ಇನ್ನು ನೋ ಪವರ್ ಕಟ್.
ಮಂಗಳೂರು, ಜುಲೈ 18: ರಾಜ್ಯದ ಪ್ರತೀ ವಿಧಾನಸಭಾ ಕ್ಷೇತ್ರದ ತಲಾ 5 ಗ್ರಾಮಗಳಿಗೆ ದಿನದ 24 ಗಂಟೆ ನಿರಂತರ ವಿದ್ಯುತ್ ಪೂರೈಕೆ ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಅವಿಭಾಜ್ಯ ಜಿಲ್ಲೆಯ ಒಟ್ಟು 60 ಗ್ರಾಮಗಳಲ್ಲಿ ಪವರ್ ಕಟ್ ಸಮಸ್ಯೆಗೆ ಪರಿಹಾರ ದೊರೆಯುವ ನಿರೀಕ್ಷೆ ಮೂಡಿದೆ.
ದ.ಕ. ಜಿಲ್ಲೆಯ 35 ಗ್ರಾಮಗಳು ಹಾಗೂ ಉಡುಪಿ ಜಿಲ್ಲೆಯ 25 ಗ್ರಾಮಗಳು ಮುಂದಿನ ದಿನದಲ್ಲಿ ವಿದ್ಯುತ್ ಅಡಚಣೆ ರಹಿತ ಗ್ರಾಮಗಳಾಗಿ ಮೂಡಿ ಬರಲಿದೆ. ರಾಜ್ಯ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಮಾದರಿ ವಿದ್ಯುತ್ ಗ್ರಾಮ ಸಂಕಲ್ಪದ ಬಗ್ಗೆ ಈಗಾಗಲೇ ಪ್ರಕಟನೆ ಹೊರಡಿಸಿದ್ದಾರೆ.ಈ ಯೋಜನೆಯನ್ವಯ ಪ್ರತೀ ಗ್ರಾಮಕ್ಕೆ ಗರಿಷ್ಠ 40 ಲಕ್ಷ ರೂ. ವೆಚ್ಚದಲ್ಲಿ ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ಅಗತ್ಯ ಇರುವ ಎಲ್ಲಾ ಕ್ರಮ ಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಮಾದರಿ ವಿದ್ಯುತ್ ಗ್ರಾಮಕ್ಕೆ ಯೋಜನೆ ಹಾಕಲಾಗಿದೆ. ಮುಂದಿನ ಒಂದೂವರೆ ವರ್ಷದೊಳಗೆ ಮಾದರಿ ಗ್ರಾಮ ಯೋಜನೆ ಅನುಷ್ಠಾನಕ್ಕೆ ಗುರಿ ಇರಿಸಲಾಗಿದೆ.
ಏನು ಇದರ ವಿಶೇಷ..
ಪ್ರತೀ ಮಾದರಿ ವಿದ್ಯುತ್ ಗ್ರಾಮದಲ್ಲಿ ವಿತರಣಾ ವ್ಯವಸ್ಥೆಯನ್ನು ಬಲವರ್ಧನೆಗೊಳಿಸಲಾಗುತ್ತದೆ. ಇಲ್ಲಿ ಬೀದಿ ದೀಪ ಗಳಿಗೆ ಎಲ್‌ಇಡಿ/ಸೋಲಾರ್ ದೀಪ ಗಳನ್ನು ಹಾಗೂ ಟೈಮರ್ ಸ್ವಿಚ್‌ಗಳನ್ನು ಅಳ ವಡಿಸಲು ಸ್ಥಳೀಯ ಸಂಸ್ಥೆಯೊಂದಿಗೆ ಸಮನ್ವಯತೆ ಕಾಪಾಡಿ ಕೊಳ್ಳಲಾಗುತ್ತದೆ. ಮಾದರಿ ಗ್ರಾಮದ ವಿದ್ಯುತ್ ಹೊರೆಗೆ ಅನುಗುಣವಾಗಿ ವಿದ್ಯುತ್ ಪರಿವರ್ತಕ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಎಲ್ಲಾ ಸ್ಥಾವರ ಗಳಿಗೂ ಮಾಪಕ ಅಳವಡಿಸಿ, ವಿದ್ಯುತ್ ಬಳಕೆ ಯನ್ನು ನಿಖರವಾಗಿ ದಾಖಲಿಸುವಂತೆ ಖಾತ್ರಿಪಡಿಸಲಾಗುತ್ತದೆ. ಪ್ರತೀ ಮಾದರಿ ಗ್ರಾಮ ಗಳಲ್ಲಿ ವಿದ್ಯುತ್ ಪೋಲಾಗ ದಂತೆ ತಡೆ ಗಟ್ಟ ಲಾಗುತ್ತದೆ. ಎಲ್ಲಾ ಕಡೆ ಗಳಲ್ಲಿ 3 ಫೇಸ್ ವಿತರಣಾ ಮಾರ್ಗ ರಚಿಸ ಲಾಗು ತ್ತದೆ. 24 ಗಂಟೆಗಳ ವಿದ್ಯುತ್ಛ ಕ್ತಿ ಲಭ್ಯತೆಗಾಗಿ ವಿಕೇಂದ್ರೀಕೃತ ವಿತರಣಾ ಉತ್ಪಾದನೆ (ಡಿಡಿಜಿ) ಮೂಲಕ ವಿದ್ಯುತ್ ಉತ್ಪಾದನೆಗೆ ಅಗತ್ಯ ಕ್ರಮ ವಹಿಸಲಾಗುತ್ತದೆ.ಸ್ಥಾವರಗಳ ವಿದ್ಯುತ್ಛ ಕ್ತಿ ಬಳಕೆಗೆ ಬಿಲ್ ನೀಡಿ ಶೇ.100ರಷ್ಟು ಕಂದಾಯ ವಸೂಲಾತಿಗೆ ಮೊಬೈಲ್ ವ್ಯಾನ್ ಅಥವಾ ಇತರ ವ್ಯವಸ್ಥೆಯಡಿ ಕ್ರಮ ಕೈಗೊಳ್ಳ ಲಾಗುತ್ತದೆ. ಈ ಗ್ರಾಮಗಳಲ್ಲಿ ಯಾವುದೇ ರೀತಿಯ ಅಪಾಯಕಾರಿ- ಸ್ಥಿತಿಯಲ್ಲಿರುವ ವಿದ್ಯುತ್ ಮಾರ್ಗ, ವಿದ್ಯುತ್ ಕಂಬ, ವಿದ್ಯುತ್ ಪರಿ ವರ್ತಕ ಇತ್ಯಾದಿಗಳನ್ನು ಸರಿಪಡಿಸಿ ಅಪಘಾತ ರಹಿತ ಸುರಕ್ಷತಾ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ.
