ಆತ್ಮಹತ್ಯೆ ಯತ್ನಿಸಿ ಜೀವ ಉಳಿಸಿಕೊಳ್ಳಲು ಈಜಿ ದಡ ಸೇರಿದ ಪಾಗಲ್ ಪ್ರೇಮಿ

ಮಂಗಳೂರು ಮಾರ್ಚ್ 7: ಪಾಗಲ್ ಪ್ರೇಮಿಯೊಬ್ಬ ಪ್ರೇಮವೈಫಲ್ಯದ ಹಿನ್ನಲೆಯಲ್ಲಿ ಆತ್ಮಹತ್ಯೆಗೆ ನದಿಗೆ ಹಾರಿ ಕೊನೆಗೆ ಜೀವ ಉಳಿಸಿಕೊಳ್ಳಲು ಈಜಿ ದಡ ಸೇರಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಕಾಸರಗೋಡಿನ ಮಂಜೇಶ್ವರ ಬಳಿಯ ತೂಮಿನಾಡು ನಿವಾಸಿ ನೌಫಲ್ (23) ನದಿಗೆ ಹಾರಿದ್ದ ಯುವಕ. ಈತ ಪ್ರೇಮ ವೈಫಲ್ಯದ ಹಿನ್ನಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಮಂಗಳೂರು – ಉಳ್ಳಾಲ ಸಂಪರ್ಕಿಸುವ ನೇತ್ರಾವತಿ ಸೇತುವೆಯ ಮೇಲ್ಭಾಗದಿಂದ ಹಾರಿದ್ದು ಕೊನೆಯ ಕ್ಷಣದಲ್ಲಿ ಈಜುತ್ತಾ ಸೇತುವೆಯ ಪಿಲ್ಲರ್ ಹತ್ತಿ ಕುಳಿತಿದ್ದಾನೆ.

ನೌಫಲ್ ತನ್ನ ಸ್ನೇಹಿತನ ಜೊತೆಗೆ ಟೆಂಪೊ ಚಲಾಯಿಸಿಕೊಂಡು ಮಂಗಳೂರು ಕಡೆಗೆ ಹೊರಟಿದ್ದನು. ಆದರೆ ನೇತ್ರಾವತಿ ಸೇತುವೆ ಮಧ್ಯೆ ತಲುಪಿದಾಗ ತನಗೆ ವಾಂತಿ ಬರುತ್ತಿದೆ ಎಂದು ಹೇಳಿ ಟೆಂಪೊ ನಿಲ್ಲಿಸಿದ್ದಾನೆ. ಬಳಿಕ ಸೇತುವೆಯ ಬದಿಗೆ ಹೋದ ನೌಫಾಲ್, ವಾಂತಿ ಮಾಡುವ ನೆಪದಲ್ಲಿ ನೇತ್ರಾವತಿ ನದಿಗೆ ಹಾರಿದ್ದಾನೆ. ಆದರೆ ನದಿಗೆ ಬಿದ್ದ ಯುವಕ ಕೊನೆಗೆ ದೀವ ಉಳಿಸಿಕೊಳ್ಳಲು ಈಜತೊಡಗಿದ್ದು, ಸೇತುವೆಯ ಪಿಲ್ಲರ್ ಬಳಿಗೆ ತೆರಳಿ ಸ್ಲ್ಯಾಬ್ ಹತ್ತಿ ಕುಳಿತಿದ್ದಾನೆ.

ಮಂಗಳೂರು ನಗರ ಟ್ರಾಫಿಕ್ ಪೊಲೀಸರು, ಸಾರ್ವಜನಿಕರ ಸಹಕಾರದಿಂದ ನೌಫಲ್‍ನನ್ನು ಮೇಲ್ಗಡೆ ತಂದು ಬಳಿಕ ಕಂಕನಾಡಿ ನಗರ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಈ ವೇಳೆ ತಾನು ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದೆ. ಆದರೆ ಪ್ರೇಮ ವೈಫಲ್ಯಗೊಂಡ ಕಾರಣ ಸಾಯಲು ನಿರ್ಧರಿಸಿ ನದಿಗೆ ಹಾರಿದ್ದೆ ಎಂದು ಹೇಳಿಕೆ ನೀಡಿದ್ದಾನೆ.

Facebook Comments

comments