ಬೆಂಗಳೂರು ಅಕ್ಟೋಬರ್ 10: ಪಕ್ಕದ ಮನೆಯ ಅಜ್ಜಿಯ ಕುತ್ತಿಗೆಯಲ್ಲಿದ್ದ ಚಿನ್ನಕ್ಕಾಗಿ ಅಜ್ಜಿಯನ್ನು ಕೊಲೆ ಮಾಡಿದ ಘಟನೆ ಬೆಂಗಳೂರಿನ ಆನೇಕಲ್‌ನಲ್ಲಿ ನಡೆದಿದೆ.


ದೀಪಾವಳಿ ಹಬ್ಬಕ್ಕೆ ಮಾಡಿದ ಕಜ್ಜಾಯ ನೀಡುತ್ತೇನೆ ಬನ್ನಿ ಎಂದು ಅಜ್ಜಿಯೊಬ್ಬರನ್ನು ಕರೆದ ಅದೇ ಊರಿನ ಮಹಿಳೆ, ಅಜ್ಜಿ ಬಳಿ ಇರುವ ಚಿನ್ನಕ್ಕಾಗಿ ಆಕೆಯನ್ನೇ ಕೊಂದು ಕೆರೆಗೆ ಎಸೆದಿರುವಂತಹ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೂಗೂರು ಬಳಿ ನಡೆದಿದೆ. 68 ವರ್ಷದ ಭದ್ರಮ್ಮ ಮೃತ ದುರ್ದೈವಿ. ಕೊಲೆ ಮಾಡಿದ ಬಳಿಕ ಮೃತದೇಹವನ್ನು ಕೆರೆಗೆ ಎಸೆದಿದ್ದಾರೆ. ಕೊಲೆ ಮಾಡಿರುವ ಚಾಲಾಕಿ ಕಿಲ್ಲರ್ ದೀಪ ಸಿಕ್ಕಿಬಿದ್ದಿದ್ದಾಳೆ.

ಕೂಗೂರಿನ ಭದ್ರಮ್ಮ ಜೊತೆ ಇದೇ ಗ್ರಾಮದ ನಿವಾಸಿಯಾದ ದೀಪಾ ಆತ್ಮೀಯಳಾಗಿದ್ಲು. ಆದರೆ ಅದಾಗಲೇ ವೃದ್ಧೆಯ ಮೇಲೆ ದೀಪಾಳ ಕೆಟ್ಟ ಕಣ್ಣು ಬಿದ್ದಿತ್ತು. ಅಂದಾಗೆ ಅಕ್ಟೋಬರ್ 30ರ ಮಧ್ಯಾಹ್ನದಿಂದ ವೃದ್ಧೆ ಭದ್ರಮ್ಮ ಕಾಣೆಯಾಗಿದ್ರು. ಎಲ್ಲೆಡೆ ಹುಡುಕಿದ್ರೂ ಪತ್ತೆಯಾಗಿರಲಿಲ್ಲ. ಹಾಗಾಗಿ ವೃದ್ಧೆಯ ಕುಟುಂಬಸ್ಥರು ಮರುದಿನ ಸರ್ಜಾಪುರ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ಕಜ್ಜಾಯ ಕೊಡೋ ನೆಪದಲ್ಲಿ ಮನೆಗೆ ಕರೆದುಕೊಂಡು ಹೋಗಿ ವೃದ್ಧೆಯನ್ನ ದೀಪಾ ಕೊ* ಮಾಡಿದ್ಲು. ವೃದ್ಧೆ ಬಳಿ ಇದ್ದ ಚಿನ್ನದ ಸರಕ್ಕಾಗಿ ಕೊ* ಮಾಡಿರೋದು ಗೊತ್ತಾಗಿದೆ. ಕೊ* ಮಾಡಿದ ಬಳಿಕ ವೃದ್ಧೆ ಭದ್ರಮ್ಮಳ ಶವವನ್ನು ಮೂಟೆ ಕಟ್ಟಿ ಮನೆಯಲ್ಲಿಟ್ಟುಕೊಂಡಿದ್ಲು. ಎರಡು ದಿನಗಳ ಕಾಲ ಮನೆಯಲ್ಲಿಯೇ ಇದ್ದ ವೃದ್ಧೆಯ ಮೃತದೇಹದ ವಾಸನೆ ಹೆಚ್ಚಾದಾಗ ಮತ್ತೊಂದು ಚೀಲಕ್ಕೆ ಹಾಕಿದ್ಲು. ಕಸ ಇದೆ ಎಸೆದು ಬರೋಣ ಅಂತ ಮಗನನ್ನ ಕರೆಸಿ ದೊಡ್ಡತಿಮ್ಮಸಂದ್ರ ಕೆರೆಯ ಪೊದೆಯಲ್ಲಿ ಮೂಟೆಯನ್ನ ಎಸೆದು ಹೋಗಿದ್ಲು. ಮನೆಗೆ ಹೋಗಿ ಏನು ತಿಳಿಯದಂತೆ ಡ್ರಾಮಾ ಮಾಡಿದ್ದ ದೀಪಾ, ವೃದ್ಧೆ ಮನೆಯವರು ಕೇಳಿದಾಗ ನನ್ನ ಮನೆಗೆ ಬಂದು ವಾಪಸ್ ಹೋದ್ರು ಅಂಥ ಕಥೆ ಕಟ್ಟಿದ್ಲು. ಇತ್ತ ಪೊಲೀಸರ ವಿಚಾರಣೆ ವೇಳೆ ಕೊನೆಯದಾಗಿ ದೀಪಾ ಮನೆಗೆ ವೃದ್ಧೆ ಹೋಗಿದ್ದು ಕನ್ಫರ್ಮ್ ಆಗಿತ್ತು. ದೀಪಾಳನ್ನ ಕರೆತಂದು ಪೊಲೀಸರು ತಮ್ಮದೇ ಸ್ಟೈಲಿನಲ್ಲಿ ವಿಚಾರ ಮಾಡಿದಾಗ ಹಂತಕಿ ಕೊ* ರಹಸ್ಯ ಬಾಯ್ಬಿಟ್ಟಿದ್ದಾಳೆ.

Share Information