Connect with us

LATEST NEWS

ಯೂತ್ ಫೋಟೋಗ್ರಫಿ ; 13 ವರ್ಷದ ಬಾಲಕ ಪರಂ ಜೈನ್ ಗೆ ಚಿನ್ನ

ಮಂಗಳೂರು : ಬೆಂಗಳೂರಿನ ಹೆಸರಾಂತ ಯೂತ್ ಫೋಟೋಗ್ರಫಿ ಸೊಸೈಟಿ (ವೈಪಿಎಸ್) ನಡೆಸಿದ ರಾಷ್ಟ್ರೀಯ ಮಟ್ಟದ ಫೋಟೋಗ್ರಫಿ ಸ್ಪರ್ಧೆಯಲ್ಲಿ ಮೂಡುಬಿದ್ರೆಯ 13 ವರ್ಷದ ಬಾಲಕ ಪರಂ ಜೈನ್ ಎರಡು ಗೋಲ್ಡ್ ಮೆಡಲ್ ಗೆದ್ದಿದ್ದಾನೆ.


ಸೊಸೈಟಿ ಪ್ರತಿ ವರ್ಷ ಈ ಸ್ಪರ್ಧೆ ಏರ್ಪಡಿಸುತ್ತಿದ್ದು ಈ ಬಾರಿ 308 ಮಂದಿ ಭಾಗವಹಿಸಿದ್ದರು. ಸ್ಪರ್ಧೆಗೆ 3308 ಫೋಟೋಗಳು ಬಂದಿದ್ದವು. ಯೂತ್ ವಿಭಾಗದಲ್ಲಿ ಪರಂ ಜೈನ್ ಭಾಗವಹಿಸಿದ್ದು ಟ್ರಾವೆಲ್ ಸೆಕ್ಷನ್ ಮತ್ತು ಬ್ಲಾಕ್ ಅಂಡ್ ವೈಟ್ ಸೆಕ್ಷನ್ ನಲ್ಲಿ ಎರಡು ಗೋಲ್ಡ್ ಮೆಡಲ್ ಪಡೆದಿದ್ದಾನೆ.


ಬ್ಲಾಕ್ ಅಂಡ್ ವೈಟ್ ಸೆಕ್ಷನ್ನಲ್ಲಿ ಪರಂ ಜೈನ್ ಕೇರಳದ ಕಣ್ಣೂರಿನಲ್ಲಿ ಕ್ಲಿಕ್ಕಿಸಿದ ತೆಯ್ಯಂ ಜನಪದ ನೃತ್ಯದ ಬಣ್ಣಗಾರಿಕೆಯ ಚಿತ್ರ ಪ್ರಶಸ್ತಿ ಪಡೆದಿದ್ದರೆ, ‘ಲಾಂಗ್ ಲೆಗ್ ಮಾರ್ಚ್’ ವಿಭಾಗದಲ್ಲಿ ಮೂಡುಬಿದ್ರೆಯ ಆಳ್ವಾಸ್ ಫೆಸ್ಟ್ ನಲ್ಲಿ ಕ್ಲಿಕ್ಕಿಸಿದ ಚಿತ್ರ ಪ್ರಶಸ್ತಿ ಗೆದ್ದಿದೆ. ಪರಂ ಜೈನ್, ಮೂಡುಬಿದ್ರೆಯ ಜಿನೇಶ್ ಪ್ರಸಾದ್ ಮತ್ತು ರಮ್ಯ ಬಳ್ಳಾಲ್ ದಂಪತಿಯ ಪುತ್ರನಾಗಿದ್ದು ರೋಟರಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ 8ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ.

 

Facebook Comments

comments