Connect with us

KARNATAKA

ಬಿಜೆಪಿ ಸಂಸದರ ವಿರುದ್ದ ಹರಿಹಾಯ್ದ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ

ಬಿಜೆಪಿ ಸಂಸದರ ವಿರುದ್ದ ಹರಿಹಾಯ್ದ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ

ಮಂಗಳೂರು ಅಕ್ಟೋಬರ್ 1: ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪರವಾಗಿ ಪ್ರಚಾರ ನಡೆಸಿ ಕರ್ನಾಟಕದಲ್ಲಿ ಬಿಜೆಪಿ ಅತಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲಲು ಪ್ರಚಾರ ನಡೆಸಿದ್ದ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಈಗ ಬಿಜೆಪಿ ಸಂಸದರ ವಿರುದ್ದ ವಿರುದ್ದ ಹರಿಹಾಯ್ದಿದ್ದಾರೆ. ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರ ವಿಚಾರದಲ್ಲಿ ಕರ್ನಾಟಕದ ಸಂಸದರಿಗೆ ನಡೆದುಕೊಳ್ಳುತ್ತಿರುವ ರೀತಿಯನ್ನು ಚಿಂತಕ ಚಕ್ರವರ್ತಿ ಸೂಲಿಬೆಲೆ ಪ್ರಶ್ನಿಸಿದ್ದಾರೆ.

ಈ ಸಂಬಂಧ ತಮ್ಮ ಯುವಲೈವ್ ವೆಬ್‍ಸೈಟಿನಲ್ಲಿ ಬರಹ ಪ್ರಕಟಿಸಿರುವ ಅವರು, ನಿಜ ಹೇಳಬೇಕೆಂದರೆ ಪ್ರವಾಹದ ನಂತರವೇ ಬೆಂಗಳೂರಿನ ಸಂಸದ ಅನಂತ್ ಕುಮಾರ್ ಅವರ ಅನುಪಸ್ಥಿತಿ ಎದ್ದು ಕಾಣುತ್ತಿರುವುದು. ಕೇಂದ್ರ ಸರ್ಕಾರದಲ್ಲಿ ಕರ್ನಾಟಕದ ದನಿಯನ್ನು ಪ್ರಭಾವಿಯಾಗಿ ಮಂಡಿಸಬಲ್ಲ ಸಂಸದರೇ ಇಲ್ಲವೇನೋ ಎನಿಸುತ್ತದೆ ಬೇಸರ ವ್ಯಕ್ತಪಡಿಸಿದ್ದಾರೆ.

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಚಕ್ರವರ್ತಿ ಸೂಲಿಬೆಲೆಯವರು ನರೇಂದ್ರ ಮೋದಿ ಅವರ ಪರವಾಗಿ ರಾಜ್ಯವಾಪಿ ಪ್ರಚಾರ ನಡೆಸಿದ್ದರು. ಈ ಸಂದರ್ಭದಲ್ಲಿ ಚುನಾವಣೆ ಹತ್ತಿರ ಬಂದಾಗ ಸಮಸ್ಯೆ ಇದೆ ಎಂದು ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನೆ ಮಾಡುವುದಲ್ಲ. ಮತವನ್ನು ಚಲಾಯಿಸಿ ಮೌನವಾಗಿ ಕುಳಿತುಕೊಳ್ಳುವುದಲ್ಲ. ಆರಂಭದಿಂದಲೇ ಸಮಸ್ಯೆಯ ಬಗ್ಗೆ ಒತ್ತಡ ಹೇರಿ ಜನಪ್ರತಿನಿಧಿಗಳಿಂದ ಕೆಲಸ ಮಾಡಿಸಿಕೊಳ್ಳಬೇಕು ಎಂದು ಹೇಳಿದ್ದರು.

ಚಕ್ರವರ್ತಿ ಸೂಲಿಬೆಲೆ ಅವರ www.yuvalive.net ನಲ್ಲಿರುವ ಬರಹ

” ರಾಜ್ಯದಲ್ಲಿ ಪರಿಹಾರಕ್ಕಾಗಿ ಹಾಹಾಕಾರ ಭುಗಿಲೆದ್ದಿದೆ. ಉತ್ತರ ಕನರ್ಾಟಕ ಭಾರತದಲ್ಲೇ ಇದೆ ಎಂಬ ಟ್ರೆಂಡ್ ದೇಶದಾದ್ಯಂತ ಸುದ್ದಿ ಮಾಡಿತು. ಭಾಜಪದ ಕಾರ್ಯಕರ್ತರು ಉತ್ತರ ಕನರ್ಾಟಕದಲ್ಲಿ ಹೆಮ್ಮೆಯಿಂದ ತಿರುಗಾಡುವುದೇ ಕಷ್ಟವಾಗಿಬಿಟ್ಟಿದೆ. ತೀವ್ರಗತಿಯ ಪ್ರವಾಹಕ್ಕೆ ಸಿಲುಕಿ ಮನೆ-ಮಠ ಕಳಕೊಂಡವರು, ಆಸ್ತಿ-ಪಾಸ್ತಿ ನಷ್ಟ ಮಾಡಿಕೊಂಡವರು, ಬೆಳೆನಾಶಕ್ಕೆ ತುತ್ತಾದವರೆಲ್ಲಾ ಬೆಂಗಳೂರಿನತ್ತ ಕಣ್ಣು ನೆಟ್ಟು ಕುಳಿತಿದ್ದರೆ ವಿಧಾನಸೌಧದಲ್ಲಿರುವವರೆಲ್ಲಾ ದೆಹಲಿಯತ್ತ ಆಸೆಕಣ್ಣಿನಿಂದ ನೋಡುತ್ತಿದ್ದಾರೆ. ಸಣ್ಣ-ಪುಟ್ಟ ವಿಚಾರವನ್ನೂ ಕೂಡ ಮಾತೃ ಹೃದಯಿಯಾಗಿ ಅವಲೋಕಿಸುವ ನರೇಂದ್ರಮೋದಿ ಕೂಡ ಅದೇಕೆ ಇಷ್ಟು ಕಠೋರವಾಗಿದ್ದಾರೋ ಅರ್ಥವಾಗುತ್ತಿಲ್ಲ. ಪರಿಹಾರ ದೂರದ ಮಾತು ಕೊನೆಗೆ ನಾಲ್ಕು ಸಾಂತ್ವನದ ಮಾತೂ ಕೂಡ ಮೋದಿಯವರಿಂದ ಬರಲಿಲ್ಲ. ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ಒಂದೇ ಪಕ್ಷದ್ದಾಗಿದ್ದರೆ ಲಾಭ ಬೆಟ್ಟದಷ್ಟು ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಾರೆ. ಆದರೆ ಇಲ್ಲಿ ಅದೇ ರಾಜ್ಯಕ್ಕೆ ಮುಳುವಾಯ್ತಾ ಎನ್ನುವುದು ಪ್ರತಿಯೊಬ್ಬರೂ ಕೇಳಿಕೊಳ್ಳಬೇಕಾದ ಪ್ರಶ್ನೆ!

ನಿಜ ಹೇಳಬೇಕೆಂದರೆ ಪ್ರವಾಹದ ನಂತರವೇ ಬೆಂಗಳೂರಿನ ಸಂಸದ ಅನಂತ್ ಕುಮಾರ್ರವರ ಅನುಪಸ್ಥಿತಿ ಎದ್ದು ಕಾಣುತ್ತಿರುವುದು. ಕೇಂದ್ರ ಸಕರ್ಾರದಲ್ಲಿ ಕನರ್ಾಟಕದ ದನಿಯನ್ನು ಪ್ರಭಾವಿಯಾಗಿ ಮಂಡಿಸಬಲ್ಲ ಸಂಸದರೇ ಇಲ್ಲವೇನೋ ಎನಿಸುತ್ತದೆ. ಹಾಗೆ ನೋಡಿ. ಉತ್ತರ ಕನರ್ಾಟಕದವರೇ ಆಗಿದ್ದರೂ ಮೋದಿಯವರೊಂದಿಗೆ ನಿಕಟವಾದ ಸಂಪರ್ಕ ಹೊಂದಬಹುದಾದ ಖಾತೆ ಪಡೆದಿದ್ದರೂ ಪ್ರಹ್ಲಾದ್ ಜೋಷಿಯವರಿಗೆ ಏನನ್ನೂ ಕಡಿದು ಕಟ್ಟೆ ಹಾಕಲಾಗಲಿಲ್ಲ. ಸಂಘದ ಕಟ್ಟಾಳುವಾಗಿ ಬಿಜೆಪಿಯ ರಾಜ್ಯಾಧ್ಯಕ್ಷ ಹುದ್ದೆಯನ್ನು ಅಲಂಕರಿಸಿರುವ ನಳಿನ್ ಕುಮಾರ್ ಕಟೀಲ್ ಬೆಂಗಳೂರಿನ ರಾಜಕಾರಣದಲ್ಲಿ ಮೂಗು ತೂರಿಸಿದಷ್ಟು ಸಹಜವಾಗಿ ಕೇಂದ್ರದ ನಿಧರ್ಾರಗಳನ್ನು ಪ್ರಭಾವಿಯಾಗಿ ತೆಗೆದುಕೊಳ್ಳಬಲ್ಲ ತಾಕತ್ತನ್ನು ಹೊಂದಿಲ್ಲ. ಇನ್ನು ಉಳಿದವರ ಕುರಿತಂತೆ ಮಾತನಾಡುವುದಕ್ಕಿಂತ ಸುಮ್ಮನಿದ್ದರೆ ಒಳಿತು. ಕನರ್ಾಟಕದ ಒಳಿತಿಗಾಗಿ ಕೇಂದ್ರದೊಂದಿಗೆ ಗುದ್ದಾಡಿ ಬೇಕಾದ್ದನ್ನು ಪಡೆದುಕೊಂಡು ಬರಬಲ್ಲ ಸಾಮಥ್ರ್ಯ ಯಾವ ಸಂಸದರಿಗೂ ಇಲ್ಲವಲ್ಲಾ ಎಂಬುದೇ ದುಃಖದ ಸಂಗತಿ. ಮತ್ತು ಇವರು ಒಬ್ಬಿಬ್ಬರಲ್ಲ, ಬರೋಬ್ಬರಿ 25 ಜನ! ಇನ್ನುಳಿದ ಮೂವರಲ್ಲಿ ಒಬ್ಬರು ಈಗ ತಾನೇ ಸಂಸತ್ತು ಪ್ರವೇಶಿಸಿರುವ ಸುಮಲತಾ ಆದರೆ ಪ್ರಜ್ವಲ್ದೂ ಹೆಚ್ಚು ಕಡಿಮೆ ಅದೇ ಸ್ಥಾನ. ಇವರುಗಳಿಗೆ ಸಂಸತ್ತಿನ ಕಾರ್ಯವೈಖರಿಯ ಅರಿವಾಗುವುದರೊಳಗೆ ಅದರ ಕಾಯರ್ಾವಧಿಯೇ ಮುಗಿದು ಹೋಗಿರುತ್ತದೆ. ಕಾಂಗ್ರೆಸ್ಸಿನ ಒಬ್ಬೇ ಒಬ್ಬ ಸಂಸದ ತಮ್ಮನನ್ನು ಬಿಡಿಸಿಕೊಂಡು ಬರುವುದರಲ್ಲಿ ತಿಪ್ಪರಲಾಗ ಹಾಕುತ್ತಿದ್ದಾರೆ. ಹೀಗಾಗಿ ಕನರ್ಾಟಕದ ಪರವಾಗಿ, ಕನ್ನಡದ ಪರವಾಗಿ ಸಮರ್ಥವಾಗಿ ದನಿ ಎತ್ತಬಲ್ಲವರೇ ಇಲ್ಲವಾಗಿಬಿಟ್ಟಿದ್ದಾರೆ!

ಎಲ್ಲ ಹಳಬರ ನಡುವೆ ಸ್ವಲ್ಪ ಭರವಸೆ ಮೂಡಿಸಿದ್ದ ತೇಜಸ್ವಿ ಸೂರ್ಯ ಕನರ್ಾಟಕ ಸಕರ್ಾರದ ಹಣಕಾಸು ಸ್ಥಿತಿಯನ್ನು ನೋಡಿದರೆ ಕೇಂದ್ರದ ಸಹಕಾರ ಬೇಕೇ ಆಗಿಲ್ಲ ಎಂದು ಹೇಳಿ ಸಾಕಷ್ಟು ಟೀಕೆಗೆ ಗುರಿಯಾಗಬೇಕಾಯ್ತು. ಅತ್ತ ಕೇಂದ್ರದಲ್ಲಿ ಛಾಪು ಮೂಡಿಸಲಾಗದೇ ಇತ್ತ ರಾಜ್ಯದಲ್ಲಿ ಭರವಸೆ ಉಳಿಸಿಕೊಳ್ಳಲಾಗದೇ ಇರುವ ಹಿರಿಯರ ನಡುವೆ ಆತನಾದರೂ ಏನು ಮಾಡಿಯಾನು ಹೇಳಿ? ಹಾಗಂತ ಈ ಸಮಸ್ಯೆ ಇಷ್ಟಕ್ಕೇ ನಿಂತಿಲ್ಲ. ಈ 25 ಜನ ಸಂಸದರು ಮೋದಿಯ ಮಜರ್ಿಯಿಂದಲೇ ಗೆದ್ದವರು ಎಂಬುದು ಜನರಿಗೂ ಗೊತ್ತಿದೆ, ಸ್ವತಃ ಅವರಿಗೂ ಗೊತ್ತಿದೆ. ಇವರಿಗೆಲ್ಲಾ ಕೆಲಸ ಮಾಡಿರೆಂದು ನಾವುಗಳು ತಾಕೀತು ಮಾಡಿದರೂ ಕೋಪ ಬರುತ್ತದೆ, ಕೊನೆಯ ಪಕ್ಷ ಮಾತನ್ನಾದರೂ ಆಡಿರೆಂದರೆ ಆಗಲೂ ಉರಿದು ಬೀಳುತ್ತಾರೆ. ಯಾವುದೂ ಆಗಲಿಲ್ಲವೆಂದರೆ ಇವರು ಸಂಸದರಾದರೂ ಏಕೆ ಆಗಬೇಕಿತ್ತು ಹೇಳಿ?! ನನ್ನ ಆಕ್ರೋಶಕ್ಕೆ ಕಾರಣವಿದೆ. ಅಡಿಕೆಯ ಮರದಿಂದ ಉದುರಿದ ಎಲೆಯಿಂದ ತಟ್ಟೆ, ಲೋಟ, ದೊನ್ನೆ ಇವುಗಳನ್ನು ಮಾಡುವುದು ನಿಮಗೆ ಗೊತ್ತೇ ಇದೆಯಲ್ಲಾ. ಇದು ಕೃಷಿ ಚಟುವಟಿಕೆಯ ಮುಂದುವರಿದ ಭಾಗವೇ ಆಗಿದ್ದರಿಂದ ವ್ಯಾಟ್ನಲ್ಲೂ ಕೂಡ ಇದಕ್ಕೆ ರಿಯಾಯಿತಿ ಇತ್ತು. ಆದರೆ ಜಿಎಸ್ಟಿ ಬಂದ ನಂತರ ಅದಕ್ಕೆ ತೆರಿಗೆ ಹಾಕಲಾಯ್ತು. ಒರಿಸ್ಸಾದ ಮುಖ್ಯಮಂತ್ರಿ ತನ್ನ ನಾಡಿನ ಜನರ ಎಲೆಯ ತಟ್ಟೆಗಳನ್ನು ಜಿಎಸ್ಟಿ ಮುಕ್ತ ಮಾಡಿಸುವಲ್ಲಿ ಕೇಂದ್ರಸಕರ್ಾರದೊಂದಿಗೆ ಸಾಕಷ್ಟು ಬಡಿದಾಡಿದರು. ಆದರೆ ನಮ್ಮಲ್ಲಿ ಯಾರೂ ಜಿಎಸ್ಟಿ ಕೌನ್ಸಿಲ್ನ ಜೊತೆಯಾಗಲೀ ಕೇಂದ್ರಸಕರ್ಾರದ ಮಂತ್ರಿಗಳೊಂದಿಗಾಗಲೀ ಮಾತನಾಡುವ ತಾಕತ್ತು ತೋರದಿದ್ದುದರಿಂದ ಆ ಎಲ್ಲಾ ಉದ್ಯಮಿಗಳು ತೆರಿಗೆ ಕಟ್ಟುವ ಅನಿವಾರ್ಯಕ್ಕೆ ಬಿದ್ದರು. ದುರಂತವೇನೆಂದರೆ ತೆರಿಗೆಯ ಸಂಪೂರ್ಣ ವಿವರ ಜಿಎಸ್ಟಿ ಕೌನ್ಸಿಲ್ ಕೂಡ ಹೊರಹಾಕದಿದ್ದುದರಿಂದಾಗಿ ಉದ್ಯಮಿಗಳು ಗೊಂದಲಕ್ಕೆ ಬಿದ್ದರು, ಉದ್ದಿಮೆಯೂ ಅನಿಶ್ಚಿತವಾಯ್ತು. ಆಮೇಲೇನು ಗೊತ್ತೇ? ಮಲೆನಾಡಿನ ಈ ಎಲ್ಲಾ ಉದ್ಯಮಿಗಳು ಎಮ್ಪಿಗಳನ್ನು, ಎಮ್ಎಲ್ಎಗಳನ್ನು ಎಡತಾಕಿದರೂ ಮುಖ್ಯಮಂತ್ರಿಯ ಕಛೇರಿಯ ಬಾಗಿಲನ್ನೇ ಬಡಿದರೂ ಪರಿಹಾರ ಮಾತ್ರ ದಕ್ಕಲೇ ಇಲ್ಲ. ಆದರೆ ಅವರೇ ಹಿಂದೆ ಬಿದ್ದು ಜಿಎಸ್ಟಿ ಕೌನ್ಸಿಲ್ನೊಂದಿಗೆ ಬಡಿದಾಡಿದ್ದರಿಂದ ಅವರ ತೆರಿಗೆಯನ್ನು ಮನ್ನಾ ಮಾಡುತ್ತೇವೆಂಬ ಭರವಸೆ ಸಿಕ್ಕಿತು. ಹಾಗಂತ ಸಮಸ್ಯೆ ಪೂತರ್ಿ ಮುಗಿದಿರಲಿಲ್ಲ. ಇಷ್ಟೂ ದಿನ ಅವರ ಮೇಲೆ ತೆರಿಗೆ ಹಾಕಿದ್ದರಲ್ಲಾ ಅಷ್ಟು ಹಣವನ್ನು ಕಟ್ಟಬೇಕೆಂದು ತೆರಿಗೆ ಅಧಿಕಾರಿಗಳು ಈಗ ಹಿಂದೆ ಬಿದ್ದಿದ್ದಾರೆ! ಆದರೆ, ಜಿಎಸ್ಟಿ ತೆರಿಗೆ ಹಾಕಿದಾಗಿನಿಂದ ಇಂದಿನವರೆಗೂ ಎಷ್ಟು ತೆರಿಗೆ ಸಂಗ್ರಹಿಸಬೇಕು ಎಂಬ ಸ್ಪಷ್ಟ ಮಾಹಿತಿಯನ್ನೇ ನೀಡದೇ ಈ ಉದ್ಯಮಿಗಳು ಸಂಗ್ರಹಿಸದ ತೆರಿಗೆಯನ್ನು ಈಗ ದಂಡದ ಸಮೇತ ಕಟ್ಟಬೇಕಾಗಿ ಬಂದಿದೆ. ಒಟ್ಟಾರೆ ಅಂದಾಜಿನ ಪ್ರಕಾರ ಶಿವಮೊಗ್ಗದಲ್ಲಿ ನೋಂದಾಯಿತ ಅಡಿಕೆ ಹಾಳೆಯ ಉದ್ಯಮಿಗಳು ಕಟ್ಟಬೇಕಾಗಿರುವ ತೆರಿಗೆಯ ಒಟ್ಟು ಮೊತ್ತ ದಂಡವೂ ಸೇರಿ ಸುಮಾರು 20ಕೋಟಿ ರೂಪಾಯಿ. ಇದರಲ್ಲಿ ಒಂದು ನಯಾಪೈಸೆ ಕೂಡ ಅವರು ಸಂಗ್ರಹಿಸಿಲ್ಲ. ಆದರೆ ಅಧಿಕಾರಿಗಳು ಕಟ್ಟಬೇಕೆಂದು ದುಂಬಾಲು ಬೀಳುವುದನ್ನು ಮಾತ್ರ ಬಿಟ್ಟಿಲ್ಲ. ಈ ವಿಚಾರವನ್ನು ಇವರುಗಳೆಲ್ಲಾ ಜನಪ್ರತಿನಿಧಿಗಳ ಬಳಿಗೊಯ್ದರೆ ಅವರಿಗೆ ಮಾತು ಕೇಳಲೂ ಪುರಸೊತ್ತಿಲ್ಲ, ಮಾತಾಡಲೂ ಇಚ್ಛೆ ಇಲ್ಲ. ಈ ಸಂಸದರೆಲ್ಲಾ ಜಿಎಸ್ಟಿ ಕೌನ್ಸಿಲ್ನ ಮುಂದೆ ಹಠಕ್ಕೆ ಕುಳಿತಿದ್ದರೆ, ಕನರ್ಾಟಕದ ರಾಜ್ಯಸಭಾ ಸದಸ್ಯರೇ ಆಗಿರುವ ನಿರ್ಮಲಾ ಸೀತಾರಾಮನ್ರವರ ಮುಂದೆ ಒಂದೆರಡು ಗಂಟೆ ಪಟ್ಟು ಹಿಡಿದು ಕುಳಿತಿದ್ದರೆ ಈ ಉದ್ದಿಮೆಯ ನೋವನ್ನು ಬಗೆಹರಿಸುವುದು ಕಷ್ಟವೇ ಅಲ್ಲ. ಆದರೆ ಅದಕ್ಕೊಂದು ಮಾನಸಿಕ ಸಿದ್ಧತೆಯೇ ಇವರಲಿಲ್ಲವೆನ್ನುವುದು ದುರಂತ!
