ಕೋಝಿಕ್ಕೋಡ್ ಜನವರಿ 21: ಗೋವಿಂದಪುರಂ ಮೂಲದ ದೀಪಕ್ ಯು ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸೋಶಿಯಲ್ ಮಿಡಿಯಾ ಕಂಟೆಂಟ್ ಕ್ರಿಯೆಟರ್ ಶಿಮ್ಜಿತಾ ಮುಸ್ತಫಾ ಅವರನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.

ವೈದ್ಯಕೀಯ ಕಾಲೇಜು ಪೊಲೀಸರ ವಿಶೇಷ ತಂಡವು ಮಧ್ಯಾಹ್ನದ ಸುಮಾರಿಗೆ ವಟಕಾರದಲ್ಲಿರುವ ಸಂಬಂಧಿಕರ ಮನೆಯಿಂದ ಶಿಮ್ಜಿತಾಳನ್ನು ವಶಕ್ಕೆ ತೆಗೆದುಕೊಂಡಿತು. ನಂತರ ಕೊಯಿಲಾಂಡಿ ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಆಕೆಯನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.
ಇದನ್ನೂ ಓದಿ – ಕೇರಳದ ಬಸ್ ಗಳಲ್ಲಿ ಹೊಸ ಟ್ರೆಂಡ್ – ಮಹಿಳೆಯರಿಂದ ಜೀವ ರಕ್ಷಣೆಗೆ ಪುರುಷರ ಹೊಸ ಐಡಿಯಾ
ಗಾರ್ಮೆಂಟ್ ಕಂಪನಿಯೊಂದರಲ್ಲಿ ಕೆಲಸದಲ್ಲಿದ್ದ ದೀಪಕ್ (41) ಭಾನುವಾರ ಬೆಳಿಗ್ಗೆ ಮಂಕಾವುವಿನಲ್ಲಿ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಬಸ್ ಪ್ರಯಾಣದ ಸಮಯದಲ್ಲಿ ದೀಪಕ್ ನಿಂದ ನನ್ನ ಜೊತೆ ದುರ್ವರ್ತನೆ ತೋರಿಸಿದ್ದಾರೆ ಎಂದು ಆರೋಪಿಸಿ ಶಿಮ್ಜಿತಾ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಳು. ಆ ವಿಡಿಯೋ ವೈರಲ್ ಆಗಿದ್ದು, ಇದರಿಂದ ಮನನೊಂದು ದೀಪಕ್ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ಇಡೀ ದೇಶದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನಲೆ ಅರೀಕೋಡ್ನ ಮಾಜಿ ಪಂಚಾಯತ್ ಸದಸ್ಯೆ ಶಿಮ್ಜಿತಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಎಫ್ಐಆರ್ ದಾಖಲಾಗಿತ್ತು. ಅಲ್ಲದೆ ನಿರೀಕ್ಷಣಾ ಜಾಮೀನು ಕೋರಿ ಕೋಝಿಕ್ಕೋಡ್ ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಪೊಲೀಸರು ಪ್ರಕರಣ ದಾಖಲಿಸಿದ ನಂತರ, ಅವರು ತಲೆಮರೆಸಿಕೊಂಡಿದ್ದರಿಂದ, ಅಧಿಕಾರಿಗಳು ಹುಡುಕಾಟವನ್ನು ತೀವ್ರಗೊಳಿಸಿದರು. ಅವರು ದೇಶ ಬಿಟ್ಟು ಹೋಗದಂತೆ ತಡೆಯಲು ಲುಕ್ಔಟ್ ನೋಟಿಸ್ ಸಹ ಹೊರಡಿಸಲಾಗಿತ್ತು.