Connect with us

    LATEST NEWS

    ಯೆಸ್ ಬ್ಯಾಂಕ್ ಆರ್ಥಿಕ ಮುಗ್ಗಟ್ಟಿಗೆ ಬಂದ್ ಆದ ಫೋನ್ ಪೇ

    ಯೆಸ್ ಬ್ಯಾಂಕ್ ಆರ್ಥಿಕ ಮುಗ್ಗಟ್ಟಿಗೆ ಬಂದ್ ಆದ ಫೋನ್ ಪೇ

    ಮಂಗಳೂರು ಮಾರ್ಚ್ 6: ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಖಾಸಗಿ ಬ್ಯಾಂಕ್ ಎಸ್ ಬ್ಯಾಂಕ್ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ವ್ಯವಹಾರದ ಮೇಲೆ ನಿಷೇಧ ಹೇರಿದ್ದು, ಯೆಸ್ ಬ್ಯಾಂಕ್ ಪಾಲುದಾರಿಕೆ ಹೊಂದಿರುವ ಫೋನ್ ಪೇ ಮೇಲೆ ನೇರ ಪರಿಣಾಮ ಬೀರಿದ್ದು, ಫೋನ್ ಪೇ ಯಲ್ಲಿ ಸೇವೆಗಳು ಸ್ಥಗಿತಗೊಂಡಿದೆ.

    ದಿವಾಳಿ ಅಂಚಿಗೆ ತಲುಪಿರುವ ಖಾಸಗಿ ಬ್ಯಾಂಕ್ ಯೆಸ್ ಬ್ಯಾಂಕ್ ವಿರುದ್ದ ಆರ್ ಬಿಐ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಹಣಕಾಸು ವ್ಯವಹಾರಗಳ ಮೇಲೆ ಕೆಲವು ನಿರ್ಬಂಧಗಳನ್ನು ಹೇರಿದೆ.

    ಹಣ ವರ್ಗಾವಣಾ ಮೊಬೈಲ್ ಆಪ್ ಫೋನ್ ಪೇ ಯೆಸ್ ಬ್ಯಾಂಕ್ ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿತ್ತು. ಆದರೆ ಇದೀಗ ಯೆಸ್ ಬ್ಯಾಂಕ್ ಮೇಲಿನ ದಿಢೀರ್ ಬೆಳವಣಿಗೆಯಿಂದ ಫೋನ್ ಪೇ ಸೇವೆಗಳು ಸಂಪೂರ್ಣ ಸ್ಥಗಿತಗೊಂಡಿದೆ.

    ನಾವು ತಾತ್ಕಾಲಿಕವಾಗಿ ಲಭ್ಯವಿಲ್ಲ. ಅನಿಗದಿತ ನಿರ್ವಹಣೆಯಲ್ಲಿದ್ದೇವೆ. ನಮ್ಮ ಅಲಭ್ಯತೆಗಾಗಿ ನಾವು ಕ್ಷಮೆ ಕೇಳುತ್ತೇವೆ ಎಂದು ಫೋನ್ ಪೇ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹೇಳಿಕೊಂಡಿದೆ.

    ಪ್ರೀತಿಯ ಗ್ರಾಹಕರೇ, ದೀರ್ಘಕಾಲದ ಅಡಚಣೆಗಾಗಿ ನಾವು ವಿಷಾದಿಸುತ್ತೇವೆ. ನಮ್ಮ ಪಾಲುದಾರ ಬ್ಯಾಂಕ್ ಯೆಸ್ ಬ್ಯಾಂಕ್ ನ್ನು ಆರ್ ಬಿಐ ನಿಷೇಧಿಸಿದೆ. ಸೇವೆಗೆ ಮರಳುವಂತಾಗಲು ನಮ್ಮ ತಂಡ ಶ್ರಮಿಸುತ್ತಿದೆ. ಕೆಲವೇ ಗಂಟೆಗಳಲ್ಲಿ ಮತ್ತೆ ಮರಳಿ ಬರುತ್ತೇವೆ ಎಂದು ನಂಬಿದ್ದೇವೆ. ನಿಮ್ಮ ತಾಳ್ಮೆಗೆ ಧನ್ಯವಾದಗಳು ಎಂದು ಫೋನ್ ಪೇ ಸಿಇಓ ಸಮೀರ್ ನಿಗಮ್ ಟ್ವೀಟ್ ಮಾಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply