Connect with us

    LATEST NEWS

    ಬೆಲ್ಜಿಯಂ- ಚಿಂಪಾಂಜಿ ಜೊತೆ ಮಹಿಳೆ ಲವ್ ಅಫೇರ್

    ಬೆಲ್ಜಿಯಂ : ಮಹಿಳೆಯೊಬ್ಬರು ಚಿಂಪಾಂಜಿ ಜೊತೆ ಲವ್ ನಲ್ಲಿ ಬಿದ್ದಿರುವ ವಿಚಿತ್ರ ಘಟನೆ ಬೆಲ್ಜಿಯಂ ನಲ್ಲಿ ನಡೆದಿದೆ. ಚಿಂಪಾಂಜಿ ಮತ್ತು ಮಹಿಳೆ ಲವ್ ಸ್ಟೋರಿ ಕೇಳಿ ಮೃಗಾಲಯದ ಸಿಬ್ಬಂದಿ ಮಹಿಳೆಗೆ ಮೃಗಾಲಯಕ್ಕೆ ಬರದಂತೆ ನಿಷೇಧ ಹೇರಿದ್ದಾರೆ.


    ಉತ್ತರ ಬೆಲ್ಜಿಯಂನಲ್ಲಿರುವ ಆಂಟ್‌ವಾರ್ಪ್‌ ಮೃಗಾಲಯಕ್ಕೆ ಕಳೆದ 4 ವರ್ಷಗಳಿಂದ ಆಡಿ ಟಿಮ್ಮರ್‌ಮ್ಯಾನ್ಸ್‌ ಎಂಬ ಮಹಿಳೆ ಪ್ರತಿ ವಾರಕ್ಕೊಮ್ಮೆ ಭೇಟಿ ನೀಡುತ್ತಿದ್ದರಂತೆ. ಈ ವೇಳೆ ಅವರಿಗೆ ಮೃಗಾಲಯದಲ್ಲಿನ ಚಿತಾ ಹೆಸರಿನ 38 ವರ್ಷದ ಚಿಂಪಾಂಜಿಯೊಡನೆ ಆಕೆಗೆ ವಿಶೇಷ ನಂಟು ಬೆಳೆದಿದೆಯಂತೆ.

    ಪರಿಣಾಮ ಆ ಚಿಂಪಾಂಜಿ ಬೇರೆ ಚಿಂಪಾಂಜಿಗಳೊಡನೆ ಕಾಲ ಕಳೆಯುವುದನ್ನೇ ನಿಲ್ಲಿಸಿಬಿಟ್ಟಿದೆ. ಇದರಿಂದ ಗಲಿಬಿಲಿಗೊಂಡ ಮೃಗಾಲಯದ ಅಧಿಕಾರಿಗಳಿಗೆ ಚಿಂಪಾಂಜಿಗೆ ಏನಾಗಿರಬಹುದು ಅಂತಾ ತಲೆಕೆಡಿಸಿಕೊಂಡಿದ್ದಾರೆ. ಮಹಿಳೆ ಚಿಂಪಾಂಜಿಯೊಡನೆ ಸಂಬಂಧ ಹೊಂದಿದ್ದಾರೆಂಬ ವಿಷಯ ಗೊತ್ತಾದ ತಕ್ಷಣ ಅಧಿಕಾರಿಗಳು ಮಹಿಳೆಯನ್ನು ಭೇಟಿಯಾಗಿ ಹೀಗೆ ಮಾಡದಂತೆ ಮನವಿ ಮಾಡಿಕೊಂಡಿದ್ದಾರೆ.

    ಅಲ್ಲದೆ ಚಿಂಪಾಂಜಿಯೊಡನೆ ನೀವು ಈ ರೀತಿ ಹೆಚ್ಚು ಹೊತ್ತು ಕಾಲ ಕಳೆಯುತ್ತಿರುವುದು ಸರಿಯಲ್ಲ. ಇದು ಚಿಂಪಾಂಜಿಯ ಸಹಜ ಬೆಳವಣಿಗೆಯ ಮೇಲೆ ಪರಿಣಾಮ ಬೀರಲಿದೆ ಎಂದು ಸದ್ಯ ಮೃಗಾಲಯಕ್ಕೆ ಬರದಂತೆ ಆದೇಶಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply