LATEST NEWS
ಆರ್ ಟಿಐ ಕಾರ್ಯಕರ್ತರ ಬೆನ್ನ ಹಿಂದೆ ಬಿದ್ದ ಲೋಕಾಯುಕ್ತ
ಆರ್ ಟಿಐ ಕಾರ್ಯಕರ್ತರ ಬೆನ್ನ ಹಿಂದೆ ಬಿದ್ದ ಲೋಕಾಯುಕ್ತ
ಮಂಗಳೂರು ನವೆಂಬರ್ 17: ರಾಜ್ಯದ ಆರ್ ಟಿ ಐ ಕಾರ್ಯಕರ್ತರ ಬೆನ್ನ ಹಿಂದೆ ಇನ್ನು ಮುಂದೆ ಲೋಕಾಯಕ್ತ ಪೊಲೀಸರು ತಿರುಗಲಿದ್ದಾರೆ. ರಾಜ್ಯದ ಎಲ್ಲಾ ಆರ್ ಟಿ ಐ ಕಾರ್ಯಕರ್ತರ ಹಿನ್ನಲೆ ಕಲೆ ಹಾಕಲು ಲೋಕಾಯುಕ್ತ ಪೊಲೀಸ್ ಅಧಿಕಾರಗಳಿಗೆ ಲೋಕಾಯುಕ್ತ ನ್ಯಾಯಾಧೀಶ ಪಿ. ವಿಶ್ವನಾಥ ಶೆಟ್ಟಿ ಅವರು ಸೂಚನೆ ನೀಡಿದ್ದಾರೆ.
ಈ ಬಗ್ಗೆ ಇಂದು ಮಂಗಳೂರಿನ ಪುರಭವನದಲ್ಲಿ ನಡೆದ ಸಾರ್ವಜನಿಕ ದೂರುಗಳ ವಿಚಾರಣೆ ಮತ್ತು ವಿಲೇವಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾರ್ವಜನಿಕ ಹಿತಾಸಕ್ತಿ ಹಿನ್ನಲೆಯಲ್ಲಿ ಆರ್ ಟಿಐ ಕಾರ್ಯಕರ್ತರು ಸರಕಾರಿ ಅಧಿಕಾರಿಗಳಿಂದ ಮಾಹಿತಿ ಪಡೆಯುವುದಕ್ಕೋಸ್ಕರ ಆರ್ ಟಿಐ ಹಾಕುತ್ತಾರೆ, ಆದರೆ ಕೆಲವು ಮಂದಿ ಬೇರೆ ಬೇರೆ ಉದ್ದೇಶಕ್ಕಾಗಿ ಪದೇ ಪದೇ ದೂರು ನೀಡಿ ಅಧಿಕಾರಿಗಳ ಕೆಲಸ ಕಾರ್ಯಗಳಿಗೆ ಅಡ್ಡಿಪಡಿಸುತ್ತಿದ್ದಾರೆ. ಹಾಗಾಗಿ ಆರ್ ಟಿಐ ಕಾರ್ಯಕರ್ತರು ಯಾವ ಉದ್ದೇಶಕ್ಕಾಗಿ ದೂರು ನೀಡಿದ್ದಾರೆ ಎಂದು ತಿಳಿದು ಕೊಳ್ಳುವುದರೊಂದಿಗೆ ಕಾರ್ಯಕರ್ತರ ಸಂಪೂರ್ಣ ಮಾಹಿತಿ ಕಲೆ ಹಾಕಲು ಸೂಚಿಸಲಾಗಿದೆ ಎಂದರು.
ರಾಜ್ಯದ ಜನರು ಎದುರಿಸುವ ಸಮಸ್ಯೆಗಳಿಗೆ ಶೀಘ್ರ ಪರಿಹಾರ ನೀಡಲು ಹಾಗೂ ಅಧಿಕಾರಿಗಳಿಗೆ ಚುರುಕು ಮುಟ್ಟಿಸಲು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದ ಅವರು ಅಧಿಕಾರಿಗಳು ಸಾರ್ವಜನಿಕರ ದೂರಿಗೆ ಶೀಘ್ರ ಸ್ಪಂದಿಸಿ ಸಮಸ್ಯೆ ಬಗೆಹರಿಸಬೇಕೆಂದು ಹೇಳಿದರು. ಒಂದು ವೇಳೆ ಅಧಿಕಾರಿಗಳು ಸಾರ್ವಜನಿಕರ ಸ್ಪಂದನೆ ವಿಳಂಬ ಮಾಡಿದರೆ ಲೋಕಾಯುಕ್ತ ಕಾಯ್ದೆ ಬಳಸಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ನ್ಯಾಯಾಧೀಶ ಪಿ. ವಿಶ್ವನಾಥ್ ಶೆಟ್ಟಿ ಹೇಳಿದರು.