Connect with us

    KARNATAKA

    ಜಿಮ್ ನಲ್ಲಿ ವ್ಯಾಯಾಮ ಮಾಡುವಾಗ ಕುಸಿದು ಬಿದ್ದು ಮಂಗಳೂರು ಮೂಲದ ಮಹಿಳೆ ಸಾವು

    ಬೆಂಗಳೂರು ಮಾರ್ಚ್ 26: ಜಿಮ್ ನಲ್ಲಿ ವ್ಯಾಯಾಮ ಮಾಡುವಾಗ ಕುಸಿದು ಬಿದ್ದ ಅವಿವಾಹಿತ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬೆಂಗಳೂರಲ್ಲಿ ಸಂಭವಿಸಿದೆ.


    ಮೃತರನ್ನು ಮಂಗಳೂರು ಮೂಲದ ವಿನಯಕುಮಾರಿ(35)​. ಮಲ್ಲೇಶಪಾಳ್ಯದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಇವರು, ಮಲ್ಲೇಶಪಾಳ್ಯದ ಚಾಲೆಂಜ್ ಪಿಟ್​ನೆಸ್ ಸೆಂಟರ್​ನಲ್ಲಿ ವ್ಯಾಯಾಮ ಮಾಡುತ್ತಿದ್ದರು. ವೇಟ್ಸ್​ ಎತ್ತಲು ಹೋದಾಗ ಏಕಾಏಕಿ ಕುಸಿದು ಬಿದ್ದರು.

    ಸ್ಥಳದಲ್ಲಿದ್ದವರು ತಕ್ಷಣ ಆಕೆಯನ್ನ ಮೇಲಕ್ಕೆ ಎತ್ತಿ ಎಚ್ಚರಿಸಲು ಯತ್ನಿಸಿದರೂ ಎಚ್ಚರವಾಗಲಿಲ್ಲ. ಕೂಡಲೇ ಆಸ್ಪತ್ರೆಗೆ ಕರೆದೊಯ್ದರಾದರೂ ಬದುಕಲಿಲ್ಲ. ಜಿಮ್​ನಲ್ಲಿ ವರ್ಕೌಟ್​ ಮಾಡುವಾಗಲೇ ವಿನಯಕುಮಾರಿ ಕುಸಿದು ಬಿದ್ದು ಮೃತಪಟ್ಟ ದೃಶ್ಯ ಜಿಮ್​ ಸೆಂಟರ್​ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಂಗಳೂರು ಮೂಲದ ವಿನಯಕುಮಾರಿ ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply