ಈಝಿ ಆಯುರ್ವೇದ ಆಸ್ಪತ್ರೆ, ಮೊರ್ಗನ್ಸ್ ಗೇಟ್, ಮಂಗಳೂರಿನಲ್ಲಿ, ಜನವರಿ 7 ರಿಂದ 13ರವರೆಗೆ ಉಚಿತ ಪೈಲ್ಸ್, ಫಿಸ್ತುಲಾ ಮತ್ತು ಫಿಜ಼ರ್ ನ ವೈದ್ಯಕೀಯ ಶಿಬಿರ ನಡೆಯಲಿದೆ.
ಪೈಲ್ಸ್ (ಮೂಲವ್ಯಾಧಿ), ಫಿಸ್ಟುಲಾ ಮತ್ತು ಫಿಜ಼ರ್ – ಮಲದ್ವಾರಕ್ಕೆ ಸಂಬಂಧಿಸಿದ ಸಾಮಾನ್ಯ ರೋಗಗಳಾಗಿವೆ. ಪೈಲ್ಸ್ ಎಂದರೆ – ಮಲದ್ವಾರದ ರಕ್ತನಾಳ ಹಿಗ್ಗಿ ತೊಂದರೆ ಕೊಡುವ ರೋಗವಾಗಿದೆ.

ಫಿಸ್ಟುಲಾ ಎಂದರೆ ಮಲದ್ವಾರದ ಬಳಿಯಲ್ಲಿ ಆಗುವ ಕುರುವು ದೊಡ್ದದಾಗಿ ಬೆಳೆದು ತೊಂದರೆ ಕೊಡುವ ರೋಗವಾಗಿದೆ. ಫಿಜ಼ರ್ ಎಂದರೆ ಮಲದ್ವಾರದಲ್ಲಿ ಕತ್ತಿರಿಸಿದಂತಾದ ಗಾಯ.
ಮೂಲವ್ಯಾಧಿಯು ತುಂಬಾ ನೋವನ್ನು ಉಂಟುಮಾಡುವ ರೋಗವಾಗಿದ್ದು, ರೋಗಿಗಳಿಗೆ ತೀವ್ರ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ. ಇದು ಮಲಬದ್ಧತೆ ಅಥವಾ ಗಟ್ಟಿಯಾದ ಮಲ ಎಂಬ ಸರಳ ದೂರಿನಿಂದ ಪ್ರಾರಂಭವಾಗುತ್ತದೆ. ಮೂಲವ್ಯಾಧಿಯು (ಪೈಲ್ಸ್) ಮಲವಿಸರ್ಜನೆಯ ಸಮಯದಲ್ಲಿ ತುಂಬಾ ತೊಂದರೆ ಉಂಟುಮಾಡುತ್ತದೆ ಹಾಗು ರಕ್ತಸ್ರಾವ ಮತ್ತು ಸುಡುವ ಸಂವೇದನೆಯನ್ನು ಸಹ ಉಂಟುಮಾಡುತ್ತದೆ.
ಪುರುಷರಲ್ಲಿ ಫಿಷರ್ ಮುಖ್ಯವಾಗಿ ಗುದ ಕಾಲುವೆಯ ಹಿಂಭಾಗದಲ್ಲಿ ಸಂಭವಿಸುತ್ತದೆ ಮತ್ತು ಮಹಿಳೆಯರಲ್ಲಿ ಇದು ಹಿಂಭಾಗದ ಮಧ್ಯಭಾಗದಲ್ಲಿ ಸಂಭವಿಸುತ್ತದೆ. ಫಿಷರ್ ನ ಮುಖ್ಯ ಲಕ್ಷಣಗಳೆಂದರೆ ನೋವು ಮತ್ತು ಮಲವಿಸರ್ಜನೆಯ ಸಮಯದಲ್ಲಿ ರಕ್ತಸ್ರಾವ.
ಈ ಮೂರು ಸಮಸ್ಯೆಗಳಿಗೂ ಮುಖ್ಯವಾದ ಕಾರಣಗಳೆಂದರೆ :
ಅತಿಯಾಗಿ ಕಟು ಆಹಾರ ಸೇವನೆ, ತಣ್ಣನೆಯ ಅಂದರೆ ರೆಫ್ರಿಜೆರೇಟೆಡ್ ಆಹಾರದ ಅತಿಯಾದ ಸೇವನೆ, ಪದೇ ಪದೇ ಆಹಾರ ತೆಗೆದುಕೊಳ್ಳುವುದು, ಮಸಾಲೆಯುಕ್ತ ಆಹಾರ, ಮದ್ಯಪಾನ, ದೀರ್ಘಾವಧಿಯ ಉಪವಾಸ, ಅತಿಯಾದ ವ್ಯಾಯಾಮ, ತೂಕ ಎತ್ತುವಿಕೆ, ಬಿಸಿ ವಾತಾವರಣ, ಎಣ್ಣೆಯುಕ್ತ ಮತ್ತು ಕರಿದ ಆಹಾರ, ಅತಿಯಾದ ದ್ವಿಚಕ್ರ ವಾಹನ ಸವಾರಿ ಇತ್ಯಾದಿ.
ಈ ಸಮಸ್ಯೆಗಳನ್ನು ತಡೆಗಟ್ಟಲು ಕೆಲವೊಂದು ಉಪಯುಕ್ತ ಸಲಹೆಗಳು:
• ಅತಿಯಾದ ಮಸಾಲೆಯುಕ್ತ ಆಹಾರಗಳು, ಮಲಬದ್ಧತೆಗೆ ಕಾರಣವಾಗುವ ಆಹಾರ
ಹೆಚ್ಚುವರಿ ಬೆಳ್ಳುಳ್ಳಿ, ಮೆಣಸಿನಕಾಯಿ ಮತ್ತು ಆಲೂಗಡ್ಡೆಗಳ ಸೇವನೆಯನ್ನು ತಪ್ಪಿಸುವುದು.
