Connect with us

    LATEST NEWS

    ಅರಬ್ಬಿ ಸಮುದ್ರದಲ್ಲೊಂದು ಲೈಫ್ ಆಫ್ ಪೈ

    ಅರಬ್ಬಿ ಸಮುದ್ರದಲ್ಲೊಂದು ಲೈಫ್ ಆಫ್ ಪೈ

    ಮುಂಬಯಿ ನವೆಂಬರ್ 25: ಕಳೆದ ಒಂದು ವರ್ಷದಿಂದ ಸಮುದ್ರದ ಮಧ್ಯದಲ್ಲಿ ಹಡಗಿನಲ್ಲಿದ್ದ ನಾವಿಕನನ್ನು ರಕ್ಷಿಸಿದ ಘಟನೆ ವರದಿಯಾಗಿದೆ. ದುಬೈ ಶಾರ್ಜಾದಿಂದ ಸುಮಾರು ಹದಿನೈದು ಕಿಲೋಮೀಟರ್ ದೂರದ ಅರಬ್ಬಿ ಸಮುದ್ರದ ಮಧ್ಯದಲ್ಲಿ ಸರಕು ಸಾಗಣೆಯ ಹಡಗಿನಿಂದ ಈ ನಾವಿಕನನ್ನು ರಕ್ಷಣೆ ಮಾಡಲಾಗಿದೆ.

    ಈತನನ್ನು ಮರ್ಚೆಂಟ್ ನೇವಿ ಅಧಿಕಾರಿ ಭಾರತದ ಡೆಹರಾಡೂನ್ ಮೂಲದ ನಿರ್ಮಲ್ ಸಿಂಗ್ ರಾವತ್ ಎಂದು ಗುರುತಿಸಲಾಗಿದೆ. 27 ವರ್ಷದ ಈತ ಕಳೆದ ಒಂದು ವರ್ಷದಿಂದ ಸರಕು ಸಾಗಣೆಯ ಹಡಗಿನಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತಿದ್ದರು. ಈತನ ಹೇಳಿಕೆಯ ಪ್ರಕಾರ ಕಳೆದ ಒಂದು ವರ್ಷದಿಂದ ಈತನಿಗೆ ಸಿಗಬೇಕಾದ ಸಂಬಳ ಸರಿಯಾಗಿ ಸಿಗದ ಕಾರಣ ಈತ ಈ ನಿರ್ಧಾರ ಕೈಗೊಂಡಿದ್ದೆ ಎಂದು ತಿಳಿದು ಬಂದಿದೆ.

    ಈತನ ಒಟ್ಟಿಗೆ ಹಡಗಿನಲ್ಲಿ ಕರ್ತವ್ಯ ನಿರ್ವಹಿಸಿದ್ದ ಇತರ ಸಿಬ್ಬಂದಿಗಳು ಒಬ್ಬೊಬ್ಬರಾಗಿ ಹಡಗನ್ನು ಬಿಟ್ಟು ಹೋಗಿದ್ದು ಕ್ರಮೇಣ ಈತ ಒಬ್ಬನೇ ಹಡಗಿನಲ್ಲಿ ಉಳಿದಿದ್ದ. ಈತನ ಹಡಗಿನ ಮೂಲಕ ವಂಚನೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ. ಈ ಹಿನ್ನೆಲೆಯಲ್ಲಿ ರಾವತ್ ಅವರು ಹಡಗಿನಲ್ಲಿ ಉಳಿದುಕೊಳ್ಳಲು ನಿರ್ಧರಿಸಿದರು. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ದುಬೈನಲ್ಲಿ ವಾಸ್ತವ್ಯದಲ್ಲಿ ಇರುವ ಸಾಮಾಜಿಕ ಕಾರ್ಯಕರ್ತ ಗಿರೀಶ್ ಪಂತ್ ಅವರು ರಾವತ್ ಅವರನ್ನು ರಕ್ಷಣೆ ಮಾಡುವ ನಿರ್ಧಾರ ಕೈಗೊಂಡರು.

    ರಾವತ್ ಅವರು ಉಳಿದಿದ್ದ ಹಡಗಿನಲ್ಲಿ ಸೀಮಿತ ಅವಧಿಯ ನೀರು ಮತ್ತೆ ಆಹಾರ ಮಾತ್ರ ಇತ್ತು. ವಿದ್ಯುತ್ ಕೂಡ ಇರಲಿಲ್ಲ ಕತ್ತಲೆಯಲ್ಲಿ ಅವರು ಜೀವನ ಸಾಗಿಸುತಿದ್ದ. ಇವನು ವಾಸ ಮಾಡುತ್ತಿದ್ದ ಹಡಗು ಸಮುದ್ರದಲ್ಲಿ ಸಂಚರಿಸಿದ್ದ ದೊಡ್ಡ ದೊಡ್ಡ ಹಡಗುಗಳು ಹೊಡೆತಕ್ಕೆ ಸಿಲುಕಿ ಮುಳುಗುವ ಹಂತದಲ್ಲಿತ್ತು. ತರುತ್ತಿದ್ದ ಹಡಗಿನಲ್ಲಿದ್ದ ಆಹಾರ ಮತ್ತು ನೀರು ಕೂಡ ದಿನ ದಿನ ದಿನಕ್ಕೆ ಕಡಿಮೆ ಆಗಿದ್ದು ಮೂರು ದಿನಗಳಿಗೊಮ್ಮೆ ಮಾತ್ರ ಆತ ಆಹಾರ ಸೇವಿಸುತ್ತಿದ್ದ ಮತ್ತು ಉಳಿದ ಆಹಾರವನ್ನು ಉಳಿಸುತಿದ್ದ.

    ಈ ಎಲ್ಲಾ ಮಾಹಿತಿಗಳನ್ನು ಕಲೆ ಹಾಕಿದ ಸಾಮಾಜಿಕ ಕಾರ್ಯಕರ್ತ ಗಿರೀಶ್ ಪಂತ್ ಅವರು ದುಬೈಯಲ್ಲಿರುವ ಪೆಡರಲ್ ಟ್ರಾನ್ಸ್ ಪೋರ್ಟ್ ಅಥಾರಿಟಿ ಹಾಗೂ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ ಅವರ ಸಹಾಯ ಪಡೆದು ರಾವತ್ ಅವರನ್ನು ರಕ್ಷಣೆ ಮಾಡಿ ಭಾರತಕ್ಕೆ ಕಳುಹಿಸಿಕೊಟಿದ್ದಾರೆ.

     

    Share Information
    Advertisement
    Click to comment

    Leave a Reply

    Your email address will not be published. Required fields are marked *