Connect with us

LATEST NEWS

ಕೊರೊನಾ ಆರ್ಥಿಕ ಸಂಕಷ್ಟ ಕೆಲಸಗಾರನ್ನು ಮನೆಗೆ ಕಳುಹಿಸಿದ ಬೆಲ್ ಓ ಸೀಲ್ ಕಂಪೆನಿ

ಕೊರೊನಾ ಆರ್ಥಿಕ ಸಂಕಷ್ಟ ಕೆಲಸಗಾರನ್ನು ಮನೆಗೆ ಕಳುಹಿಸಿದ ಬೆಲ್ ಓ ಸೀಲ್ ಕಂಪೆನಿ

ಉಡುಪಿ ಮೇ.29: ಕೊರೊನಾದಿಂದಾಗಿ ಆರ್ಥಿಕ ಸಂಕಷ್ಟ ನೆಪವೊಡ್ಡಿ ಉಡುಪಿಯ ಖಾಸಗಿ ಕಾರ್ಖಾನೆಯೊಂದು 6 ಜನ ಕೆಲಸಗಾರನ್ನು ಕೆಲಸದಿಂದ ಕಿತ್ತು ಹಾಕಿದೆ.

ಉಡುಪಿ ಸುಬ್ರಮಣ್ಯ ನಗರದಲ್ಲಿರುವ ಬೆಲ್ ಓ ಸೀಲ್ ಎಂಬ ಕಂಪನಿಯಲ್ಲಿ ಈ ಘಟನೆ ನಡೆದಿದ್ದು, ಕೊರೊನಾ ಲಾಕ್ ಡೌನ್ ನಿಂದಾಗಿ ಸದ್ಯ ಕಂಪೆನಿ ಆರ್ಥಿಕ ಸಂಕಷ್ಟದಲ್ಲಿದೆ ಎಂದು ಕಾರಣ ನೀಡಿ 6 ಮಂದಿಯನ್ನು ಕೆಲಸದಿಂದ ವಜಾ ಮಾಡಿದೆ. ಅಲ್ಲದೆ ಈಗ ಇರುವ ಸಿಬ್ಬಂದಿಗಳಿಗೆ ನೀಡಿದ ವಸತಿ ವ್ಯವಸ್ಥೆಯನ್ನು ಕಂಪೆನಿ ಹಿಂದಕ್ಕೆ ಪಡೆದುಕೊಂಡಿದೆ.

ಈ ಹಿನ್ನಲೆ ಕಂಪೆನಿಯ ಉಳಿದ ಕಾರ್ಮಿಕರು ವಜಾ ಮಾಡಿರುವ ಉದ್ಯೋಗಿಗಳನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಿ ಎಂದು ಮೌನ ಪ್ರತಿಭಟನೆ ನಡೆಸಿದ್ದಾರೆ. ಈಗಾಗಲೇ ಕರೊನಾ ರೋಗವಿರುವ ಹಿನ್ನೆಲೆಯಲ್ಲಿ ಬಾಡಿಗೆ ಮನೆಗಳು ಸಿಗುವುದಿಲ್ಲ, ಜನರು ಹೊರಗಿನವರಿಗೆ ಬಾಡಿಗೆ ಮನೆ ಕೊಡುತ್ತಿಲ್ಲ, ಹೀಗಾಗಿ ಕಂಪೆನಿಯ ಕಾರ್ಯಕಾರಿ ನಮ್ಮ ಕಷ್ಟವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸಿಬ್ಬಂದಿಗಳ ಆಗ್ರಹಿಸಿದ್ದಾರೆ.

Facebook Comments

comments