Connect with us

    LATEST NEWS

    ಯಕ್ಷಗಾನ ವಿದ್ವಾಂಸ ಛಂದೋಬ್ರಹ್ಮ ಶಿಮಂತೂರು ನಾರಾಯಣ ಶೆಟ್ಟಿ ವಿಧಿವಶ.

    ಮಂಗಳೂರು ಅಗಸ್ಟ್ 26: ಯಕ್ಷಲೋಕದ ಛಂದೋ ಬ್ರಹ್ಮ ಎಂದೇ ಹೆಸರಾಗಿದ್ದ ಡಾ | ಶಿಮಂತೂರು ನಾರಾಯಣ ಶೆಟ್ಟಿಯವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. 86 ವರುಷ ವಯಸ್ಸಾಗಿದ್ದ ಅವರು ಕಳೆದ ಒಂದು ವಾರದಿಂದ ಅನಾರೋಗ್ಯದಿಂದಾಗಿ ಮಂಗಳೂರಿನ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪ್ರಸ್ತುತ ಮಂಗಳೂರಿನ ಮುಲ್ಕಿ ಸಮೀಪದ ಎಳತ್ತೂರು ಗುತ್ತು ಎಂಬಲ್ಲಿ ನೆಲೆಸಿದ್ದ ಡಾ | ನಾರಾಯಣ ಶೆಟ್ಟಿ ಅವರು, ಯಕ್ಷಗಾನ ಸಾಹಿತ್ಯದಲ್ಲಿ ಛಂದಸ್ಸಿನ ಬಗೆಗೆ ಅಪಾರವಾದ ಅಧ್ಯಯನ ನಡೆಸಿ ಹಂಪಿಯ ಕನ್ನಡ ವಿವಿಯಿಂದ ಡಿ. ಲಿಟ್‌. ಪದವಿಯನ್ನೂ ಪಡೆದಿದ್ದರು.


    ಯಕ್ಷಗಾನ ಛಂದಸ್ಸಿನ ಬಗ್ಗೆ ಅಪಾರವಾದ ಜ್ಞಾನ ಹೊಂದಿ ಇವರು ತಮ್ಮ 13ನೇ ವಯಸ್ಸಿನಲ್ಲಿ ಕಟೀಲು ಕ್ಷೇತ್ರ ಮಹಾತ್ಮೆ ಪ್ರಸಂಗ ಬರೆದಿದ್ದರು. ಅನೇಕ ಯಕ್ಷಗಾನ ಆಸಕ್ತರಿಗೆ ಮಾರ್ಗದರ್ಶನ ನೀಡಿದ್ದಾರೆ ಅವರನ್ನು ಛಂದೋಬ್ರಹ್ಮ ಎಂದು ಕರೆಯುತ್ತಾರೆ.
    ಡಾ. ಎನ್. ನಾರಾಯಣ ಶೆಟ್ಟರು, ಡಾ. ಶಿಮಂತೂರು ನಾರಾಯಣ ಶೆಟ್ಟರೆಂದೂ ಕರೆಯಲ್ಪಡುತ್ತಾರೆ. ಹೆಚ್ಚಿನವರಿಗೆ ಆಸಕ್ತಿಯಿರದ, ಅಭಿರುಚಿ ಮೂಡಿಸದ ಮತ್ತು ಕಬ್ಬಿಣದ ಕಡಲೆಯೆಂದೇ ಪರಿಗಣಿಸಲ್ಪಟ್ಟ ಕ್ಷೇತ್ರ ಯಕ್ಷಗಾನ ಸಾಹಿತ್ಯ ಕ್ಷೇತ್ರ. ಇಂತಹ ಒಂದು ಕ್ಷೇತ್ರದಲ್ಲಿ ಸುಧೀರ್ಘವಾದ ಸಮಯವನ್ನು ವ್ಯಯಿಸಿ ಯಕ್ಷಗಾನ ಛಂದೋಂಬುಧಿ ಎನ್ನುವ ಗ್ರಂಥದ ಮುಖೇನ ಅನೇಕ ಛಂದೋಬಂಧಗಳ ಅಮೂಲಾಗ್ರ ವಿವರಣೆಯನ್ನು ನೀಡಿದ ಪ್ರಸ್ತುತ ಕಾಲಘಟ್ಟದ ಘನ ವಿದ್ವಾಂಸ ಡಾ. ಎನ್. ನಾರಾಯಣ ಶೆಟ್ಟಿಯವರು. ಯಕ್ಷಗಾನ ಛಂದಸ್ಸಿನ ಕುರಿತಾಗಿ ಇವರು ಒಟ್ಟು ನಾಲ್ಕು ಕೃತಿಗಳನ್ನು ರಚಿಸಿದ್ದಾರೆ. ಯಕ್ಷಗಾನ ಛಂದೋಂಬುಧಿ, ಕನ್ನಡದ ಅನರ್ಘ್ಯ ಛಂದೋರತ್ನಗಳು, ವಿ-ಚಿತ್ರಾ ತ್ರಿಪದಿ, ದೇಸೀ ಛಂದೋಬಂಧಗಳ ಪುದುವಟ್ಟು. ಇವುಗಳಲ್ಲಿ ಯಕ್ಷಗಾನ ಛಂದೋಂಬುಧಿ ಅತ್ಯಂತ ಗೌರವಕ್ಕೆ ಪ್ರಾಪ್ತವಾಗಿದೆ. ಮಾತ್ರವಲ್ಲದೆ ಇದೇ ಕೃತಿಗೆ ಡಾಕ್ಟರೇಟ್ ಪದವಿ ನಾರಾಯಣ ಶೆಟ್ಟರಿಗೆ ಲಭಿಸಿದೆ.


