Connect with us

LATEST NEWS

ಗ್ರಾಮಪಂಚಾಯತ್ ಅಧ್ಯಕ್ಷನ ವಿರುದ್ದ ವಾಟ್ಸಪ್ ಸ್ಟೇಟಸ್ ಹಾಕಿದ್ದಕ್ಕೆ ಗ್ರಾಮಸ್ಥನ ಮೇಲೆ ಕಾರು ಹರಿಸಿ ಕೊಲೆ ಆರೋಪ – ಅಧ್ಯಕ್ಷ ಪೊಲೀಸ್ ವಶಕ್ಕೆ

ಕುಂದಾಪುರ ಜೂನ್ 6: ಶನಿವಾರ ರಾತ್ರಿ ಯಡಮೊಗ್ರಾಮದ ನಿವಾಸಿಯಾದ ಉದಯ್ ಎಂಬವರಿಗೆ ಅದೇ ಗ್ರಾಮದ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳ್ ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಉದಯ್ ಸಾವನಪ್ಪಿದ್ದರು. ಈಗ ಈ ಪ್ರಕರಣದಲ್ಲಿ ತಿರುವು ಪಡೆದುಕೊಂಡಿದ್ದು, ಗ್ರಾಮಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳ್ ಅವರ ಮೇಲೆ ಕೊಲೆ ಪ್ರಕರಣ ದಾಖಲಾಗಿದೆ.

ಗ್ರಾಮಪಂಚಾಯತ್ ಅಧ್ಯಕ್ಷ

ಯಡಮೊ ಗ್ರಾಮದ ನಿವಾಸಿ ಉದಯ ಗಾಣಿಗ ಎನ್ನುವರು ಎರಡು ದಿನಗಳ ಹಿಂದೆ ಗ್ರಾಮ ಪಂಚಾಯಿತ್ ಲಾಕ್‌ಡೌನ್ ಬಗ್ಗೆ ಸ್ಟೇಟಸ್ ಹಾಕಿದ್ದು, ಗ್ರಾಮಸ್ಥರಿಗೆ ಪೂರಕ ವ್ಯವಸ್ಥೆ ಕಲ್ಪಿಸಿ ಊರಿಗೆ ಬೇಲಿ ಹಾಕಿ ಪೋಸು ಕೊಡಬೇಡಿ, ಕೊರೊನಾ ಪೀಡಿತ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿ ಆಮೇಲೆ ಪ್ರಚಾರ ತಗೊಳ್ಳಿ, ಸರಕಾರ ಸಹಾಯ ಧನ ನುಂಗಬೇಡಿ ಎಂದು ಸ್ಟೇಟಸ್ ಹಾಕಿದ್ದರು ಎನ್ನಲಾಗಿದೆ.

ಉದಯ್ ಗಾಣಿಗ

ಅಲ್ಲದೆ ಗ್ರಾಮಪಂಚಾಯತ್ ನಲ್ಲಿ ನಡೆಯುವ ಅಕ್ರಮಗಳ ಬಗ್ಗೆ ಸಾಮಾಜಿಕ ಜಾಲತಾಣಧಲ್ಲಿ ಬರಹ ಪ್ರಕಟಿಸಿ ಪ್ರಶ್ನಿಸುತ್ತಿದ್ದರು ಎಂದು ಹೇಳಲಾಗಿದ್ದು, ಈ ಹಿನ್ನಲೆ ಉದಯ್ ಗಾಣಿಗ ಅವರ ಮೇಲೆ ಪ್ರಾಣೇಶ್ ಯಡಿಯಾಳ್ ಅವರಿಗೆ ವೈಯಕ್ತಿಕ ದ್ವೇಷ ಇತ್ತು ಎಂದು ಹೇಳಲಾಗಿದೆ.

ಈ ಹಿನ್ನಲೆ ಜೂನ್ 5 ರ ಶನಿವಾರ ಸಂಜೆ ಉದಯ ಗಾಣಿಗ ರಸ್ತೆಯಲ್ಲಿ ನಿಂತಿದ್ದಾಗ ಪ್ರಾಣೇಶ್ ಯಡಿಯಾಳ್ ಅವರ ಕಾರು ಕಾರಿ ಢಿಕ್ಕಿ ಹೊಡೆದಿದ್ದು, ಅಪಘಾತದ ಬಳಿಕ ಪಂಚಾಯತ್ ಅಧ್ಯಕ್ಷ ಸ್ಥಳದಲ್ಲೇ ತಮ್ಮ ಕಾರನ್ನು ಬಿಟ್ಟು ಪರಾರಿಯಾಗಿದ್ದಾರೆ.
ಇದನ್ನು ಗಮನಿಸಿದ ಸಾರ್ವಜನಿಕರು 108 ಆಂಬ್ಯುಲೆನ್ಸ್ ಮೂಲಕ ಕರೆದೊಯ್ಯುವಾಗ ಮಾರ್ಗ ಮಧ್ಯೆ ಉದಯ ಗಾಣಿಗ ಕೊನೆಯುಸಿರೆಳೆದಿದ್ದಾರೆ.

ಈ ಘಟನೆ ಕುರಿತಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಈ ಹಿನ್ನಲೆ ಪ್ರಾಣೇಶ್ ಯಡಿಯಾಳ್ ಅವರನ್ನು ಪೊಲೀಸರು ತಡರಾತ್ರಿ 3 ಗಂಟೆಗೆ ಬಂಧಿಸಿದ್ದಾರೆ.