ಇಂಗ್ಲೇಂಡ್ ಸೆಪ್ಟೆಂಬರ್ 05: ದಕ್ಷಿಣ ಆಫ್ರಿಕಾ ತಂಡದ ಬ್ಯಾಟ್ಸ್ ಮನ್ ಮ್ಯಾಥ್ಯೂ ಬ್ರೀಟ್ಸ್ ಹೊಸ ವಿಶ್ವದಾಖಲೆ ಸೃಷ್ಟಿಸಿದ್ದಾರೆ. ಓನ್ ಡೇ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಬಳಿಕ ಆಡಿದ 5 ಪಂದ್ಯಗಳಲ್ಲೂ ಅರ್ಧ ಶತಕ ಗಳಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧ ಲಾಡ್ರ್ಸ್ ನಲ್ಲಿ ಗುರುವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಈ ದಾಖಲೆಗೆ ಪಾತ್ರರಾದರು. : ದಕ್ಷಿಣ ಆಫ್ರಿಕಾ ತಂಡದ ಬ್ಯಾಟ್ಸ್ ಮನ್ ಮ್ಯಾಥ್ಯೂ ಬ್ರೀಟ್ಸ್ ಇಲ್ಲಿಯವರೆಗೆ 5 ಏಕದಿನ ಮ್ಯಾಚ್ ಗಳನ್ನು ಆಡಿದ್ದಾರೆ. ಅದರಲ್ಲಿ ಎಲ್ಲದರಲ್ಲೂ ಅರ್ಧಶತಕ ಸಿಡಿಕಿದ್ದಾರೆ. ಐದು ಏಕದಿನ ಪಂದ್ಯಗಳಿಂದ ಅವರು 92.60 ಸರಾಸರಿಯಲ್ಲಿ 463 ರನ್ ಕಲೆಹಾಕಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ ನಾಲ್ಕು ಅರ್ಧಶತಕ ಸೇರಿದ್ದು, 150 ರನ್ ಇವರ ಶ್ರೇಷ್ಠ ಸಾಧನೆಯಾಗಿದೆ.
ದಕ್ಷಿಣ ಆಫ್ರಿಕಾ ಈ ಪಂದ್ಯದಲ್ಲಿ ನಿಗದಿತ 50 ಓವರ್ ಗಳಲ್ಲಿ 330 ರನ್ ಕಲೆಹಾಕಿದರೆ, ಇಂಗ್ಲೆಂಡ್ 9 ವಿಕೆಟ್ ನಷ್ಟಕ್ಕೆ 325 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಮೊದಲ ಪಂದ್ಯವನ್ನೂ ಸೋತಿರುವ ಇಂಗ್ಲೆಂಡ್ ಮೂರು ಪಂದ್ಯಗಳ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಉಳಿದಿರುವಂತೆ 0-2 ಅಂತರದಿಂದ ಸೋತಿದೆ.



