ಸಿದ್ದರಾಮಯ್ಯ ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯ ಜಿಹಾದಿ, ಗೂಂಡಾ, ಮಾಫಿಯಾ ಕೇಂದ್ರವಾಗಿ ಮಾರ್ಪಡಲಿದೆ – ಯೋಗಿ ಆದಿತ್ಯನಾಥ್

ಸುಳ್ಯ ಮೇ 8: ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಲ್ಲಿ ರಾಜ್ಯದಲ್ಲಿ ಮತ್ತೆ ಜಿಹಾದಿ, ಗೂಂಡಾ ಹಾಗೂ ಮಾಫಿಯಾಗಳ ಕೇಂದ್ರವನ್ನಾಗಿ ಮಾಡಲಿದ್ದಾರೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ.

ಸುಳ್ಯದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಅಂಗಾರ ಪರ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು‌. ಸಿದ್ಧರಾಮಯ್ಯರಿಗೆ ತಾನು ರಾಜ್ಯಕ್ಕೆ ಬರುವುದಕ್ಕೆ ವಿರೋಧವಿದೆ. ಸಿದ್ಧರಾಮಯ್ಯ ಜಾತಿ-ಜಾತಿಗಳನ್ನು , ಧರ್ಮಗಳನ್ನು ಒಡೆಯುವ ಕೆಲಸ ಮಾಡುವ ಬದಲು ರಾಜ್ಯದ ಜನತೆಯನ್ನು ಒಗ್ಗೂಡಿಸುವ ಕೆಲಸವನ್ನು ಮಾಡಬೇಕಿತ್ತು. ತಾನೊಬ್ಬ ಗೋ ಪ್ರೇಮಿ ಹಾಗೂ ಗೋರಕ್ಷಕನಾಗಿರುವ ಕಾರಣ ತಾನು ರಾಜ್ಯಕ್ಕೆ ಬರುವುದು ಸಿದ್ಧರಾಮಯ್ಯರಿಗೆ ಪಥ್ಯವಾಗುತ್ತಿಲ್ಲ. ರಾಜ್ಯದಲ್ಲಿ ಅಕ್ರಮ ಗೋಹತ್ಯೆ, ಗೋ ವಧೆ ಕೇಂದ್ರಗಳನ್ನು ಮುಚ್ಚುವ ಬದಲು, ಇವುಗಳಿಗೆ ಉತ್ತೇಜನ ನೀಡುವ ಕಾರ್ಯ ನಡೆಸುತ್ತಿದ್ದಾರೆ.

ತಾನು ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮೊದಲು ರಾಜ್ಯದಲ್ಲಿ ಗೂಂಡಾಗಳ, ಜಿಹಾದಿಗಳ ಕೇಂದ್ರವಾಗಿ ಮಾರ್ಪಟ್ಟಿತು. ಆದರೆ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆಯುವುದಕ್ಕೆ ಮೊದಲೇ ಈ ಎಲ್ಲಾ ಶಕ್ತಿಗಳನ್ನು ಮಟ್ಟ ಹಾಕುವ ಕೆಲಸವನ್ನು ಮಾಡಲಾಗಿದೆ. ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಅಕ್ರಮ ಗೋ ವಧಾ ಕೇಂದ್ರಗಳನ್ನು ಶಾಶ್ವತವಾಗಿ ಮುಚ್ಚಲಾಗಿದೆ ಎಂದರು.

ಉತ್ತರಪ್ರದೇಶದ 86 ಲಕ್ಷ ಕೃಷಿಕರ ಸಾಲಮನ್ನಾ ಮಾಡಿದ್ದರೆ, ಕಾಂಗ್ರೆಸ್ ಸರಕಾರ ಅಡಿಕೆ ಕೃಷಿಯನ್ನೇ ನಾಶ ಮಾಡುವಂತಹ ಪ್ರಕ್ರಿಯೆಗೆ ಮುಂದಾಗಿತ್ತು. ಲೋಕಸಭೆಯಲ್ಲಿ ಅಡಿಕೆಯನ್ನು ಹಾನಿಕಾರಕ ಎಂದು ಬಿಂಬಿಸಿ ಅಡಿಕೆ ಕೃಷಿಯನ್ನೇ ನಾಶ ಮಾಡುವ ಪ್ರಯತ್ನ ನಡೆಸಿತ್ತು ಎಂದು ಅವರು ಆರೋಪಿಸಿದರು.

Facebook Comments

comments