ಉಡುಪಿ ಫೆಬ್ರವರಿ 19: ಯಾರೋ ಅಪರಿಚಿತರು ಸಾಮಾಜಿಕ ಜಾಲತಾಣದಲ್ಲಿ ನಿಮಗೆ ಒಡವೆ ಮೊಬೈಲ್ ಪೋನ್ ಗಿಫ್ಟ್ ಪಾರ್ಸೆಲ್ ಬರುತ್ತದೆ ಎಂದು ಹೇಳಿದ್ದನ್ನೆ ನಂಬಿ ಉಡುಪಿಯ ಮಹಿಳೆಯೊಬ್ಬರು ಬರೋಬ್ಬರಿ 7 ಲಕ್ಷ ಹಣ ಕಳೆದುಕೊಂಡ ಘಟನೆ ನಡೆದಿದೆ.

ಪೊಲೀಸ್ ಠಾಣೆಗೆ ನೀಡಿದ ದೂರಿನ ಪ್ರಕಾರ ಮಹಿಳೆ ಸಾಮಾಜಿತ ಜಾಲತಾಣ ಫೇಸ್ ಬುಕ್ ನಲ್ಲಿ ದಿನಾಂಕ 04/02/2026 ರಂದು Amadeo Luca ಎಂಬ ಫೇಸ್ ಬುಕ್ ಖಾತೆಯಿಂದ ಅಪರಿಚಿತ ವ್ಯಕ್ತಿ ಮೆಸೆಜ್ ಮಾಡಿದ್ದಾನೆ. ಅದನ್ನೆ ನಂಬಿ ಇವರು ಚಾಟಿಂಗ್ ಮಾಡಿದ್ದಾರೆ, ಪಳಿಕ ಅಪರಿಚಿತ ವ್ಯಕ್ತಿಗಳು ಮೆಸೆಂಜರ್ ಹಾಗೂ ವಾಟ್ಯಾಪ್ ಮೂಲಕ ಚಾಟ್ ಮಾಡುತ್ತಿದ್ದು ದಿನಾಂಕ 08/02/2026 ರಂದು ಅಪರಿಚಿತ ವ್ಯಕ್ತಿ ನಿಮಗೆ ಬಂಗಾರದ ಒಡವೆ ಮೊಬೈಲ್ ಪೋನ್ ಹಾಗೂ ಇತರೇ ವಸ್ತುಗಳನ್ನ ಕಳುಹಿಸಿ ಕೊಡುವುದಾಗಿ ತಿಳಿಸಿದ್ದಾನೆ. ಅಲ್ಲದೆ ನಿಮಗೆ ಕಳುಹಿಸಿರುವ ಪಾರ್ಸೆಲ್ ನಲ್ಲಿ ಡಾಲರ್ ಇದೆ ಅದಕ್ಕಾಗಿ ನೀವು 45,000/- ಹಣವನ್ನ ಕಟ್ಟಬೇಕು ಎಂದು ಹೇಳಿದ್ದಾನೆ. ಇದನ್ನೆ ನಂಬಿದ ಮಹಿಳೆ ಅಪರಿಚಿತ ಖಾತೆಗೆ NEFT ಮೂಲಕ 45 ಸಾವಿರ ಹಣ ವರ್ಗಾವಣೆ ಮಾಡಿದ್ದಾರೆ. ನಂತರವೂ ಅಪರಿಚಿತರು ಕರೆ ಹಾಗೂ ಮೆಸೇಜ್ ಮೂಲಕ ಟ್ಯಾಕ್ಸ್ ಹಾಗೂ ಇತರೇ ಶುಲ್ಕ ಪಾವತಿ ಮಾಡಬೇಕು ಎಂದು ತಿಳಿಸಿರುತ್ತಾರೆ ಇದನ್ನ ನಂಬಿದ ಪಿರ್ಯಾದಿದಾರರು ತಮ್ಮ ಬ್ಯಾಂಕ್ ಆಫ್ ಬರೋಡಾ ಖಾತೆಯಿಂದ ಹಂತ ಹಂತವಾಗಿ ಒಟ್ಟು 7,10,000/- ರೂಗಳನ್ನು ಅಪರಿಚಿತರು ತಿಳಿಸಿದ ವಿವಿಧ ಖಾತೆಗಳಿಗೆ ಹಣವನ್ನ NEFT And RTGS ಮಾಡಿರುತ್ತಾರೆ.
7 ಲಕ್ಷ ಹಣ ವರ್ಗಾವಣೆ ಮಾಡಿದ ಬಳಿಕವೂ ಮಹಿಳೆಗೆ ಯಾವುದೇ ಪಾರ್ಸೆಲ್ ಬಂದಿಲ್ಲ.ಅಲ್ಲದೆ ಅಪರಿಚಿತರು ಮತ್ತಷ್ಟು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಕೊನೆಗೆ ತಾವು ಮೋಸ ಹೋಗಿರುವುದು ಗೊತ್ತಾಗುತ್ತಿದ್ದಂತೆ ಉಡುಪಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.