Connect with us

KARNATAKA

ಶಿವಮೊಗ್ಗ – ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

ಶಿವಮೊಗ್ಗ ಮೇ 23: ಶಿವಮೊಗ್ಗದಲ್ಲಿ ಅಪರೂಪದ ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬರು ನಾಲ್ಕು ಮಕ್ಕಳಿಗೆ ಜನ್ಮನೀಡಿದ್ದಾರೆ. ಭದ್ರಾವತಿ ತಾಲೂಕಿನ ತಡಸಾ ಗ್ರಾಮದ ಆರೀಫ್‌ರವರ ಪತ್ನಿ, 22 ವರ್ಷ ವಯಸ್ಸಿನ ಅಲ್ಮಾಜ್​ ಬಾನುರವರು 4 ಮಕ್ಕಳಿಗೆ ಜನ್ಮ ನೀಡಿದ್ದಾರೆ.


ಶಿವಮೊಗ್ಗ ನಗರದ ಸರ್ಜಿ ಆಸ್ಪತ್ರೆಯಲ್ಲಿ 4 ಮಕ್ಕಳಿಗೆ ಜನ್ಮ ನೀಡಿರುವುದು ವಿಶೇಷವಾಗಿದೆ. ಹೆರಿಗೆಯಾದ 2 ಗಂಡು ಮತ್ತು 2 ಹೆಣ್ಣು ಮಕ್ಕಳು ಹಾಗೂ ತಾಯಿ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ.   ವೈದ್ಯಕೀಯ ಕ್ಷೇತ್ರದ ಪ್ರಕಾರ ಒಟ್ಟಿಗೆ 4 ಮಕ್ಕಳಿಗೆ ಜನ್ಮ ನೀಡುವ ಪ್ರಕರಣಗಳು ತುಂಬಾ ವಿರಳ. 5.12 ಲಕ್ಷ ಜನರಲ್ಲಿ ಒಬ್ಬರು ಮಾತ್ರ ಈ ರೀತಿ 4 ಮಕ್ಕಳಿಗೆ ಜನ್ಮ ನೀಡುವುದು ಕಂಡು ಬರುತ್ತದೆ.

Advertisement
Click to comment

You must be logged in to post a comment Login

Leave a Reply