ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಹಿಳಾ ಫಾರೆಸ್ಟ್ ಗಾರ್ಡ್ ಗೆ ದಂಡ

ಮಂಗಳೂರು ಅಗಸ್ಟ್ 2: ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನದಲ್ಲಿ ಸಂಚರಿಸಿದ್ದ ಮಹಿಳಾ ಪಾರೆಸ್ಟ್ ಗಾರ್ಡ್ ಒಬ್ಬರಿಗೆ ಸಂಚಾರಿ ಪೊಲೀಸರು ದಂಡ ವಿಧಿಸಿದ್ದಾರೆ.

ಈ ಕುರಿತಂತೆ ಪೋಟೋ ಒಂದು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿತ್ತು, ಉಪ್ಪಿನಂಗಡಿಯಲ್ಲಿ ಫಾರೆಸ್ಟ್ ಗಾರ್ಡ್ ಆಗಿರುವ ಈಮಹಿಳೆ ನಗರದ ಬಲ್ಮಠ ರಸ್ತೆಯಲ್ಲಿ ಹೆಲ್ಮೆಟ್ ಧರಿಸದೆ ಗಂಡನ ಜೊತೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದು, ಇದನ್ನು ನೋಡಿದ ಸಾರ್ವಜನಿಕರು ಪೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು.

ಮೊಬೈಲ್ ಗಳಲ್ಲಿ ಈ ಪೋಟೋ ಹರಿದಾಡುತ್ತಿದ್ದಂತೆ ನಗರದ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬೈಕ್ ನಂಬರ್ ಆಧಾರದಲ್ಲಿ ಪತ್ತೆ ಹಚ್ಚಲಾಯಿತು. ನಂತರ ಫಾರೆಸ್ಟ್ ಗಾರ್ಡ್ ಮಹಿಳೆಯನ್ನು ಠಾಣೆಗೆ ಕರೆಸಿ ದಂಡ ವಿಧಿಸಿ ಕಳುಹಿಸಿಕೊಡಲಾಯಿತು.

Facebook Comments

comments