Connect with us

National

25 ವರ್ಷದ ಮಹಿಳೆ ಮೇಲೆ 100ಕ್ಕೂ ಹೆಚ್ಚು ಪುರುಷರಿಂದ 5000ಕ್ಕೂ ಹೆಚ್ಚು ಬಾರಿ ಅತ್ಯಾಚಾರ..!

ಹೈದರಾಬಾದ್ ಅಗಸ್ಟ್ 22: ಮಹಿಳೆಯರು ಸೇರಿದಂತೆ 139 ಮಂದಿ ನನ್ನ ಮೇಲೆ 5000ಕ್ಕೂ ಹೆಚ್ಚು ಬಾರಿ ಅತ್ಯಾಚಾರ ನಡೆಸಿದ್ದಾರೆ ಎಂದು 25 ವರ್ಷದ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿರುವ ಘಟನೆ ಹೈದಾರಬಾದ್ ನಲ್ಲಿ ನಡೆದಿದೆ.


ಹೈದರಾಬಾದ್ ನ ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಸಂತ್ರಸ್ತ ಮಹಿಳೆ ತನ್ನ ದೂರಿನಲ್ಲಿ ಎಡಪಂಥೀಯ ವಿದ್ಯಾರ್ಥಿ ಸಂಘಟನೆ ಸದಸ್ಯರು, ಸಿನಿಮಾ ಕ್ಷೇತ್ರದವರು, ಪತ್ರಕರ್ತರು, ವೈದ್ಯರು ಅತ್ಯಾಚಾರ ನಡೆಸಿದ್ದಾರೆ. ಇವರ ಪೈಕಿ ಹಲವರು ಅಮೆರಿಕಾ ಮತ್ತು ಬೆಂಗಳೂರಿನಲ್ಲಿ ಇರುವುದಾಗಿ ಹೇಳಿದ್ದಾಳೆ.

ಸಂತ್ರಸ್ತ ಮಹಿಳೆ 2009ರಲ್ಲಿ ವಿವಾಹವಾಗಿದ್ದರು. ನಂತರ ಗಂಡನ ಮನೆಯವರಿಂದ ಲೈಂಗಿಕ ದೌರ್ಜನ್ಯ, ಹಿಂಸೆ ಆರಂಭವಾಗಿತ್ತು. ಈ ಹಿನ್ನೆಲೆಯಲ್ಲಿ ಆಕೆ 2010ರಲ್ಲಿ ಗಂಡನಿಗೆ ವಿಚ್ಛೇದನ ನೀಡಿದ್ದಳು. ಬಳಿಕೆ ಕಾಲೇಜಿಗೆ ಸೇರಿ ವಿದ್ಯಾಭ್ಯಾಸ ಆರಂಭಿಸಿದ್ದಳು.
ಆದರೆ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಮಾತ್ರ ನಿಲ್ಲಲಿಲ್ಲ. ನನ್ನ ಮೇಲೆ ಮಹಿಳೆಯರು ಸಹ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಇನ್ನು ಹಲವರು ಅತ್ಯಾಚಾರ ನಡೆಸಿ ವಿಡಿಯೋ ಮಾಡಿಕೊಂಡು ನನ್ನನ್ನು ಹೆದರಿಸಿ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾರೆ ಎಂದು ಎಫ್ಐಆರ್ ನಿಂದ ತಿಳಿದುಬಂದಿದೆ.

ಮಹಿಳೆಯ ದೂರಿನನ್ವಯ ಪೊಲೀಸರು ಆಕೆಯ ವೈದ್ಯಕೀಯ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ಇದೇ ವೇಳೆ ದೂರಿಗೆ ಸಂಬಂಧಿಸಿದಂತೆ ಸಾಕ್ಷಿಗಳನ್ನು ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Facebook Comments

comments