LATEST NEWS
ಶಾಂಭವಿ ನದಿಯಲ್ಲಿ ಮುಳುಗಿ ಬೆಂಗಳೂರಿನ ಯುವಕ ಸಾವು
ಮಂಗಳೂರು ಸೆಪ್ಟೆಂಬರ್ 6: ಶಾಂಭವಿ ನದಿಯಲ್ಲಿ ಈಜಾಡಲು ತೆರಳಿದ್ದ ಮೂವರಲ್ಲಿ ಓರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ. ಮೃತನನ್ನು ಬೆಂಗಳೂರು ನಿವಾಸಿ 32 ವರ್ಷದ ಅನಿಲ್ ಎಂದು ಗುರುತಿಸಲಾಗಿದೆ.
ಬೆಂಗಳೂರಿನಿಂದ ದಕ್ಷಿಣಕನ್ನಡ ಜಿಲ್ಲೆಗೆ ಆಗಮಿಸಿದ 7 ಮಂದಿ ಯುವಕರು, ಕರ್ನಿರೆ ಬಳಿಯ ಶಾಂಭವಿ ನದಿಯ ಕಡೆಗೆ ಬಂದಿದ್ದು, ನದಿ ನೀರಿನಲ್ಲಿ ಈಜಾಡಲು ಮೂವರೂ ನೀರಿಗಿಳಿದ್ದಿದ್ದರು. ಈ ವೇಳೆ ಈಜಾಡುತ್ತಿದ್ದ ಮೂವರು ನೀರಿನ ಸೆಳೆತಕ್ಕೆ ಸಿಕ್ಕಿದ್ದು, ನೀರು ಅವರನ್ನು ಕೊಚ್ಚಿಕೊಂಡು ಹೋಗಿತ್ತು. ತಕ್ಷಣ ಅಲ್ಲೇ ಇದ್ದ ಸ್ಥಳೀಯರು ನೀರಿಗಿಳಿದು ಇಬ್ಬರನ್ನು ರಕ್ಷಿಸಿದ್ದಾರೆ.
ಕೊನೆಯದಾಗಿ ಅನಿಲ್‍ನನ್ನು ರಕ್ಷಿಸುವಲ್ಲಿ ಪ್ರಯತ್ನಪಟ್ಟರೂ ಆತ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾನೆ. ಸ್ಥಳಕ್ಕೆ ಮೂಲ್ಕಿ ಠಾಣಾ ಪೊಲೀಸರು ಭೇಟಿ ನೀಡಿ ಪರೀಶೀಲನೆ ನಡೆಸಿದ್ದು, ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Facebook Comments
You may like
-
ಕಡಬ ಹೆದ್ದಾರಿಯಲ್ಲಿ ಭೀಕರ ಅಪಘಾತ; ಒಂದು ಬಲಿ..
-
ಮಹಿಳೆಯನ್ನು ಚುಡಾಯಿಸಿದ ವ್ಯಕ್ತಿಗೆ ಸಾರ್ವಜನಿಕರಿಂದ ಥಳಿತ; ಬಿದ್ದ ಏಟಿಗೆ ಸ್ಥಳದಲ್ಲೆ ಸಾವು
-
ಪರಿಸರ ಉಳಿಸುವಂತೆ ಹಸಿರು ದಳದಿಂದ ಆರಂಭವಾಗಿದೆ ಜಾಗೃತಿಯ ಆಗ್ರಹ…..
-
ಹುಬ್ಬಳ್ಳಿಯಲ್ಲಿ “ಫ್ರೀ ವೇಡ್ಡಿಂಗ್ ಶೂಟ್” ಮಾಡುವಾಗ ದುರಂತ…ಇಬ್ಬರ ಮೃತದೇಹ ಪತ್ತೇ
-
ಕಾಲೇಜು ವಿಧ್ಯಾರ್ಥಿನಿಗೆ ಅಮಲು ಪದಾರ್ಥ ಕುಡಿಸಿ ಅತ್ಯಾಚಾರ – ಆರೋಪಿ ಸೆರೆ
-
ಶಿವಮೊಗ್ಗ ಹುಣಸೋಡು ಗ್ರಾಮದ ಬಳಿ ಕ್ರಷರ್ನಲ್ಲೂ ಸ್ಫೋಟ, 15 ಕಾರ್ಮಿಕರ ಸಾವು?
You must be logged in to post a comment Login