ವೇಷ ಮರೆಸಿಕೊಂಡು ಶಬರಿಮಲೆ ಪ್ರವೇಶಿದ 39 ವರ್ಷ ವಯಸ್ಸಿನ ಮಹಿಳೆ

ಕೇರಳ ಜನವರಿ 10: ವೇಷ ಮರೆಸಿಕೊಂಡು ಶಬರಿಮಲೆಗೆ ಮಹಿಳೆಯೊಬ್ಬರು ಪ್ರವೇಶಿ ದೇವರ ದರ್ಶನ ಪಡೆದಿದ್ದಾರೆ. 39 ವರ್ಷ ಹರೆಯದ ಮಹಿಳೆಯೊಬ್ಬರು ಕೂದಲಿಗೆ ಬಿಳಿ ಬಣ್ಣ ಬಳಿದು ವಯಸ್ಸಾದವರಂತೆ ವೇಷ ಮಾಡಿಕೊಂಡು ಜನವರಿ 8 ರಂದು ಶಬರಿಮಲೆ ಪ್ರವೇಶ ಮಾಡಿ ದೇವರ ದರ್ಶನ ಪಡೆದಿದ್ದಾರೆ.

ಇತ್ತೀಚೆಗೆ ಕನಕದುರ್ಗಾ ಮತ್ತು ಬಿಂದು ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶ ಮಾಡಿದ ನಂತರ ಸಾಮಾಜಿಕ ಕಾರ್ಯಕರ್ತೆ ಹಾಗೂ ಕೇರಳ ದಲಿತ ಮಹಿಳಾ ವೇದಿಕೆಯ ನಾಯಕಿ ಎಸ್‌.ಪಿ. ಮಂಜು(39) ಪೊಲೀಸರ ನೆರವು ಹಾಗೂ ಅಯ್ಯಪ್ಪ ಭಕ್ತರ ವಿರೋಧ ಇಲ್ಲದೆ ದೇವಾಲಯ ಪ್ರವೇಶ ಮಾಡಿದ್ದಾರೆ. ಈ ಕುರಿತಂತೆ ಫೇಸ್ ಬುಕ್ ಪೇಜ್ ನಲ್ಲಿ ಪೋಟೋ ಹಾಗೂ ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾರೆ.
ಶಬರಿಮಲೆ ಪ್ರವೇಶದ ಸಂದರ್ಭ ಯಾವುದೇ ರೀತಿಯ ತೊಂದರೆಯಾಗದಂತೆ ತಮ್ಮ ಕೂದಲಿಗೆ ವಯಸ್ಸಾದವರಂತೆ ಕಾಣಲು ಮಂಜು ಬಿಳಿ ಬಣ್ಣ ಬಳಿದುಕೊಂಡಿರುವುದನ್ನು ವಿಡಿಯೊದಲ್ಲಿ ಗಮನಿಸಬಹುದು.

ಮಂಗಳವಾರ (ಜನವರಿ 8)ದಂದು 18 ಮೆಟ್ಟಿಲುಗಳನ್ನು ಹತ್ತುವ ಮೂಲಕ ಮಂಜು ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿದ್ದಾರೆ.
ಮಂಜು ಕೊಲ್ಲಂ ಜಿಲ್ಲೆಯ ಚತ್ತನೂರಿನವರು. ಮಂಗಳವಾರ ಬೆಳಗ್ಗೆ 4 ಗಂಟೆ ಪಂಬ ತಲುಪಿದ ಅವರು ಇಬ್ಬರು ಪರಿಚಿತ ಯುವಕರ ಜೊತೆಯಲ್ಲಿ ಸಾಮಾನ್ಯ ಭಕ್ತರಂತೆ ಶಬರಿಮಲೆಯನ್ನು ಹತ್ತಿದ್ದಾರೆ. ಈ ವೇಳೆ ಭಕ್ತರಿಂದ ಯಾವ ವಿರೋಧವು ವ್ಯಕ್ತವಾಗಲಿಲ್ಲ ಎಂದು ಮಂಜು ಹೇಳಿಕೊಂಡಿದ್ದಾರೆ. ಬೆಟ್ಟ ಹತ್ತಲು ಸಹಕರಿಸಿದ್ದ ಯುವಕರೇ ನಾನು ದೇವಾಲಯ ಪ್ರವೇಶ ಮಾಡುವುದನ್ನು ವಿಡಿಯೊ ಮಾಡಿದ್ದಾರೆ. ನಂತರ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ ಎಂದು ಮಂಜು ಹೇಳಿದ್ದಾರೆ.

3 Shares

Facebook Comments

comments