• ಮದ್ಯಪಾನ ಹಾಗು ಧೂಮಪಾನವನ್ನು ತ್ಯಜಿಸುವುದು.
• ಮಲ ತ್ಯಜಿಸುವಾಗ ಜಾಸ್ತಿ ಪ್ರೆಷರ್ ಹಾಕಬಾರದು.
• ಇಂಡಿಯನ್ ಟಾಯ್ಲೆಟ್ ಬಳಸುವುದು ಉತ್ತಮ. ಇದರಿಂದ ಮಲತ್ಯಾಗ ಸರಾಗವಾಗಿ ಆಗುತ್ತದೆ. ಒಂದುವೇಳೆ ವೆಸ್ಟೆರ್ನ್ ಕಮೋಡ್ ಬಳಸುವುದಾದರೆ ಸ್ಕ್ವಾಟ್ ಸ್ಟೂಲ್ ಅನ್ನು ಬಳಸವುದು ಉತ್ತಮ.
• ಅತಿಯಾದ ತಂಪು ಪಾನೀಯ, ಸೋಡ, ಆಲ್ಕೋಹಾಲ್, ಧೂಮಪಾನ ಸೇವನೆಯನ್ನು ತ್ಯಜಿಸುವುದು.
• ಆಹಾರದಲ್ಲಿ ಫೈಬರ್ ಸೇವನೆಯನ್ನು ಹೆಚ್ಚಿಸುವುದು. ಹೂಕೋಸು, ಎಲೆಕೋಸು, ಹಣ್ಣುಗಳು, ಹಸಿರು ಎಲೆಗಳ ತರಕಾರಿಗಳು, ಬಾಳೆಹಣ್ಣು, ಬೀನ್ಸ್, ಮಸೂರ, ಇತ್ಯಾದಿ.
• ಮಲಬದ್ಧತೆಯನ್ನು ನಿರ್ಲಕ್ಷಿಸಬೇಡಿ, ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ತಕ್ಷಣವೇ ಪಡೆಯಬೇಕು.
• ಮಲತ್ಯಾಗದ ಸೂಚನೆ ಸಿಕ್ಕಾಗ ಅದನ್ನು ತಡೆಹಿಡಿಯಬಾರದು.
ದಿನಕ್ಕೆ ಆರರಿಂದ ಎಂಟು ಲೋಟವಾದರೂ ನೀರು ಕುಡಿಯುವುದು
ಒಂದೇ ಜಾಗದಲ್ಲಿ ತಾಸುಗಟ್ಟಲೆ ಕುಳಿತುಕೊಳ್ಳುವುದು
ಅತಿಸಾರವ್ಯಾಧಿಯ ಅಥವಾ ಮಲಬದ್ಧತೆಯ ದೀರ್ಘ ನಿರ್ಲಕ್ಷ್ಯ
ಅತಿಯಾದ, ಕ್ಷಮತೆಗೂ ಮೀರಿದ ಭಾರವನ್ನು ಎತ್ತುವುದು
ನಮ್ಮ ಈಝಿ ಆಯುರ್ವೇದ ಆಸ್ಪತ್ರೆ, ಮೊರ್ಗನ್ಸ್ ಗೇಟ್, ಮಂಗಳೂರಿನಲ್ಲಿ, ಜನವರಿ 7 ರಿಂದ 13ರವರೆಗೆ ಉಚಿತ ಪೈಲ್ಸ್, ಫಿಸ್ತುಲಾ ಮತ್ತು ಫಿಜ಼ರ್ ನ ವೈದ್ಯಕೀಯ ಶಿಬಿರ ನಡೆಯಲಿದೆ.
ಈ ಉಚಿತ ವೈದ್ಯಕೀಯ ಶಿಬಿರದ ಸೇವೆಗಳು :
ವೈದ್ಯರೊಂದಿಗೆ ಉಚಿತ ಸಮಾಲೋಚನೆ ಮತ್ತು ಉಚಿತ ಆಯುರ್ವೇದ ಔಷಧಗಳು
ಶಿಬಿರಕ್ಕೆ ಭೇಟಿ ನೀಡುವವರಿಗೆ ಚಿಕಿತ್ಸೆಗಳ ಮೇಲೆ ಭಾರೀ ರಿಯಾಯಿತಿಗಳು.
ಈ ಶಿಬಿರವು ಡಾ. ಅಭಿನೇತ್ರಿ ಹೆಗ್ಡೆ (BAMS, MS) ಹಾಗು ಡಾ. ಅಶ್ವಿನ್ ಜೆ ಶೆಟ್ಟಿ (BAMS, MS) ಯವರ ನೇತೃತ್ವದಲ್ಲಿ ತಾರೀಕು 7 ಜನವರಿಯಿಂದ 13 ಜನವರಿ ಬೆಳಗ್ಗೆ 9 ರಿಂದ 4 ಗಂಟೆಯವರೆಗೆ ಈಜಿ ಆಯುರ್ವೇದ ಆಸ್ಪತ್ರೆಯಲ್ಲಿ ನಡೆಯಲಿದೆ.
ತಾವೆಲ್ಲರೂ ಈ ಶಿಬಿರದಲ್ಲಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ವಿನಂತಿಸುತ್ತೇವೆ.