Connect with us

LATEST NEWS

ಮಾಸ್ಕ್ ಹಾಕಿ ಅಂದರೆ..ಅಧಿಕಾರಿಗಳಿಗೆ ಯಮಲೋಕದ ಕಥೆ ಹೇಳಿದ ಮಹಿಳೆ….!!

ಮಂಗಳೂರು ಎಪ್ರಿಲ್ 23: ಕೊರೊನಾ ಎರಡನೇ ಅಲೆ ಭೀತಿಗೆ ರಾಜ್ಯ ಸರಕಾರ ಮಾಸ್ಕ್ ಜಾಗೃತಿ ನಡೆಸುತ್ತಿದ್ದರೆ, ಇಲ್ಲೊಬ್ಬಳು ಮಾಸ್ಕ್ ಹಾಕಿಕೊಳ್ಳಿ ಅಂದರೆ ನಾನು ಯಮನ ಹತ್ತಿರ ಹೋಗಿ ಬಂದಿದ್ದೇನೆ ಎಂದು ಅಧಿಕಾರಿಗಳಿಗೆ ಕಥೆ ಹೇಳಿದ್ದಾಳೆ.


ಮಂಗಳೂರು ನಗರದ ಕೆ.ಎಸ್.ರಾವ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಪಾಲಿಕೆ ಅಧಿಕಾರಿಗಳು ಮಾಸ್ಕ್ ಹಾಕಲು ಹೇಳಿದ್ದಕ್ಕೆ ಮಹಿಳೆ ಬೇಕಾಬಿಟ್ಟಿ ಮಾತನಾಡಿ, ಹುಚ್ಚಾಟ ಮೆರೆದಿದ್ದಾರೆ. ಅಧಿಕಾರಿಗಳು ಮಾಸ್ಕ್ ಕಾರ್ಯಾಚರಣೆ ನಡೆಸುವ ವೇಳೆ ಮಹಿಳೆಗೆ ಬುದ್ಧಿವಾದ ಹೇಳಿದ್ದಾರೆ. ಈ ವೇಳೆ ಮಹಿಳೆ ಅನುಚಿತವಾಗಿ ವರ್ತಿಸಿದ್ದಾರೆ.


ನಾನು ಯಮ ಲೋಕಕ್ಕೆ ಹೋಗಿ ಬಂದಿದ್ದೇನೆ, ಗದೆ ಹಾಕಿಕೊಂಡು ಯಮಲೋಕಕ್ಕೆ ಹೋಗಿ, 7 ದಿನ ಇದ್ದು ಬಂದಿದ್ದೇನೆ. ಕೊರೊನಾ ನ್ಯೂಸ್ ನಲ್ಲಿ ಬಂದರೆ ಅದು ಡಸ್ಟ್ ಬೀನ್ ಗೆ ಬೀಳುತ್ತದೆ. ಇಲ್ಲದಿದ್ದರೆ ಕೊರೊನಾ ಹೋಗುವುದಿಲ್ಲ. ವೈರಸ್ ಮಾಡಿದ ಥರ್ಡ್ ಕ್ಲಾಸ್ ಯಾರವನು? ಎಂದು ಬೇಕಾಬಿಟ್ಟಿ ಮಾತನಾಡಿದ್ದು, ಮಹಿಳೆಯ ಹುಚ್ಚಾಟ ಕಂಡು ಅಧಿಕಾರಿಗಳಿಗೆ ಫುಲ್ ಶಾಕ್ ಆಗಿದೆ.