LATEST NEWS
ಮಗಳ ಮೇಲೆ ಕೆಟ್ಟ ದೃಷ್ಟಿ ಇಟ್ಟ ಪತಿಯನ್ನು ಕೊಂದ ಪತ್ನಿ!
ಉತ್ತರ ಪ್ರದೇಶ, ಜನವರಿ 04: ತನ್ನ ಮಗಳ ಮೇಲೆ ಕೆಟ್ಟ ಉದ್ದೇಶ ಇಟ್ಟುಕೊಂಡು ವರ್ತಿಸುತ್ತಿದ್ದ 40 ವರ್ಷದ ಪತಿಯನ್ನೇ ಥಳಿಸಿ ಕೊಂದ ಆರೋಪದ ಮೇಲೆ ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯ ಮಹಿಳೆಯೊಬ್ಬರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸೈನಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸುನೀತಾ ಎಂಬುವವರು ತನ್ನ ಪತಿ ಸುರೇಶ್ ಸಿಂಗ್ ಎಂಬಾತನನ್ನು ಕೋಲಿನಿಂದ ಚೆನ್ನಾಗಿ ಥಳಿಸಿದ್ದಾರೆ. ಈ ವೇಳೆ ಗಂಭೀರವಾಗಿ ಗಾಯಗೊಂಡ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಅಧೀಕ್ಷಕರಾದ ಅಭಿನಂದನ್ ತಿಳಿಸಿದ್ದಾರೆ.
ಮಹಿಳೆಯ ಬಂಧನದ ಬಳಿಕ ಪೊಲೀಸರಿಗೆ ತಿಳಿಸಿರುವ ಮಾಹಿತಿ ಪ್ರಕಾರ, ಆಕೆಯ ಪತಿಯು ಕುಡುಕನಾಗಿದ್ದು, ಮಗಳೊಂದಿಗೆ ಕೆಟ್ಟದಾಗಿ ವರ್ತಿಸುತ್ತಿದ್ದ. ದಂಪತಿ ಮಧ್ಯೆ ಆಗಾಗ್ಗೆ ಇದೇ ವಿಷಯದ ಬಗ್ಗೆ ಜಗಳ ಉಂಟಾಗುತ್ತಿತ್ತು ಎಂದು ತಿಳಿಸಿದ್ದಾರೆ. ಸದ್ಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿರುವುದಾಗಿ ಎಸ್ಪಿ ತಿಳಿಸಿದ್ದಾರೆ.
Facebook Comments
You may like
-
ಸಿಟಿಬಸ್ ಚಾಲಕನ ಮೇಲೆ ಸೀಮೆ ಎಣ್ಣೆ ಸುರಿದು ಹಲ್ಲೆ – ಶೀಘ್ರ ಆರೋಪಿಗಳ ಬಂಧನಕ್ಕೆ ಒತ್ತಾಯ
-
ಧಾರ್ಮಿಕ ಕೇಂದ್ರಗಳಲ್ಲಿ ದುಷ್ಕರ್ಮಿಗಳ ವಿಕೃತಿ – ಪೊಲೀಸ್ ಆಯುಕ್ತರಿಂದ ಪರಿಶೀಲನೆ
-
ಕೊಣಾಜೆ ಮುಲಾರ ಗೋಪಾಲಕೃಷ್ಣ ಭಜನಾ ಮಂದಿರ ಭಗವಾ ಧ್ವಜದ ಮೇಲೆ ವಿಕೃತಿ ಮೆರೆದ ದುಷ್ಕರ್ಮಿಗಳು
-
ಗೋ ರಕ್ಷಕರ ಮೇಲಿನ ಕೇಸ್ ಹಿಂಪಡೆಯಲು ಚಿಂತನೆ – ಸಚಿವ ಪ್ರಭು ಚವ್ಹಾಣ್
-
ಮತ್ತೆ ಮುಂದುವರೆದ ಪುಂಡಾಟಿಕೆ – ಕೊರಗಜ್ಜನ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್…!!
-
ಉಳ್ಳಾಲ ಮಹಿಳೆಗೆ ಅತ್ಯಾಚಾರ ಕಿರುಕುಳ ಆರೋಪ – ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಲಿ :ಎಸ್ಡಿಪಿಐ
You must be logged in to post a comment Login