    ಒಟ್ಟು ಹದಿನಾರು ಯಕ್ಷಗಾನ ಪ್ರಸಂಗಗಳನ್ನು ರಚಿಸಿರುವ ಇವರು, ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಎನ್ನುವ ಕಾಲ್ಪನಿಕ ಪ್ರಸಂಗವನ್ನು ದಿ. ಲಕ್ಷ್ಮೀನಾರಾಯಣ ಆಸ್ರಣ್ಣರ ಪ್ರೇರಣೆಯಿಂದ ರಚಿಸಿದ್ದು ತಮ್ಮ 13 ನೆಯ ವಯಸ್ಸಿನಲ್ಲಿ ತಾನು ಎಸ್. ಎಸ್. ಎಲ್. ಸಿಯಲ್ಲಿರುವಾಗ ಗೋವಾ ದುರಂತವೆನ್ನುವ ಪ್ರಸಂಗವನ್ನು ರಚಿಸಿದರು. ಶಿಕ್ಷಣ ತರಬೇತಿಯಲ್ಲಿರುವ ಸಮಯದಲ್ಲಿ ಕೃಷಿ ವಿಜಯ, ಪಂಜುರ್ಲಿ ಸಂಧಾನ, ಕಟ್ಟೆಪುಣಿತ ಕಾಳಗ ಎನ್ನುವ ಮೂರು ಪ್ರಸಂಗಗಳನ್ನು ರಚಿಸಿದ್ದರು. ಆ ನಂತರ ಸೊರ್ಕುದ ಸಿರಿಗಿಂಡೆ, ಬಿರ್ದ್ ದ ಬೈರವೆರ್, ಬೆಂಗ್ ದ ಬಾಲೆನಾಗಿ ರಾಜಮುದ್ರಿಕಾ, ಶ್ರೀ ಕೃಷ್ಣ ದೇವರಾಯ ರಚಿಸಿದರೆ, ದೀಕ್ಷಾ ಕಂಕಣ ಎನ್ನುವ ಪ್ರಸಂಗವನ್ನು ಬರೆದರು. ಒಟ್ಟಾರೆಯಾಗಿ 17 ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply