Connect with us

KARNATAKA

ಅಶ್ಲೀಲ ವೆಬ್‌ಸೈಟ್‌ನಲ್ಲಿ ತನ್ನದೇ ವೀಡಿಯೋ ಕಂಡು ದಂಗಾದ ಯುವಕ!

ಬೆಂಗಳೂರು, ಫೆಬ್ರವರಿ 01: ಯುವಕನೊಬ್ಬ ಅಶ್ಲೀಲ ವೆಬ್‌ಸೈಟ್‌ ವೀಕ್ಷಿಸುತ್ತಿದ್ದಾಗ ತನ್ನದೇ ವೀಡಿಯೋ ಕಂಡು ದಂಗಾಗಿದ್ದಾನೆ. ಈ ಸಂಬಂಧ ಆಸ್ಟಿನ್‌ಟೌನ್‌ನ 25 ವರ್ಷದ ಯುವಕ ಕೇಂದ್ರ ವಿಭಾಗದ ಸೆನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

ಖಾಸಗಿ ಕಂಪೆನಿಯ ಉದ್ಯೋಗಿಯಾಗಿರುವ ಈತ ತನ್ನ ಗೆಳತಿ ಜತೆ ನಗರದ ಹೊಟೇಲೊಂದರಲ್ಲಿ ಖಾಸಗಿ ಕ್ಷಣಗಳನ್ನು ಕಳೆದಿದ್ದಾರೆ. ಆ ದೃಶ್ಯಗಳನ್ನು ಯಾರೋ ಸೆರೆ ಹಿಡಿದು, ವಿವಿಧ ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಇದು ಜ.21ರಂದು ಯುವಕನ ಗಮನಕ್ಕೆ ಬಂದಿದೆ.

ಬಳಿಕ ಬೇರೆ ವೆಬ್‌ಸೈಟ್‌ಗಳಲ್ಲೂ ಈ ವೀಡಿಯೋ ಇರುವುದು ಪತ್ತೆಯಾಗಿದೆ.ವೀಡಿಯೋದಲ್ಲಿ ಮುಖಗಳು ಸರಿಯಾಗಿ ಕಾಣುತ್ತಿಲ್ಲ. ಆದರೆ, ದೇಹದಲ್ಲಿರುವ ಮಚ್ಚೆ ಹಾಗೂ ಇತರ ಗುರುತುಗಳು ತನಗೆ ಪೂರಕವಾಗಿವೆ. ಯಾರೋ ಉದ್ದೇಶಪೂರ್ವಕವಾಗಿಯೇ ಚಿತ್ರೀಕರಿಸಿ ಅಪ್‌ಲೋಡ್‌ ಮಾಡಿದ್ದಾರೆ ಎಂದು ಯುವಕ ಆರೋಪಿಸಿದ್ದಾನೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

Advertisement
Click to comment

You must be logged in to post a comment Login

Leave a Reply