ಶಾಸಕರಿಗೂ ಸಂಸದರಿಗೂ ಒಂದು ವ್ಯತ್ಯಾಸವಿದೆ. ಶಾಸಕನಿಗೆ ಅನುದಾನ ಹೆಚ್ಚು ಸಿಗುತ್ತದೆ. ಆತ ಅದನ್ನು ಬಳಸುವ ಮೂಲಕ ಬದಲಾವಣೆಯನ್ನು ತರುವಲ್ಲಿ ಪ್ರಯತ್ನಿಸಬಹುದು. ಆತ ತನ್ನಡಿಯಲ್ಲಿರುವ ಕಾಪರ್ೊರೇಟರ್ಗಳ ಮೂಲಕ ಇನ್ನಿತರೆ ಆಡಳಿತ ವರ್ಗದವರ ಮೂಲಕ ಜನರ ನೆಮ್ಮದಿ ಹೆಚ್ಚಿಸಲು ಪ್ರಯತ್ನಿಸಬಹುದು. ಸಂಸದ ಇವೆಲ್ಲವನ್ನೂ ಮಾಡಬೇಕೆಂದಿಲ್ಲ. ಆದರೆ ಆತ ಕೇಂದ್ರ ಮತ್ತು ರಾಜ್ಯ ಸಕರ್ಾರಗಳ ನಡುವೆ ಕೊಂಡಿಯಾಗಿ ಕೆಲಸ ನಿರ್ವಹಿಸಬೇಕು. ತನ್ನ ಕ್ಷೇತ್ರಕ್ಕೆ ಕೇಂದ್ರಸಕರ್ಾರದಿಂದ ಹೆಚ್ಚು-ಹೆಚ್ಚು ಅನುದಾನ ತರಲು ಯತ್ನಿಸಿ ಆ ಮೂಲಕ ಪ್ರಗತಿಗೆ ಕಾರಣನಾಗಬೇಕು. ಎಲ್ಲಕ್ಕೂ ಮಿಗಿಲಾಗಿ ಕೇಂದ್ರ ಸಕರ್ಾರದ ಯೋಜನೆಗಳಲ್ಲಿ ತನ್ನ ಕ್ಷೇತ್ರದ ಜನರ ಹಿತಾಸಕ್ತಿಯನ್ನು ಸಮರ್ಥವಾಗಿ ಪ್ರತಿನಿಧಿಸುವವನೂ ಆಗಿರಬೇಕು. ದುರಂತವೆಂದರೆ ಸಾಕಷ್ಟು ಬಾರಿ ಸಂಸದರಾಗಿ ಆಯ್ಕೆಯಾಗಿರುವವರೂ ಕೂಡ ಕೇಂದ್ರದಲ್ಲಿ ಇಂಥದ್ದೊಂದು ಪ್ರಬಲ ದನಿ ಹೊಂದಿಲ್ಲದಿರುವುದು! ಅನಂತ್ಕುಮಾರ್ ಇದ್ದಾಗ ಕೇಂದ್ರದ ಇತರೆ ಮಂತ್ರಿಗಳೊಂದಿಗೆ ಅವರು ಬೆಳೆಸಿಕೊಂಡಿದ್ದ ಸಂಬಂಧ ಅವರ ಮಾತಿಗೆ ಗೌರವ ತಂದುಕೊಡುವಂತಿತ್ತು. ಅವರಷ್ಟೇ ಬಾರಿ ಸಂಸದರಾಗಿದ್ದರೂ ಅಂಥದ್ದೊಂದು ಬಾಂಧವ್ಯವನ್ನೇ ಬೆಳೆಸಿಕೊಳ್ಳದ ಅನೇಕರನ್ನು ಕಂಡಾಗ ಸಂಕಟವೆನಿಸುತ್ತದೆ. ಕನರ್ಾಟಕದಿಂದಲೇ ಮಂತ್ರಿಗಳಾದವರು ಎಷ್ಟೋ ಜನರಿದ್ದಾರೆ. ಆದರೆ ಪ್ರತ್ಯಕ್ಷ ಕೇಂದ್ರದಲ್ಲಿ ಪ್ರಭಾವ ಬೀರುವ ವಿಚಾರ ಬಂದಾಗ ಕೆಲಸಕ್ಕೆ ಬಾರದವರಾಗಿಬಿಡುತ್ತಾರಲ್ಲಾ ಎಂಬುದೇ ನೋವಿನ ಸಂಗತಿ.
