LATEST NEWS
ಉಡುಪಿಯ ಕೆಮ್ತೂರಿನಲ್ಲಿ ಬಾತ್ ರೂಮ್ ನಲ್ಲಿ ಚಿರತೆ ಪ್ರತ್ಯಕ್ಷ
ಉಡುಪಿ ಅಗಸ್ಟ್ 08: ಉಡುಪಿ ಸಮೀಪದ ಅಲೆವೂರು ಗ್ರಾಮದ ಕೆಮ್ತೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ. ಮುಂಜಾನೆ ೪ ಗಂಟೆಯ ಸಮಯದಲ್ಲಿ ಚಿರತೆ ಕಾಣಿಸಿಕೊಂಡಿದೆ ರಾತ್ರಿ ನಾಯಿಯನ್ನು ಅಟ್ಟಿಸಿಕೊಂಡು ಬಂದ ಚಿರತೆ ಇಲ್ಲಿಯ ಜಯಲಕ್ಷ್ಮಿ ಎಂಬವರ ಮನೆಗೆ ನುಗ್ಗಿದೆ. ಬೆಳ್ಳಂ ಬೆಳಿಗ್ಗೆ ಜಯಲಕ್ಷ್ಮಿ ಅವರು ಬಾತ್ ರೂಂಗೆ ಬರುತ್ತಿದ್ದಂತೆ ಚಿರತೆ ಅಡಗಿ ಕುಳಿತಿರುವುದು ಗೊತ್ತಾಗಿದೆ. ಈ ಸಂದರ್ಭದಲ್ಲಿ ಬುದ್ಧಿವಂತಿಕೆ ಪ್ರದರ್ಶಿಸಿರುವ ಜಯಲಕ್ಷ್ಮಿ ಅವರು ಮೆಲ್ಲನೆ ಬಾತ್ ರೂಂ ಹೊರಗೆ ಬಂದು ಬಾಗಿಲು ಹಾಕಿ ಚಿರತೆ ಸೆರೆ ಯಾಗುವಂತೆ ಮಾಡಿದ್ದಾರೆ .
ನಂತರ ಅರಣ್ಯ ಇಲಾಖೆಗೆ ಚಿರತೆ ಇರುವ ಮಾಹಿತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ನಡೆಸಿದ ಅರಣ್ಯ ಅಧಿಕಾರಿಗಳು, ಚಿರತೆಯನ್ನು ಬೋನಿನಲ್ಲಿ ಸೆರೆ ಹಿಡಿದಿದ್ದಾರೆ .ಈ ಭಾಗದಲ್ಲಿ ಚಿರತೆ ಸೆರೆಯ ಆಗುತ್ತಿರುವುದು ಇದು ಎರಡನೇ ಸಲ ಈ ಭಾಗದಲ್ಲಿ ಚಿರತೆ ಓಡಾಟ ಸ್ಥಳೀಯರಲ್ಲಿ ಭಯ ಹುಟ್ಟಿಸಿದೆ .