LATEST NEWS
ಕರಾವಳಿಗರು ಕೋಮುವಾದಿಗಳು ತಾಲಿಬಾನಿಗಳು – ದಿನೇಶ್ ಅಮೀನ್ ಮಟ್ಟು
ಉಡುಪಿ ಅಗಸ್ಟ್ 09: ಧರ್ಮಗುರುಗಳು ಧರ್ಮ ಪೀಠಗಳು ಕೋಮುವಾದಿಗಳ ರಿಕ್ರೂಟ್ಮೆಂಟ್ ಸೆಂಟರ್ ಗಳಾಗಿವೆ ಧರ್ಮಗುರುಗಳು ರಾಜಕೀಯ ಪಕ್ಷ ಸೇರಿಕೊಳ್ಳುತ್ತಿದ್ದಾರೆ. ಕರಾವಳಿಗರು ಬುದ್ಧಿವಂತರು ಎಂಬ ಪ್ರತೀತಿ ಇತ್ತು ಇಂದು ಕೋಮುವಾದಿಗಳು ತಾಲಿಬಾನಿ ಗಳಾಗಿ ಇದ್ದಾರೆ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಪಟ್ಟಿದ್ದಾರೆ .
ಉಡುಪಿ ಜಿಲ್ಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಕ್ವಿಟ್ ಇಂಡಿಯಾ ಚಳವಳಿ 75 ನೇ ವರ್ಷದ ನೆನಪಿನ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಸ್ವಾಮಿ ವಿವೇಕಾನಂದರ ಹಿಂದೂ ಧರ್ಮಕ್ಕೆ ಗೌರವವಿದೆ, ಕಲ್ಲಡ್ಕ ಪ್ರಭಾಕರ ಭಟ್ಟರ ಹಿಂದೂ ಧರ್ಮಕ್ಕೆ ಧಿಕ್ಕಾರವಿದೆ ಎಂದು ಅವರು ಕಿಡಿಕಾರಿದರು.
ಬಿಜೆಪಿಯ ಸದಸ್ಯರಾದರೆ ಮಾತ್ರ ಹಿಂದೂಗಳಾ? ಸಂಸದ ನಳಿನ್ ಕುಮಾರ್ ಕಟೀಲ್ ಗಿಂತ ಜನಾರ್ದನ ಪೂಜಾರಿ ಬೆಟರ್ ಹಿಂದು ಎಂದು ಅವರು ಹೇಳಿದರು. ಟೀ ಶರ್ಟ್ ಹಾಕಿ ದೇಶ ಭಕ್ತರಾಗಲು ಗಡಿಗೆ ಹೋಗಬೇಕಾಗಿಲ್ಲ ಎಂದು ಹೇಳಿದ ಅವರು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಂಘ ಪರಿವಾರದ ಯಾರೂ ಪಾಲ್ಗೊಂಡಿಲ್ಲ , ಆರ್ ಎಸ್ ಎಸ್ ನಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಒಬ್ಬರಾದರೂ ಇದ್ದರೆ ಹುಡುಕಿ ಕೊಡಿ ಎಂದು ಅವರು ವಾಗ್ದಾಳಿ ನಡೆಸಿದರು.
ಉಡುಪಿ ಶ್ರೀಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ಮಾಡಿದಾಗ ನಮಗೆ ರೋಮಾಂಚನ ಆಯ್ತು ಮರುದಿನ ಉಮಾಭಾರತಿ ಬಂದು ಆಶೀರ್ವಾದ ಪಡೆದರು . ರಾಮಮಂದಿರದ ನಿರ್ಮಾಣದ ಬಗ್ಗೆಯೂ ಅಲ್ಲೇ ನಿರ್ಧಾರವಾಯಿತು ಎಂದು ಹೇಳುವ ಮೂಲಕ ಅಮೀನ್ ಮಟ್ಟು ಪೇಜಾವರ ಶ್ರೀಗಳಿಗೆ ಟಾಂಗ್ ನೀಡಿದರು.