LATEST NEWS
ಇದು ಕೊನೆಯ ಟಿಪ್ಪು ಜಯಂತಿ – ಬಿ.ಎಸ್ ಯಡಿಯೂರಪ್ಪ

ಇದು ಕೊನೆಯ ಟಿಪ್ಪು ಜಯಂತಿ – ಬಿ.ಎಸ್ ಯಡಿಯೂರಪ್ಪ
ಮಂಗಳೂರು ನವೆಂಬರ್ 9: ನಾಳೆ ನಡೆಯುವ ಟಿಪ್ಪು ಜಯಂತಿ ರಾಜ್ಯದಲ್ಲಿ ನಡೆಯುವ ಕೊನೆಯ ಟಿಪ್ಪುಜಯಂತಿ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಇಂದು ಮಂಗಳೂರಿನಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಗೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, ಹಿಟ್ಲರ್ ಜಯಂತಿಯೂ ಒಂದೇ, ಟಿಪ್ಪು ಜಯಂತಿಯೂ ಒಂದೇ ಎಂದು ಹೇಳಿದರು. ಸರಕಾರಿ ಕಾರ್ಯಕ್ರಮವಾಗಿ ಟಿಪ್ಪು ಜಯಂತಿಗೆ ವಿರೋಧ ವಿದ್ದು ಇದೇ ಕೊನೆಯ ಟಿಪ್ಪು ಜಯಂತಿ ಆಗಲಿದೆ ಎಂದು ಅವರು ಹೇಳಿದರು.

ಡಿ.ಕೆ ಶಿವಕುಮಾರ್ ಬಿಜೆಪಿ ಸೇರ್ಪಡೆ ಕುರಿತಂತೆ ಮಾತನಾಡಿದ ಯಡಿಯೂರಪ್ಪ ಬಿಜೆಪಿಗೆ ಡಿಕೆಶಿ ಸೇರುವ ವಿಚಾರ ಸುಳ್ಳು, ಆ ರೀತಿಯ ಯಾವುದೇ ಪ್ರಸ್ತಾಪ ಪಕ್ಷದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು. ಸಿ.ಎಂ ಸಿದ್ದರಾಮಯ್ಯ ಅವರ ರಾಜಕೀಯದ ಡೊಂಬರಾಟದ ಭಾಗವಾಗಿ ಈ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದರು.
ರಾಜ್ಯದ ಜನತೆಯಲ್ಲಿ ಗೊಂದಲ ಸೃಷ್ಠಿಸಲು ಸುಳ್ಳು ಹೇಳಿಕೆಗಳನ್ನು ಮುಖ್ಯಮಂತ್ರಿ ನೀಡುತ್ತಿದ್ದಾರೆ. ಬಿಜೆಪಿ ಪರಿವರ್ತನಾ ರಾಲಿ ಸಿಕ್ಕ ಬೆಂಬಲಕ್ಕೆ ಹೆದರಿ ಈ ರೀತಿಯ ಹೇಳಿಕೆಗಳನ್ನು ಮಾತನಾಡುತ್ತಿದ್ದಾರೆ ಎಂದು ಹೇಳಿದರು.