ಕೇಂದ್ರಸಕರ್ಾರದಿಂದ ರಾಜ್ಯ ಸಕರ್ಾರಕ್ಕೆ ಬರಬೇಕಾದ ಪರಿಹಾರದ ವಿಚಾರಕ್ಕೆ ಮತ್ತೆ ಬರುತ್ತೇನೆ. ಬಹುತೇಕ ಉತ್ತರ ಕನರ್ಾಟಕ ಉಧ್ವಸ್ತಗೊಂಡು ಪರಿಹಾರದ ಹಣಕ್ಕಾಗಿ ಹಾಳಾಗಿರುವ ಬೆಳೆಯನ್ನು ವಿಲೇವಾರಿ ಮಾಡದೇ, ಬಿದ್ದಿರುವ ಮನೆಗಳನ್ನು ಮತ್ತೆ ಕಟ್ಟದೇ, ಹಾಗೇ ಉಳಿಸಿಕೊಂಡಿದ್ದಾರೆ. ಏಕೆಂದರೆ ಎಂದಾದರೂ ಸಕರ್ಾರದ ಅಧಿಕಾರಿಗಳು ಬಂದು ಇದನ್ನು ಪರಿಶೀಲಿಸಿ ಹಣ ವಿತರಣೆ ಮಾಡಿಬಿಡುತ್ತಾರೋ ಎಂಬ ಆತಂಕ ಅವರಿಗೆ. ಇದು ಹೀಗೇ ಸಾಗಿದರೆ ಈ ಮಳೆಗಾಲವನ್ನು ನಾವು ಪೂರ್ಣ ಕಳೆದುಕೊಂಡಂತೆ. ಬರಲಿರುವ ದಿನಗಳಲ್ಲಿ ತರಕಾರಿಯ ಬೆಲೆ ಮುಗಿಲು ಮುಟ್ಟುವುದನ್ನು ನೋಡುತ್ತೇವೆ. ಕಬ್ಬು, ಜೋಳ, ಕೆಲವು ಧಾನ್ಯಗಳೂ ಕೂಡ ಅನ್ಯ ರಾಜ್ಯಗಳಿಂದ ಆಮದು ಮಾಡಿಕೊಳ್ಳಬೇಕಾದ ಸ್ಥಿತಿ ಬಂದರೂ ಅಚ್ಚರಿಯಿಲ್ಲ. ಯಾವ ಹಣದುಬ್ಬರವನ್ನು ಎರಡೂವರೆ ಪ್ರತಿಶತಕ್ಕಿಂತಲೂ ಕಡಿಮೆ ಇಡಬೇಕೆಂಬ ಪ್ರಯತ್ನವನ್ನು ಕೇಂದ್ರಸಕರ್ಾರ ಮಾಡಿಕೊಂಡು ಬಂದಿತೋ ಅದು ಬಹುಶಃ ನಾಲ್ಕಾರು ತಿಂಗಳುಗಳ ನಂತರ ಸಾಧ್ಯವಾಗಲಾರದು. ಆಗ ನಿಜವಾದ ಆಥರ್ಿಕ ದುಸ್ಥಿತಿಯ ಸಮಸ್ಯೆಗಳು ಕಣ್ಮುಂದೆ ಬರಲಿವೆ. ಅದಕ್ಕೂ ಮುನ್ನವೇ ಎಚ್ಚೆತ್ತುಕೊಳ್ಳಬೇಕಾದ ಸಮಯವಿದು. ಅದಾಗಲೇ ಈ ವರ್ಷ ಎರಡನೇ ಬಾರಿ ಕೊಡಬೇಕಾಗಿದ್ದ ಶಾಲಾ ಮಕ್ಕಳ ಸಮವಸ್ತ್ರವನ್ನು ನಿರಾಕರಿಸಲಾಗಿದೆ. ಮುಖ್ಯಮಂತ್ರಿಯ ಪರಿಹಾರನಿಧಿಯಿಂದ ಈ ಬಾರಿ ಬಡವರ ಚಿಕಿತ್ಸೆ ಇತ್ಯಾದಿಗಳಿಗೆ ಹಣ ಸಿಗಲಾರದು. ಅದನ್ನು ಉತ್ತರ ಕನರ್ಾಟಕದ ಪರಿಹಾರ ಕಾರ್ಯಕ್ಕೆ ವಗರ್ಾಯಿಸಲಾಗಿದೆ. ಇನ್ನು ವಿಶ್ವವಿದ್ಯಾಲಯಗಳಿಗೆ, ವಿಕಾಸದ ಅನೇಕ ಕಾರ್ಯಗಳಿಗೆ ಹಣ ಬಿಡುಗಡೆಯಾಗುವುದು ಕನಸಿನ ಮಾತೇ ಸರಿ. ಪ್ರವಾಹ ಕನರ್ಾಟಕದ ಗೋಣು ಮುರಿದುಬಿಟ್ಟಿದೆ. ಈ ಹೊತ್ತಲ್ಲಿ ಪುನರ್ ನಿಮರ್ಾಣಕ್ಕೆ ಕೇಂದ್ರದಿಂದ ಮಾರ್ಗದರ್ಶನ, ಸಮರ್ಥ ಅಧಿಕಾರಿಗಳು, ಆರಂಭಿಕ ಧನಸಹಾಯ ಎಲ್ಲವೂ ಬೇಕಿತ್ತು. ಯಾಕೋ ಅದನ್ನು ತರುವಲ್ಲಿ ನಮ್ಮ ಸಂಸದರು ಸೋತಂತೆ ಕಾಣುತ್ತದೆ.
ನಮ್ಮ ಸಂಸದರು ತಮಿಳುನಾಡಿನಿಂದ, ಕೇರಳದ ಸಂಸದರಿಂದ ಕಲಿಯುವುದು ಸಾಕಷ್ಟಿದೆ. ಅವರು ಹಠಕ್ಕೆ ಬಿದ್ದಾದರೂ ಕೊನೆಗೆ ರಾಜಿನಾಮೆ ಕೊಟ್ಟಾದರೂ ತಮ್ಮ ರಾಜ್ಯದ ಹಿತಾಸಕ್ತಿ ಉಳಿಸಿಕೊಳ್ಳಲು ಕೇಂದ್ರದ ಸಹಕಾರವನ್ನು ತರುತ್ತಾರೆ. ನಾಡಿನ ಗೌರವವನ್ನು ರಾಷ್ಟ್ರಮಟ್ಟದಲ್ಲಿ ಬಲಿಕೊಡಲು ಅವರೆಂದಿಗೂ ಸಿದ್ಧರಾಗುವುದಿಲ್ಲ. ಇದುವರೆಗೂ ಬಂದಿರುವ ಕೇಂದ್ರಸಕರ್ಾರಗಳೂ ಹಾಗೆಯೇ. ತಮಿಳುನಾಡು, ಕೇರಳಗಳೆಲ್ಲಾ ರಾಷ್ಟ್ರದಿಂದ ದೂರವಾಗುವ ಪ್ರತ್ಯೇಕತೆಯ ಭಾವನೆಯನ್ನು ಹೊಂದಿದೆ ಎಂಬ ಕಾರಣಕ್ಕೆ ಬಲುಬೇಗ ಪರಿಹಾರ ಘೋಷಿಸಿಬಿಡುತ್ತವೆ. ಕನರ್ಾಟಕ ರಾಷ್ಟ್ರದೊಂದಿಗೆ ಏಕರಸವಾಗಿ ಬೆರೆಯಲು ಸದಾ ಯತ್ನಿಸುವುದರಿಂದ ಅದಕ್ಕೆ ಯಾವಾಗಲೂ ಗೌರವ ಕಡಿಮೆಯೇ. ಮನೆಯಲ್ಲಿ ಒಳ್ಳೆಯ ಹುಡುಗನಿದ್ದರೆ ಆತನಿಗೆ ಸಿಗುವ ಸೌಲಭ್ಯಗಳು ಯಾವಾಗಲೂ ಕಡಿಮೆಯೇ. ಆತ ಎಂದಿಗೂ ಮನೆಬಿಟ್ಟು ಹೋಗಲಾರ ಎಂಬ ಧೈರ್ಯ. ತಂಟೆಕೋರ ಮಗನಿದ್ದು ಮನೆಬಿಟ್ಟು ಹೋಗುತ್ತೇನೆಂದು ಹೆದರಿಸುತ್ತಲಿದ್ದರೆ ಅಪ್ಪ-ಅಮ್ಮ ಅವನು ಕೇಳಿದ್ದನ್ನೆಲ್ಲಾ ಕೊಡಿಸುತ್ತಲೇ ಇರುತ್ತಾರೆ. ಕನರ್ಾಟಕದ ಕುರಿತಂತಹ ಕೇಂದ್ರದ ದಿವ್ಯ ನಿರ್ಲಕ್ಷ್ಯವನ್ನು ಕಂಡಾಗ ಹೀಗೆ ಅನಿಸುವುದು ಸಹಜ. ಮೋದಿಯವರ ಪ್ರತಿಯೊಂದು ನಡೆಯಲ್ಲಿಯೂ ಭವಿಷ್ಯದ ದೃಷ್ಟಿಕೋನ ಇದ್ದೇ ಇರುತ್ತದೆ ಎಂಬುದನ್ನು ನಂಬಿಕೊಂಡಿರುವ ಅನೇಕರಿಗೆ ಈ ನಿರ್ಲಕ್ಷ್ಯದ ಹಿಂದಿನ ದೃಷ್ಟಿ ಖಂಡಿತ ಅರಿವಾಗುತ್ತಿಲ್ಲ. ಗೊತ್ತಿದ್ದವರು ತಿಳಿಸಿಕೊಡಬೇಕು. ಒಂದೋ ಕನರ್ಾಟಕದ ಜನತೆಗೆ; ಇಲ್ಲವೇ ಸ್ವತಃ ಮೋದಿಗೆ! “