ದ.ಕ. ಜಿಲ್ಲೆಯ ಗ್ರಾಮಗಳು: ಮೂಡಬಿದಿರೆ ವಿ.ಸಭಾ ಕ್ಷೇತ್ರದ ತೆಂಕ ಮಿಜಾರು, ಕಲ್ಲಮುಂಡ್ಕೂರು, ಕಿನ್ನಿಗೋಳಿ, ಹಳೆಯಂಗಡಿ, ಬಜ್ಪೆ. ಮಂಗಳೂರು ಉತ್ತರ ಕ್ಷೇತ್ರದ ಬಡಗ ಉಳಿಪಾಡಿ, ಕಂದಾವರ, ಕೆಲಿಂಜಾರ್, ಮೂಳೂರು, ಮುತ್ತೂರು. ಮಂಗಳೂರು ವಿ.ಸಭಾ ಕ್ಷೇತ್ರದ ಸಜೀಪ ನಡು, ನರಿಂಗಾನ, ಹರೇಕಳ, ಪಾವೂರು, ಕಿನ್ಯಾ. ಪುತ್ತೂರು ವಿಧಾನಸಭಾ ಕ್ಷೇತ್ರದ ಬಲಾ°ಡು, ನರಿಮೊಗ್ರು, ಶಾಂತಿಗೋಡು, ಕೊಡಿಪ್ಪಾಡಿ, 34- ನೆಕ್ಕಿಲಾಡಿ. ಸುಳ್ಯ ವಿ.ಸಭಾ ಕ್ಷೇತ್ರದ ಚಾರ್ವಾಕ, ಇಚಿಲಂಪಾಡಿ, ಬಂಟ್ರ, ಮಂಡೆಕೋಲು, ಮರ್ಕಂಜ. ಬಂಟ್ವಾಳ ವಿ.ಸಭಾ ಕ್ಷೇತ್ರದ ಸಜಿಪ ಮುನ್ನೂರು, ಕಪೆì, ಕಾವಳ ಪಡೂರು, ಕೊಳ್ನಾಡು, ವಿಟ್ಲ ಪಟ್ನೂರು. ಬೆಳ್ತಂಗಡಿ ವಿ.ಸಭಾ ಕ್ಷೇತ್ರದ ಉಜಿರೆ, ತಣ್ಣೀರು ಪಂಥ, ಕೊಕ್ಕಡ, ಹೊಸಂಗಡಿ, ನಾರಾವಿ.
ಉಡುಪಿ ಜಿಲ್ಲೆ: ಬೈಂದೂರು ವಿ.ಸಭಾ ಕ್ಷೇತ್ರದ ಕಾಲೊಡು, ಜಡ್ಕಲ್-ಮುದೂರು, ನಾಡಾ, ಸಿದ್ದಾಪುರ, ಅಂಪಾರು. ಕುಂದಾಪುರ ವಿ.ಸಭಾ ಕ್ಷೇತ್ರದ ಅಮಾಸೆಬೈಲು, ಮಡಾ ಮಕ್ಕಿ, ಶೇಡಿಮನೆ, 33ನೇ ಶಿರೂರು, ಕಾಡೂರು. ಉಡುಪಿ ವಿ.ಸಭಾ ಕ್ಷೇತ್ರದ ಕೆಂಜೂರು, ಕಳತ್ತೂರು, ಹಾರಾಡಿ, ಹಲುವಳ್ಳಿ, ಮೂಡುತೋನ್ಸೆ. ಕಾಪು ವಿ.ಸಭಾ ಕ್ಷೇತ್ರದ ಬೆಳ್ಳರ್ಪಾಡಿ, ಮರ್ಣೆ, ಮಟ್ಟು, ಹೇರೂರು, ಪಿಲಾರು. ಕಾರ್ಕಳ ವಿ.ಸಭಾ ಕ್ಷೇತ್ರದ ವರಂಗ, ಹೆಬ್ರಿ, ಸಾಣೂರು, ಬಜಗೋಳಿ, ನಿಟ್ಟೆ.