ನವದೆಹಲಿ ಎಪ್ರಿಲ್ 28: ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪುಟ್ಟ ಅಭಿಮಾನಿಯೊಬ್ಬ ಹಸ್ತಾಕ್ಷರ (Autograph) ಸಿಗದಿದ್ದಕ್ಕೆ ಮೈದಾನದಲ್ಲೇ ಬ್ಯಾಟ್ ಎಸೆದು ಅತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ವಿಡಿಯೊದಲ್ಲಿರುವಂತೆ, ಪುಟ್ಟ ಬಾಲಕನೊಬ್ಬ ಬ್ಯಾಟ್ ಹಿಡಿದು ನೆಚ್ಚಿನ ಆಟಗಾರ ಕೊಹ್ಲಿ ಬರುವುದನ್ನೇ ಕಾತರದಿಂದ ಕಾಯುತ್ತಿರುತ್ತಾನೆ. ಕೊಹ್ಲಿ ಹತ್ತಿರ ಬರುತ್ತಿದ್ದಂತೆ ಬಾಲಕ ಆಟೋಗ್ರಾಫ್ಗಾಗಿ ಅವರ ಬಳಿ ಸಾಗಲು ಪ್ರಯತ್ನಿಸುತ್ತಾನೆ. ಆದರೆ ಅಷ್ಟರಲ್ಲಿ ಭದ್ರತಾ ಸಿಬ್ಬಂದಿ ಬಾಲಕನನ್ನು ತಡೆದಿದ್ದಾರೆ. ಕೊಹ್ಲಿ ಈ ದೃಶ್ಯವನ್ನು ಗಮನಿಸದೆಯೇ ವೇಗವಾಗಿ ಮುಂದೆ ಸಾಗಿದ್ದಾರೆ.
ತನ್ನ ನೆಟ್ಟಿನ ಕ್ರಿಕೆಟಿಗ ಹತ್ತಿರದಲ್ಲೇ ಇದ್ದರೂ ಮಾತನಾಡಿಸಲು ಸಾಧ್ಯವಾಗದಿದ್ದಕ್ಕೆ ಬಾಲಕ ಅತೀವ ಬೇಸರಕ್ಕೊಳಗಾಗಿದ್ದಾನೆ. ಕೋಪ ಮತ್ತು ನೋವಿನಿಂದ ಕೈಯಲ್ಲಿದ್ದ ಬ್ಯಾಟನ್ನು ನೆಲಕ್ಕೆ ಎಸೆದು, ಜೋರಾಗಿ ಅಳುತ್ತಾ ಪೋಷಕರ ಬಳಿ ತೆರಳಿದ್ದಾನೆ. ಸಾಮಾನ್ಯವಾಗಿ ಅಭಿಮಾನಿಗಳೊಂದಿಗೆ ಆತ್ಮೀಯವಾಗಿ ನಡೆದುಕೊಳ್ಳುವ ಕೊಹ್ಲಿ, ಈ ಬಾರಿಯೂ ಬೇಕಂತಲೇ ನಿರಾಕರಿಸಿದರೇ ಅಥವಾ ಅವಸರದಲ್ಲಿದ್ದ ಕಾರಣ ಗಮನಿಸಲಿಲ್ಲವೇ ಎಂಬುದು ಸ್ಪಷ್ಟವಾಗಿಲ್ಲ. ಸದ್ಯ ನೆಟ್ಟಿಗರು ಈ ವಿಡಿಯೊವನ್ನು ಹಂಚಿಕೊಳ್ಳುತ್ತಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.
Virat Kohli Little fan broke down 😭💔
Virat kohli ignored this little fan who was waiting to get his autograph 😭
Wait for that child frustration 😭💔 pic.twitter.com/BszA4JX5NW
— Jeet (@JeetN25) April 27, 2026