Connect with us

    LATEST NEWS

    ಕುಲಶೇಖರ – 14ನೇ ಮಹಡಿಯಿಂದ ಜಿಗಿದು ಮಹಿಳೆ ಆತ್ಮಹತ್ಯೆ

    ಮಂಗಳೂರು: ಮಂಗಳೂರಿನ ಅಪಾರ್ಟ್ಮಮೆಂಟ್ ಒಂದರ 14ನೇ ಮಹಡಿಯಿಂದ ಮಹಿಳೆಯೊಬ್ಬರು ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕುಲಶೇಖರದಲ್ಲಿ ನಡಿದಿದೆ. ಮೃತರನ್ನು ಮುಂಬೈ ಏರ್ಪೋರ್ಟ್ ನಲ್ಲಿ ಏರ್ ಇಂಡಿಯಾ ಕಂಪೆನಿಯಲ್ಲಿ ಮ್ಯಾನೇಜರ್ ಆಗಿ ನಿವೃತ್ತರಾಗಿರುವ ಪುಷ್ಪಲತಾ ನಾಯಕ್ (64) ಎಂದು ಗುರುತಿಸಲಾಗಿದೆ.


    ಇವರು ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದು, ಗಂಡ ಮತ್ತು ಹೆಂಡತಿ ಮಾತ್ರ ವಾಸವಿದ್ದರು. ಇಂದು ಗಂಡ ಬೆಳಿಗ್ಗೆ ತರಕಾರಿ ತರಲು ಹೋದಾಗ ಇವರು ಕುಲಶೇಖರ ಚೌಕಿಯಲ್ಲಿರುವ ಬಹುಮಹಡಿಗಳ ಅಪಾರ್ಟ್‌ಮೆಂಟ್‌ನ 14ನೇ ಮಹಡಿಯಲ್ಲಿರುವ ಮನೆಯ ಬಾಲ್ಕನಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಮಾನಸಿಕ ಒತ್ತಡದಿಂದ ಬಳಲುತ್ತಿದ್ದರು, ಮೊದಲೊಮ್ಮೆ ಆತ್ಮಹತ್ಯೆಗೆ ಯತ್ನ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply