Connect with us

BELTHANGADI

ಹೊಳೆದಾಟುತ್ತಿದ್ದ ವೇಳೆ ಕಾಲುಜಾರಿ ನೀರಿಗೆ ಬಿದ್ದು ಯುವಕ ಸಾವು

ಬೆಳ್ತಂಗಡಿ ನವೆಂಬರ್ 07: ಹೊಳೆದಾಟುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದು ಯುವಕ ಮೃತಪಟ್ಟಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಕುಡುಪ್ಪಾರು ಬಳಿಯ ಪಂಜಾಲ ನಡೆದಿದೆ.


ಮೃತ ಯುವಕನನ್ನು ಮೊಗ್ರು ಗ್ರಾಮದ ಮುಗೆರಡ್ಕ, ಅಲೆಕ್ಕಿ ನಿವಾಸಿ ಧರ್ಣಪ್ಪ ಗೌಡ ಮತ್ತು ಯಮುನಾ ದಂಪತಿ ಪುತ್ರ ದುರ್ಗೇಶ (17) ಎಂದು ಗುರುತಿಸಲಾಗಿದೆ.

ದುರ್ಗೆಶ ಅವರು ತಮ್ಮ ಸಹೋದರ ಹಾಗೂ ಸಹೋದರಿಯೊಂದಿಗೆ ಸಂಬಂಧಿಕರಾದ ಕಳೆಂಜ ಗ್ರಾಮದ ಕುಡುಪ್ಪಾರು ಮಾರ್ವೆಲ್ ನಾರಾಯಣ ಗೌಡ ಅವರ ಮನೆಗೆ ಬಂದಿದ್ದರು. ತಮ್ಮ ಸಹೋದರ ಹಾಗೂ ಸಹೋದರಿಯೊಂದಿಗೆ ಮನೆ ಸಮೀಪದ ಕುಡುಪ್ಪಾರು ಬಳಿ ಇರುವ ಪಂಜಾಲ ಎಂಬಲ್ಲಿ ಹೊಳೆಯನ್ನು ದಾಟುತ್ತಿರುವ ವೇಳೆ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತ ಶರೀರದ ಮರಣೋತ್ತರ ಪರೀಕ್ಷೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ತರಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