Connect with us

    DAKSHINA KANNADA

    ಐಸಿಸ್ ಉಗ್ರರ ನಂಟು ಪಿಎಫ್ಐ ಕಾರ್ಯಕರ್ತನ ಬಂಧನ.

    5850a7d6-c3e1-42ba-bb7e-e063725d85aaಮಂಗಳೂರು. ಜುಲೈ 15:  ಜಾಗತಿಕವಾಗಿ ನಿಶೇಧಿತ ಉಗ್ರ ಸಂಘಟನೆಯ ಜೊತೆ ನಂಟು ಹೊಂದಿದ್ದ ಪಿಎಫ್ಐ ಕಾರ್ಯಕರ್ತನ್ನು ದೆಹಲಿ ಪೋಲೀಸರು ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಬಂಧಿತನನ್ನು ಕೇರಳದ  ಕಣ್ಣೂರು ಜಿಲ್ಲೆಯ ಕುಡಾಲಿ ಗ್ರಾಮದ ವಿ.ಕೆ. ಶಹಜಹಾನ್ (33) ಎಂದು ಗುರುತಿಸಲಾಗಿದ್ದು, ಈತನೊಂದಿಗೆ ಮತ್ತೋರ್ವನನ್ನೂ ಪೋಲೀಸರು ಬಂಧಿಸಿದ್ದು ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ. ಕೇರಳ ಪೋಲೀಸರ ಪ್ರಕಾರ ಶಹಜಹಾನ್ ಕೇರಳ ಪಿಎಫ್ಐ ಕಮಿಟಿಯ ಪದಾಧಿಕಾರಿಯಾಗಿದ್ದು, ಈತ ಟರ್ಕಿ ಮೂಲಕ ಸಿರಿಯಾಕ್ಕೆ ಪ್ರಯಾಣಿಸಲು ಫೆಬ್ರವರಿ ತಿಂಗಳಿನಲ್ಲಿ ಪ್ರಯತ್ನ ಪಟ್ಟಿದ್ದ. ಈ ಸಂದರ್ಭದಲ್ಲಿ ಟರ್ಕಿ ಪೋಲೀಸರಿಂದ ಬಂಧಿಸಲ್ಪಟ್ಟ ಈತನನ್ನು ಮತ್ತೆ ಭಾರತಕ್ಕೆ ಗಡಿಪಾರು ಮಾಡಿದ ಕಾರಣ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಂದರ್ಭದಲ್ಲಿ ದೆಹಲಿ ಪೋಲೀಸರು ವಶಕ್ಕೆ ಪಡೆದಿದ್ದಾರೆ. 33 ವರ್ಷದ ಶಹಜಹಾನ್ ಐಸಿಸಿ ಉಗ್ರ ಸಂಘಟನೆಗೆ ಸೇರಿದ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾದ ನಾಲ್ಕನೇ ಕಾರ್ಯಕರ್ತನಾಗಿದ್ದು, ಈ ಹಿಂದೆ ಮೂವರು ಐಸಿಸಿ ಉಗ್ರ ಸಂಘಟನೆಯ ಜೊತೆ ಗುರುತಿಸಿಕೊಂಡಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *