DAKSHINA KANNADA
ಎಲ್ಲಾ ಓಕೆ ಪ್ರತಿಭಾ ಕುಳಾಯಿಗೆ ಶೋಕಾಸ್ ನೋಟೀಸ್ ಯಾಕೇ !
ಎಲ್ಲಾ ಓಕೆ ಪ್ರತಿಭಾ ಕುಳಾಯಿಗೆ ಶೋಕಾಸ್ ನೋಟೀಸ್ ಯಾಕೇ !
ಮಂಗಳೂರು, ಮಾರ್ಚ್ 15: ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಹಾಗೂ ಕರ್ನಾಟಕ ಮಹಿಳಾ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರತಿಭಾ ಕುಳಾಯಿ ಮೇಲಿನ ಕಿರುಕುಳ ಪ್ರಕರಣ ಕಾಂಗ್ರೇಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಪ್ರತಿಭಾ ಕುಳಾಯಿ ಮೇಲೆ ದಕ್ಷಿಣಕನ್ನಡ ಜಿಲ್ಲಾ ಕಾಂಗ್ರೇಸ್ ನ ಕಾರ್ಯದರ್ಶಿ ಅಬ್ದುಲ್ ಸತ್ತಾರ್ ಎಂಬಾತ ಲೈಂಗಿಕ ಕಿರುಕುಳ ನೀಡುವುದರ ಜೊತೆಗೆ ಆಕೆಯ ಕೌಟುಂಬಿಕ ವಿಚಾರದಲ್ಲೂ ಮೂಗು ತೂರಿಸಲು ಯತ್ನಿಸುತ್ತಿದ್ದ.
ಇದನ್ನು ಪ್ರಶ್ನಿಸಿ ಪ್ರತಿಭಾ ಕುಳಾಯಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊಯಿದೀನ್ ಬಾವಾ ರ ಕಛೇರಿಯಲ್ಲಿ ಅಬ್ದುಲ್ ಸತ್ತಾರ್ ಕೆನ್ನೆಗೆ ಬಾರಿಸಿದ್ದರು.
ಕೆನ್ನೆಗೆ ಬಾರಿಸಿದ ವಿಚಾರ ಮಾಧ್ಯಮಗಳಲ್ಲೂ ಪ್ರಚಾರವಾಗಿತ್ತು.
ಈ ವಿಚಾರವಾಗಿ ಪ್ರತಿಭಾ ಕುಳಾಯಿ ಮಾಧ್ಯಮಗಳಲ್ಲಿ ತನ್ನ ಅಳಲನ್ನೂ ತೋರಿಸಿಕೊಂಡಿದ್ದರು.
ಆದರೆ ತನ್ನ ವೈಯುಕ್ತಿಕ ವಿಚಾರವನ್ನು ಮಾಧ್ಯಮಗಳ ಮುಂದೆ ತೋಡಿಕೊಂಡ ಪ್ರತಿಭಾ ಕುಳಾಯಿ ಗೆ ಜಿಲ್ಲಾ ಕಾಂಗ್ರೇಸ್ ಘಟಕ ಶೋಕಾಸ್ ನೋಟೀಸ್ ಜಾರಿ ಮಾಡಿದೆ.
ಈ ಶೋಕಾಸ್ ನೋಟೀಸ್ ಇದೀಗ ಭಾರೀ ವಿವಾದಕ್ಕೂ ಕಾರಣವಾಗಿದೆ. ಪ್ರತಿಭಾ ಕುಳಾಯಿ ಮಾಧ್ಯಮಗಳ ಮುಂದೆ ತನಗೆ ವೈಯುಕ್ತಿಕವಾಗಿ ಆದ ಸಂಕಷ್ಟವನ್ನು ತೋರ್ಪಡಿಸಿಕೊಂಡಿದ್ದು, ಇದರಲ್ಲಿ ಪಕ್ಷದ ಬಗ್ಗೆಯಾಗಲೀ, ಇತರ ನಾಯಕರ ಬಗ್ಗೆಯಾಗಲೀ ಯಾವುದೇ ರೀತಿಯ ಹೇಳಿಕೆಗಳನ್ನು ನೀಡಿರಲಿಲ್ಲ.
ಆದರೆ ಜಿಲ್ಲಾ ಘಟಕವು ಪಕ್ಷದ ಶಿಸ್ತು ಉಲ್ಲಂಘಿಸಿ ಮಾಧ್ಯಮದ ಮುಂದೆ ಹೋಗಿರುವುದಕ್ಕೆ ಕಾರಣ ನೀಡುವಂತೆ ನೋಟೀಸ್ ಮಾಡಿದೆ.
ಅಲ್ಲದೆ ಪ್ರತಿಭಾ ಕುಳಾಯಿ ಮೇಲೆ ನಡೆದ ಲೈಂಗಿಕ ಕಿರುಕುಳ ವಿಚಾರಕ್ಕೆ ಸಂಬಂಧಪಟ್ಟಂತೆ ಕಾಂಗ್ರೇಸ್ ನ ಯಾವೊಬ್ಬ ಮಹಿಳಾ ಮಣಿಗಳೂ ಒಂದು ಶಬ್ದವನ್ನೂ ಮಾತನಾಡದಿರುವುದು ವಿಪರ್ಯಾಸವಾಗಿದೆ.
ಈ ನಡುವೆ ವಿಶ್ವ ಹಿಂದೂ ಪರಿಷತ್ ನ ಮಹಿಳಾ ಘಟಕ ದುರ್ಗಾವಾಹಿನಿ ಪ್ರತಿಭಾ ಮೇಲೆ ನಡೆದ ಕಿರುಕುಳವನ್ನು ಖಂಡಿಸಿದೆ.
ಪ್ರತಿಭಾ ಕುಳಾಯಿ ಮೇಲೆ ನಡೆದ ಲೈಂಗಿಕ ಕಿರುಕುಳ ಪ್ರಕರಣ ಅವರ ತೀರಾ ವೈಯುಕ್ತಿಕ ವಿಚಾರವಾಗಿದ್ದು, ಇದನ್ನೂ ಕೂಡಾ ಪ್ರತಿಭಟಿಸಲು ಪಕ್ಷದ ಅನುಮತಿ ಕೇಳಬೇಕೇ ಎನ್ನುವ ಗೊಂದಲ ಇದೀಗ ಸಾಮಾನ್ಯ ಜನತೆಯಲ್ಲಿ ಮೂಡಿದೆ.
ಹಾಗಾದರೆ ಪ್ರತಿಭಾ ಕುಳಾಯಿಗೆ ಲೈಂಗಿಕ ಕಿರುಕುಳ ನೀಡಿದ ಅಬ್ದುಲ್ ಸತ್ತಾರ್ ಕಿರುಕುಳ ನೀಡುವ ಮುಂಚೆ ಪಕ್ಷದ ಅನುಮತಿ ಪಡೆದಿದ್ದರೇ ಎನ್ನುವ ಗೊಂದಲಗಳೂ ಇದೀಗ ಮೂಡಲಾರಂಭಿಸಿದೆ.
ಲೈಂಗಿಕ ಕಿರುಕುಳ ನೀಡಿರುವುದು ಪ್ರತಿಭಾ ಅವರು ವೈಯುಕ್ತಿಕ ವಿಚಾರವಾಗಿದ್ದು, ಇದನ್ನು ಪ್ರತಿಭಟಿಸಲೂ ಪಕ್ಷದ ಅನುಮತಿಗೆ ಕಾಯಬೇಕೇ ಎನ್ನುವ ಪ್ರಶ್ನೆಯೂ ಕಾಡತೊಡಗಿದೆ