Connect with us

    DAKSHINA KANNADA

    ಕಾಶ್ಮೀರದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ಬಳಿಕದ ರೋಷ, ದಕ್ಷಿಣಕನ್ನಡದಲ್ಲೂ ಶುರುವಾಗಿದೆ ದ್ವೇಷ

    ಕಾಶ್ಮೀರದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ಬಳಿಕದ ರೋಷ, ದಕ್ಷಿಣಕನ್ನಡದಲ್ಲೂ ಶುರುವಾಗಿದೆ ದ್ವೇಷ

    ಮಂಗಳೂರು, ಎಪ್ರಿಲ್ 21: ಕಾಶ್ಮೀರದಲ್ಲಿ ಜನವರಿಯಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ದೇಶ ವಿದೇಶಗಳಲ್ಲಿ ವಿವಿಧ ರೀತಿಯ ಪ್ರತಿಭಟನೆಗಳು ನಡೆಯುತ್ತಿದೆ.

    ಕೃತ್ಯದಲ್ಲಿ ಭಾಗಿಯಾದವರು ಸಂಘಪರಿವಾರದ ಸಿದ್ಧಾಂತದವರು, ಬಿಜೆಪಿ ಪಕ್ಷದವರು ಎನ್ನುವ ರೀತಿಯಲ್ಲಿ ಬಿಂಬಿಸುವ ವ್ಯವಸ್ಥೆಯೂ ನಡೆದಿದೆ.

    ಈ ಕಾರಣಕ್ಕಾಗಿಯೇ ಕೇರಳ ರಾಜ್ಯದಲ್ಲಿ ಕೆಲವು ಮಂದಿ ಹಾಗೂ ಕೆಲವು ಪಕ್ಷಗಳು ತಮ್ಮ ಮನೆ ಹಾಗೂ ಕಛೇರಿಗಳ ಮುಂದೆ ಈ ಮನೆಗೆ ಅಥವಾ ಕಛೇರಿಗೆ ಸಂಘಪರಿವಾರದ ಕಾರ್ಯಕರ್ತರಿಗೆ, ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಪ್ರವೇಶವಿಲ್ಲ ಎನ್ನುವಂತಹ ಬರಹಗಳು, ಬಿಜೆಪಿ ಪಕ್ಷದ ಕಛೇರಿಯಿದ್ದಲ್ಲಿ, ಆರ್.ಎಸ್.ಎಸ್ ಕಛೇರಿಯಿದ್ದ ರಸ್ತೆಗಳಲ್ಲಿ ಮುಂದೆ ಬಿಜೆಪಿ, ಆರ್.ಎಸ್.ಎಸ್ ಕಛೇರಿಯಿದೆ, ತಮ್ಮ ಹೆಣ್ಣು ಮಕ್ಕಳು ಹಾಗೂ ಹೆಂಗಸರ ಜಾಗೃತೆ ವಹಿಸಿ ಎನ್ನುವ ಬ್ಯಾನರ್ ಗಳು ಎಲ್ಲೆಡೆ ಕಂಡು ಬರುತ್ತಿದೆ.

    ಇದೀಗ ಇದೇ ರೀತಿಯ ಬ್ಯಾನರ್ ಹಾಗೂ ಭಿತ್ತಿಪತ್ರಗಳು ದಕ್ಷಿಣಕನ್ನಡ ಜಿಲ್ಲೆಯ ಕೆಲವೆಡೆಗಳಲ್ಲಿ ಕಂಡು ಬರಲು ಆರಂಭವಾಗಿದೆ.

    ಕರ್ನಾಟಕ ಕೇರಳ ಗಡಿ ಭಾಗವಾದ ಕನ್ಯಾನ ಹಾಗೂ ಇತರ ಪರಿಸರದಲ್ಲಿ ಇಂತಹುದೇ ರೀತಿಯ ಭಿತ್ತಿಪತ್ರಗಳು ಕಾಣಿಸಿಕೊಳ್ಳುತ್ತಿದೆ.

    ಇದರಲ್ಲಿ ಹಿಂದೂ ಯುವತಿಯೊಬ್ಬಳನ್ನು ಕಪಟ ಪ್ರೇಮದ ನಾಟಕವಾಡಿ ಆಕೆಯನ್ನು ಮತಾಂತರಕ್ಕೆ ಯತ್ನಿಸಲು ಸಹಕರಿಸಿದ ಕಾಂಗ್ರೇಸ್ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಈ ಮನೆಗೆ ಪ್ರವೇಶವಿಲ್ಲ ಎಂದು ಬರೆಯಲಾಗಿದೆ.

    ಇನ್ನು ಕೆಲವು ಭಿತ್ತಿಪತ್ರಗಳಲ್ಲಿ ಹಿಂದೂ ಸನ್ಯಾಸಿಯೊಬ್ಬರಿಗೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದ ಕಾಂಗ್ರೇಸ್ ಪಕ್ಷಕ್ಕೆ ಸೇರಿದವರಿಗೆ ಈ ಮನೆಗೆ ಪ್ರವೇಶವಿಲ್ಲ, ಇದು ಹಿಂದೂ ಮನೆ ಎಂದೆಲ್ಲಾ ಬರೆಯಲಾಗಿದೆ.

    ಯಾರೋ ಒಬ್ಬ ವ್ಯಕ್ತಿ ವೈಯುಕ್ತಿಕವಾಗಿ ನಡೆಸಿದ ಕೃತ್ಯಗಳಿಗೆ ಆತನು ಪ್ರತಿನಿಧಿಸಿದ ಸಂಘ ಹಾಗೂ ಪಕ್ಷಗಳನ್ನು ಎಳೆದು ತಂದಲ್ಲಿ ಇಂಥಹ ಪ್ರತಿರೋಧಗಳು ಹೆಚ್ಚಾಗುತ್ತದೆ ಎನ್ನುವುದಕ್ಕೆ ಇದೀಗ ದಕ್ಷಿಣಕನ್ನಡ ಜಿಲ್ಲೆಯೇ ಸಾಕ್ಷಿಯಾಗುತ್ತಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *