LATEST NEWS
ಉಡುಪಿ ಮಾಜಿ ಸಿಎಂ ಕುಮಾರಸ್ವಾಮಿ ಸುದ್ದಿಗೋಷ್ಟಿ : ಸರ್ಕಾರವನ್ನು ದೇವರೇ ಕಾಪಾಡಬೇಕು
ಉಡುಪಿ ಮಾಜಿ ಸಿಎಂ ಕುಮಾರಸ್ವಾಮಿ ಸುದ್ದಿಗೋಷ್ಟಿ : ಸರ್ಕಾರವನ್ನು ದೇವರೇ ಕಾಪಾಡಬೇಕು
ಉಡುಪಿ ಜುಲೈ 30 : ಉಡುಪಿ ಮಾಜಿ ಸಿಎಂ ಕುಮಾರಸ್ವಾಮಿ ಸುದ್ದಿಗೋಷ್ಟಿ ನಡೆಸಿದರು. ಕರಾವಳಿ ಜಿಲ್ಲೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಅಧಿಕಾರ ನಡೆಸುತ್ತಿದ್ದು, ಜಿಲ್ಲೆಯ ಭಾವನಾತ್ಮಕ ವಿಚಾರ ಇಟ್ಟುಕೊಂಡು ರಾಜಕೀಯ ಮಾಡುತ್ತಿವೆ, ಎರಡು ರಾಜಕೀಯ ಪಕ್ಷಗಳು ಧರ್ಮ ಮತ್ತು ಸಮಾಜಕ್ಕೆ ಹೆಚ್ಚಿನ ಆಧ್ಯತೆಯನ್ನು ನೀಡಿದ್ದು ಇದು ಕರಾವಳಿಯ ಅಭಿವೃದ್ಧಿಗೆ ಇದು ಮಾರಕ ಎಂದು ಹೇಳಿದರು. ರಾಜ್ಯ ಸರ್ಕಾರ ನಾಲ್ಕು ವರ್ಷ ಪೂರೈಸಿದೆ ನುಡಿದಂತೆ ನಡೆದಿದ್ದೇವೆ ಅಂತ ಪ್ರಚಾರ ಪಡೆಯುತ್ತಿದ್ದಾರೆ. ಭಾಗ್ಯ ಯೋಜನೆ ಸಮಸ್ಯೆ ಬಗೆಹರಿಸಿದ್ದೇವೆ ಅಂತ ಹೇಳುತ್ತಿದ್ದಾರೆ ಆದರೆ ರೈತರ ಆತ್ಮಹತ್ಯೆ ಮುಂದುವರೆದಿದೆ, ಇದು ಸರ್ಕಾರದ ಸಾಧನೆಯೇ!?ಎಂದು ವ್ಯಂಗ್ಯವಾಡಿದರು. ಜಲಾಶಯಗಳಿಂದ ಕೆರೆ ತುಂಬಿಸಿ ಎಂದು ನಾನು ಹೇಳಿದ್ದು ಸಿಎಂ ಸಿದ್ದರಾಮಯ್ಯ ಅದನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ ನಾಲ್ಕು ಜಲಾಶಯ ಪಕ್ಕದ ರಾಜ್ಯಕ್ಕೆ ನೀರು ಕೊಡಲು ಕಟ್ಟಿಸಿಕೊಂಡಿದ್ದಾ!? ಜಲಾಶಯದ ನೀರು ನಮ್ಮ ಕೆರೆಗಳಿಗೂ ಹರಿಯಲಿ ಎಂದು ಹೇಳಿದರು .ಈ ಮೊದಲು ಸಿಎಂ ಹಾರಂಗಿ ನೀರು ಪಕ್ಕದ ರಾಜ್ಯಕ್ಕೆ ಹರಿಯುವುದನ್ನು ತಡೆಯಲಿ ಎಂದು ಆಗ್ರಹಿಸಿದರು. ಕರಾವಳಿ ಇತ್ತೀಚೆಗೆ ನಡೆದ ಕೋಮುಗಲಭೆ ವಿಚಾರ ಸಿಎಂ ಹಾಗೂ ಸಚಿವರು ಹಲವು ದಿನ ಮೌನವಾಗಿದ್ದರು, ಈಗ ಗೃಹ ಇಲಾಖೆ ರಮಾನಾಥ ರೈ ಪಾಲಾಗಲಿದೆ ಎಂದು ಮಾತು ಕೇಳಿ ಬರುತ್ತಿದ್ದು ಆದರೆ ರಮಾನಾಥ ರೈ ಹೆಸರಿಗೆ ಮಾತ್ರ ಗೃಹಮಂತ್ರಿ ಆಗ್ತಾರೆ ಆದ್ರೆ ನಿಜವಾದ ಗೃಹ ಮಂತ್ರಿ ಕೆಂಪಯ್ಯ ಆಗಿದ್ದು , ರಮಾನಾಥ ರೈ ಅವರು ಕೇವಲ ಹೆಬ್ಬೆಟ್ಟು ಒತ್ತಲು ಮಾತ್ರ ಗೃಹ ಮಂತ್ರಿಯಾಗ್ತಾರೆ , ಕೆಂಪಯ್ಯ ಸಿದ್ದರಾಮಯ್ಯನಿಗೆ ಯಾಕೆ ಅನಿವಾರ್ಯ ಉಡುಪಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಲೇವಡಿ
ಗುಜರಾತ್ ಕಾಂಗ್ರೇಸ್ ಶಾಸಕರ ಬೆಂಗಳೂರು ರೆಸಾರ್ಟ್ ವಾಸ ಕುರಿತಂತೆ ಮಾತನಾಡಿದ ಕುಮಾರಸ್ವಾಮಿ , ಇತರೆ ಪಕ್ಷಗಳನ್ನು ಬಿಜೆಪಿ ನಾಶ ಮಾಡಲು ಹೊರಟಿದೆ ಎಂದು ಕಾಂಗ್ರೆಸ್ ಈಗ ಎಚ್ಚೆತ್ತುಕೊಂಡು ಚುನಾವಣಾ ಆಯೋಗಕ್ಕೆ ದೂರು ನೀಡಿದೆ ಮಾಡಿದ್ದುಣ್ಣೋ ಮಾರಾಯಾ ಎಂಬಂತಾಗಿದೆ ಅಂದು ರಾಜ್ಯದಲ್ಲಿ 7 ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ ಹೈಜಾಕ್ ಮಾಡಿ ಪ್ರಜಾಪ್ರಭುತ್ವ ಕತ್ತು ಹಿಸುಕುವುದನ್ನು ಅಂದು ನೀವು ಮಾಡಿದ್ದಿರಿ, ಗುಜರಾತ್ ಬೆಳವಣಿಗೆ ಇದು ಪ್ರತಿಫಲ ಎಂದು ಹೇಳಿದರು. ಗುಜರಾತ್ ಶಾಸಕರ ಭದ್ರತೆಗೆ ರೆಸಾರ್ಟ್ ಗೆ ಇಲ್ಲಿ ಹೆಚ್ಚುವರಿ ಪೊಲೀಸ್ ಅಧಿಕಾರಿಗಳ ನೇಮಕ ಮಾಡಿದ್ದು ಅದನ್ನು ಬಿಟ್ಟು ರಾಜ್ಯಕ್ಕೆ ಮೊದಲು ರಕ್ಷಣೆ ಕೊಡಿ ಎಂದು ಆಗ್ರಹಿಸಿದರು. ಮಂಗಳೂರಿನ ರಸ್ತೆಗೆ ನಾಮಕರಣ ವಿವಾದ ದ.ಕ ಜಿಲ್ಲೆಯ ಶಾಸಕರದ್ದು ಡಬ್ಬಲ್ ಗೇಮ್ ನಡೆಯುತ್ತಿದ್ದೆ
ಸರ್ಕಾರವನ್ನು ದೇವರೇ ಕಾಪಾಡಬೇಕು ಜನಸಾಮಾನ್ಯರ ಆಕ್ರೋಷಕ್ಕೆ ಗುರಿ ಮಾಡಬೇಡಿ
ಲಿಂಗಾಯತ ಧರ್ಮ ಪ್ರತ್ಯೇಕತೆ ವಿಚಾರ ಇದರಿಂದ ಯಾರಿಗೂ ಲಾಭವಿಲ್ಲ ಚುನಾವಣೆ ಬಂದಾಗ ಇಂತದ್ದೆಲ್ಲ ಹುಟ್ಟಿಕೊಳ್ತದೆ ಆ ಸಮಾಜದ ಗುರುಗಳಿಗೆ ವಿಚಾರ ಬಿಟ್ಟುಬಿಡಿ ಎಂದು ತಿಳಿಸಿದರು. ಜಮೀರ್ ಗೆ ರುಂಡ ಕಟ್ ಮಾಡೋದು ಸುಲಭ ಅದು ಅವರಿಗೆ ಬಿಟ್ಟ ವಿಚಾರ ಭಾವೋದ್ವೇಗದ ಮಾತುಗಳನ್ನು ಬಿಟ್ಟುಬಿಡಿ ನಿಮ್ಮ ಕುಟುಂಬದಲ್ಲಿ ಆತಂಕ ಸೃಷ್ಟಿ ಮಾಡಬೇಡಿ.
ಪ್ರತ್ಯೇಕ ಧ್ವಜ ವಿಚಾರ ಈಗಾಗಲೇ ಒಂದು ಧ್ವಜ ಇದೆ 1960 ರಿಂದ ಕನ್ನಡ ಧ್ವಜದ ಉಪಯೋಗ ಇದೆ .